ಕೊನೆಗೂ ಫೈನಲ್ ಆಗಿ ನಿಗದಿಯಾಯ್ತು ಐಪಿಎಲ್ ಆಟಗಾರರ ಹರಾಜಿನ ದಿನಾಂಕ, ಯಾವಾಗ ಗೊತ್ತೇ?? ಐಪಿಎಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ.

ಕೊನೆಗೂ ಫೈನಲ್ ಆಗಿ ನಿಗದಿಯಾಯ್ತು ಐಪಿಎಲ್ ಆಟಗಾರರ ಹರಾಜಿನ ದಿನಾಂಕ, ಯಾವಾಗ ಗೊತ್ತೇ?? ಐಪಿಎಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ.

ನಮಸ್ಕಾರ ಸ್ನೇಹಿತರೇ ಐಪಿಎಲ್ 15 ನೇ ಆವೃತ್ತಿ ಈ ಹಿಂದಿನ ಆವೃತ್ತಿಗಿಂತಲೂ ಬಹಳಷ್ಟು ಕುತೂಹಲವನ್ನು ಹೆಚ್ಚಿಸಿದೆ. ಹೊಸದಾಗಿ ಎರಡು ಫ್ರಾಂಚೈಸಿಗಳು ಸೇರಿರುವುದು ಹಾಗೂ ಆಟಗಾರರ ಸಾರ್ವತ್ರಿಕ ಹರಾಜು ನಡೆಯುತ್ತಿರುವುದರಿಂದ ಬಹಳಷ್ಟು ರೋಚಕವಾಗಿದೆ. ಹೊಸದಾಗಿ ಸೇರಿರುವ ಫ್ರಾಂಚೈಸಿಗಳಾದ ಅಹಮದಾಬಾದ್ ಹಾಗೂ ಲಕ್ನೋ ತಂಡಗಳಿಗೆ ಹರಾಜಿಗಿಂತ ಮುಂಚೆ ಮೂವರು ಆಟಗಾರರ ಪಟ್ಟಿಯನ್ನ ಡಿಸೆಂಬರ್ 25 ರೊಳಗೆ ಬಿಡುಗಡೆ ಮಾಡಿ ಎಂದು ಹೇಳಿತ್ತು.

ಆ ನಿಟ್ಟಿನಲ್ಲಿ ಎರಡು ಫ್ರಾಂಚೈಸಿಗಳು ಕೆಲವೇ ದಿನಗಳಲ್ಲಿ ಮೂವರು ಆಟಗಾರರ ಪಟ್ಟಿಯನ್ನ ಅಧಿಕೃತವಾಗಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇನ್ನು ಆಟಗಾರರ ಹರಾಜನ್ನು ಜನೇವರಿ ಎರಡನೇ ವಾರದಲ್ಲಿ ಮಾಡುವುದಾಗಿ ಬಿಸಿಸಿಐ ಈ ಹಿಂದೆ ಘೋಷಿಸಿತ್ತು. ಆದರೇ ಈಗ ಅಹಮದಾಬಾದ್ ಫ್ರಾಂಚೈಸಿಯ ಇನ್ನು ಕೆಲವು ಕೆಲಸಗಳು ಬಾಕಿ ಇರುವ ಕಾರಣ, ಹರಾಜಿನ ದಿನಾಂಕವನ್ನು ಮುಂದೂಡಲಾಗಿದೆ.

ಮೂಲಗಳ ಪ್ರಕಾರ ಆಟಗಾರರ ಹರಾಜು ಫೆಬ್ರವರಿ 15ರ ನಂತರ ನಡೆಯಲಿದೆ ಎಂದು ಹೇಳಲಾಗಿದೆ. ಈ ಭಾರಿಯ ಹರಾಜು ಮುಂಬೈ ಬದಲು, ಚೆನ್ನೈ ಅಥವಾ ಬೆಂಗಳೂರಿನಲ್ಲಿ ನಡೆಯಬಹುದು. ಆದರೇ ಆಟಗಾರರ ಹರಾಜಿನ ನೇರ ಪ್ರಸಾರವನ್ನು ಚಾನೆಲ್ ಗಳಲ್ಲಿ ಟೆಲಿಕಾಸ್ಟ್ ಮಾಡುವುದರ ಬಗ್ಗೆ ಬಿಸಿಸಿಐಗೆ ಇನ್ನು ಸಾಕಷ್ಟು ಗೊಂದಲ ಇದೆ. ಒಟ್ಟಿನಲ್ಲಿ ನೆಚ್ಚಿನ ಫ್ರಾಂಚೈಸಿಗಳಿಗೆ ಯಾವ ಯಾವ ಆಟಗಾರರು ಸೇರಿದ್ದಾರೆಂಬುದನ್ನ ತಿಳಿದುಕೊಳ್ಳಲು , ಐಪಿಎಲ್ ಅಭಿಮಾನಿಗಳು ಫೆಬ್ರವರಿ ಎರಡನೇ ವಾರದ ತನಕ ಕಾಯುವುದು ಅನಿವಾರ್ಯವಾಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.