ಐಪಿಎಲ್ ಕಾವು ಏರುವ ಮುನ್ನವೇ ಭರ್ಜರಿ ಹೆಜ್ಜೆಗಳನ್ನು ಇಟ್ಟ ಲಕ್ನೋ ತಂಡ. ತೆಗೆದುಕೊಂಡ ಮಹತ್ವದ ಮೂರು ನಿರ್ಣಯಗಳು ಯಾವ್ಯಾವು ಗೊತ್ತೇ??

ಐಪಿಎಲ್ ಕಾವು ಏರುವ ಮುನ್ನವೇ ಭರ್ಜರಿ ಹೆಜ್ಜೆಗಳನ್ನು ಇಟ್ಟ ಲಕ್ನೋ ತಂಡ. ತೆಗೆದುಕೊಂಡ ಮಹತ್ವದ ಮೂರು ನಿರ್ಣಯಗಳು ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಅತ್ಯಂತ ರೋಚಕವಾಗಿರುವುದು ನಿಮಗೆ ತಿಳಿದಿರುವ ವಿಷಯ. ಈ ಭಾರಿ ಎರಡು ಹೊಸ ಫ್ರಾಂಚೈಸಿಗಳು ಸಹ ಸೇರಿದೆ. ಡಿಸೆಂಬರ್ 25 ರಂದು ಎರಡು ಫ್ರಾಂಚೈಸಿಗಳು ತಮ್ಮ ಹೆಸರು , ಲೋಗೋವನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ಹರಾಜಿಗೂ ಮುನ್ನ ಇತರ ತಂಡಗಳಿಗೆ ಹೋಲಿಸಿದರೇ ಮೂರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಇತರ ತಂಡಗಳಿಗೆ ನಡುಕ ಹುಟ್ಟಿಸಿದೆ. ಬನ್ನಿ ಆ ಪ್ರಮುಖ ನಿರ್ಧಾರಗಳು ಯಾವುವು ಎಂದು ತಿಳಿಯೋಣ.

1.ಕೋಚ್ ಆಗಿ ಆಂಡಿ ಫ್ಲವರ್ ನೇಮಕ : ಲಕ್ನೋ ತಂಡದ ಕೋಚ್ ಆಗಿ ಜ್ವಿಂಬಾಬೆಯ ಮಾಜಿ ಕ್ರಿಕೇಟಿಗ ಆಂಡಿ ಫ್ಲವರ್ ರವರನ್ನು ನೇಮಿಸಿದೆ. ಫ್ಲವರ್ ಈ ಹಿಂದೆ ದುರ್ಬಲ ತಂಡವಾಗಿದ್ದ ಇಂಗ್ಲೆಂಡ್ 2010ರಲ್ಲಿ ಟಿ 20 ವಿಶ್ವಕಪ್ ಗೆದ್ದಾಗ ಕೋಚ್ ಆಗಿದ್ದರು. ಅದಲ್ಲದೇ ಬೇರೆ ದೇಶಗಳಲ್ಲಿ ನಡೆಯುವ ಕ್ರಿಕೇಟ್ ಲೀಗ್ ಗಳಲ್ಲಿಯೂ ಇವರು ಕೋಚ್ ಆಗಿದ್ದ ತಂಡಗಳು ಚಾಂಪಿಯನ್ ಆಗಿವೆ. ಹೀಗಾಗಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ.

2.ಮೆಂಟರ್ ಆಗಿ ಗೌತಮ್ ಗಂಭೀರ್ ಆಯ್ಕೆ – ಲಕ್ನೋ ತಂಡದ ಮೆಂಟರ್ ಆಗಿ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ರವರನ್ನ ಲಕ್ನೋ ಫ್ರಾಂಚೈಸಿ ಆಯ್ಕೆ ಮಾಡಿದೆ. ಗಂಭೀರ್ ಈ ಹಿಂದೆ 2014 ರಲ್ಲಿ ಕಳಪೆ ತಂಡ ಎಂದು ಹೆಸರು ಮಾಡಿದ್ದ ಕೆ.ಕೆ.ಆರ್ ತಂಡದ ನಾಯಕತ್ವವಹಿಸಿ ಆ ವರ್ಷ ಚಾಂಪಿಯನ್ ಆಗುವಂತೆ ಮಾಡಿದ್ದರು. ಹಾಗಾಗಿ ಗಂಭೀರ್ ಆಯ್ಕೆ ಸಹ ಮಹತ್ವದ್ದಾಗಿದೆ.

3.ನಾಯಕನಾಗಿ ಕೆ.ಎಲ್.ರಾಹುಲ್ – ಲಕ್ನೋ ತಂಡದ ನಾಯಕನಾಗಿ ಕೆ.ಎಲ್.ರಾಹುಲ್ ಆಯ್ಕೆ ಖಚಿತವಾಗಿದೆ. ಸದ್ಯ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್ ನಲ್ಲಿರುವ ರಾಹುಲ್ ಸದ್ಯ ಟೀಮ್ ಇಂಡಿಯಾದ ಉಪನಾಯಕರಾಗಿದ್ದಾರೆ. ಎರಡು ಸೀಸನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನ ಮುನ್ನಡೆಸಿದ ಅನುಭವ ರಾಹುಲ್ ಗೆ ಇದೆ. ಹೀಗಾಗಿ ಎಲ್ಲಾ ಫ್ರಾಂಚೈಸಿಗಳಿಗಿಂತ, ಲಕ್ನೋ ಫ್ರಾಂಚೈಸಿ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.