ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್ ಘೋಷಣೆ ಮಾಡಿದ ಏರ್ಟೆಲ್, ಹೊಸ ಪ್ಲಾನ್ ಪರಿಚಯ. ಕಡಿಮೆ ಬೆಲೆಯಲ್ಲಿ ಎಷ್ಟೆಲ್ಲ ಸಿಗುತ್ತದೆ ಗೊತ್ತೇ??

ಗ್ರಾಹಕರಿಗೆ ಮತ್ತೊಂದು ಬಂಪರ್ ಆಫರ್ ಘೋಷಣೆ ಮಾಡಿದ ಏರ್ಟೆಲ್, ಹೊಸ ಪ್ಲಾನ್ ಪರಿಚಯ. ಕಡಿಮೆ ಬೆಲೆಯಲ್ಲಿ ಎಷ್ಟೆಲ್ಲ ಸಿಗುತ್ತದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಎಲ್ಲಾ ಸಂಸ್ಥೆಗಳು ಕೂಡ ಟೆಲಿಕಾಂ ಸೇವೆಗಳ ವಿಚಾರದಲ್ಲಿ ದರವನ್ನು ಹೆಚ್ಚು ಮಾಡಿರುವುದು ಎಲ್ಲರಿಗೂ ಕೂಡ ತಿಳಿದಿರುವ ವಿಚಾರವಾಗಿದೆ. ಇನ್ನು ಈ ಸಾಲಿನಲ್ಲಿ ಏರ್ ಟೆಲ್ ಸಂಸ್ಥೆ ಕೂಡ ಸೇರಿದೆ. ಏರ್ ಟೆಲ್ ಸಂಸ್ಥೆ ಈಗ ಹೊಸದೊಂದು ರಿಚಾರ್ಜ್ ಸೇವೆಯನ್ನು ಕೂಡ ಈಗಾಗಲೇ ಪರಿಚಯಿಸಿದೆ. ಹೌದು ಏರ್ ಟೆಲ್ ಈಗಾಗಲೇ ತನ್ನ ಪ್ರೀಪೇಡ್ ಸೇವೆಗಳಿಗೆ 666 ರೂಪಾತಿ ರಿಚಾರ್ಜ ಯೋಜನೆಯನ್ನು ಕೂಡ ಪರಿಚಯಿಸಿದೆ.

ಹೌದು ಗೆಳೆಯರೇ ಏರ್ ಟೆಲ್ ಟೆಲಿಕಾಂ ಸಂಸ್ಥೆ 666 ರೂಪಾಯಿ ರೀಚಾರ್ಜ್ ಯೋಜನೆಯನ್ನು ಪ್ರಿಪೇಯ್ಡ್ ನಲ್ಲಿ ಪರಿಚಯಿಸಿದ್ದು ಇದರ ಲಾಭಗಳು ಏನು ಹಾಗೂ ಇದರ ಪ್ರಯೋಜನಗಳು ಏನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಲೇಖನಿಯನ್ನು ಕೊನೆಯವರೆಗೆ ಓದಿ. ಏರ್ ಟೆಲ್ ಟೆಲಿಕಾಂ ಸಂಸ್ಥೆಯು 666 ರೂಪಾಯಿ ರೀಚಾರ್ಜ್ ಪ್ಲ್ಯಾನ್ ನಲ್ಲಿ 77 ದಿನಗಳಲ್ಲಿ ವ್ಯಾಲಿಡಿಟಿ ಸೇವೆಯನ್ನು ಹೊಂದಿದೆ. ನಿಮಗೆ 77 ದಿನಗಳಲ್ಲಿ ಪ್ರತಿದಿನ 1.5 ಜಿಬಿ ಡೇಟಾವನ್ನು ಕೂಡ ಗ್ರಾಹಕರು ಹೊಂದಬಹುದಾಗಿದೆ.

ಅನ್ಲಿಮಿಟೆಡ್ ಟಾಕ್ ಟೈಮ್ ಕೂಡ ಈ ರಿಚಾರ್ಜ್ ಪ್ಲಾನ್ ನಲ್ಲಿ ಸಿಗಲಿದೆ. ಪ್ರತಿದಿನ 100 ಮೆಸೇಜ್ ಗಳನ್ನು ಕೂಡ ಮಾಡಬಹುದಾಗಿದೆ. ವಿಂಕ್ ಮ್ಯೂಸಿಕ್ ಹಾಗೂ ಉಚಿತ ಹಲೋ ಟ್ಯೂನ್ ಪ್ರಯೋಜನಗಳು ಕೂಡ ಈ ರಿಚಾರ್ಜ್ ಪ್ಲಾನ್ ನಲ್ಲಿ ಸಿಗಲಿದೆ. ಇಷ್ಟು ಮಾತ್ರವಲ್ಲದೆ ಫಾಸ್ಟ್ಯಾಗ್ ನಲ್ಲಿ 100 ರೂಪಾಯಿ ಕ್ಯಾಶ್ ಬ್ಯಾಕ್ ಕೂಡ ಗ್ರಾಹಕರಿಗೆ ದೊರೆಯಲಿದೆ. ಇನ್ನು ಇದೇ ರೀತಿ 299ರಲ್ಲಿ 28ದಿನಗಳ ವ್ಯಾಲಿಡಿಟಿ, 359 ರಲ್ಲಿ ದಿನಕ್ಕೆ 2ಜಿಬಿಯಂತೆ 28 ದಿನಗಳ ವ್ಯಾಲಿಡಿಟಿ. 479 ರಲ್ಲಿ 54 ದಿನಗಳ ವ್ಯಾಲಿಡಿಟಿ, 549 ರಲ್ಲಿ 2ಜಿಬಿಯಂತೆ 56 ದಿನಗಳ ವ್ಯಾಲಿಡಿಟಿ. 719 ರಲ್ಲಿ 84 ದಿನಗಳ ವ್ಯಾಲಿಡಿಟಿ ಹಾಗೂ 839 ರಲ್ಲಿ 2 ಜಿಬಿಯಂತೆ 84 ದಿನಗಳ ವ್ಯಾಲಿಡಿಟಿ ಕೂಡ ಸಿಗಲಿದ್ದು. ಇನ್ನು ಇದೇ ತರಹದ ಇನ್ನೂ ಅನೇಕ ರಿಚಾರ್ಜ್ ಪ್ಲಾನ್ ಗಳನ್ನು ಏರ್ ಟೆಲ್ ಟೆಲಿಕಾಂ ಸಂಸ್ಥೆ ಇತ್ತೀಚೆಗೆ ಹೊಸದಾಗಿ ಪರಿಚಯಿಸಿದೆ.