ಕಳೆದಬಾರಿ ಹರಾಜಿಗೂ ಮೊದಲೇ ಮ್ಯಾಕ್ಸ್ವೆಲ್ ಗೆ ಪ್ಲಾನ್ ಮಾಡಿದಂತೆ ಈ ಬಾರಿ ಹರಾಜಿಗೂ ಮೊದಲೇ ಕಣ್ಣಿಟ್ಟಿರುವ 6 ಆಟಗಾರರು ಯಾರ್ಯಾರು ಗೊತ್ತೇ??

ಕಳೆದಬಾರಿ ಹರಾಜಿಗೂ ಮೊದಲೇ ಮ್ಯಾಕ್ಸ್ವೆಲ್ ಗೆ ಪ್ಲಾನ್ ಮಾಡಿದಂತೆ ಈ ಬಾರಿ ಹರಾಜಿಗೂ ಮೊದಲೇ ಕಣ್ಣಿಟ್ಟಿರುವ 6 ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಭಾರಿಯ ಐಪಿಎಲ್ ಗೆ ಎಲ್ಲಾ ಫ್ರಾಂಚೈಸಿಗಳು ಸಾಕಷ್ಟು ಸಿದ್ದತೆ ನಡೆಸಿವೆ. ಅದರಲ್ಲೂ ಆಟಗಾರರ ಸಾರ್ವತ್ರಿಕ ಹರಾಜು ಇರುವ ಕಾರಣ, ಫ್ರಾಂಚೈಸಿಗಳು ತಮ್ಮ ಕನಸಿನ ತಂಡ ಕಟ್ಟಲು ಬ್ಲೂ ಪ್ರಿಂಟ್ ನ್ನು ರೆಡಿ ಮಾಡಿಟ್ಟುಕೊಂಡಿವೆ.ಆರ್ಸಿಬಿ ತಂಡ ಸದ್ಯ ವಿರಾಟ್ ಕೊಹ್ಲಿ,ಮಹಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸವೆಲ್ ರನ್ನ ರಿಟೇನ್ ಮಾಡಿಕೊಂಡಿದೆ. ಅದಲ್ಲದೇ ಹರಾಜಿನಲ್ಲಿ ಕೆಲವು ಆಟಗಾರರ ಮೇಲೆ ಕಣ್ಣಿಟ್ಟು ಅವರನ್ನ ಖರೀದಿಸಲು ಒಂದು ಪಟ್ಟಿಯನ್ನು ತಯಾರಿಸಿದೆ. ಬನ್ನಿ ಆ ಆಟಗಾರರು ಯಾರು ಎಂದು ತಿಳಿಯೋಣ.

1.ಬೆನ್ ಸ್ಟೋಕ್ಸ್ – ಇಂಗ್ಲೆಂಡ್ ನ ಆಲ್ ರೌಂಡರ್ ಸ್ಟೋಕ್ಸ್ ಈ ಭಾರಿ ಹರಾಜಿಗೆ ಲಭ್ಯರಿದ್ದಾರೆ‌. ನಾಲ್ಕು ಓವರ್ ಬೌಲಿಂಗ್ ಮಾಡುವ ಹಾಗೂ ಉತ್ತಮ ಬ್ಯಾಟ್ಸಮನ್ ಆಗಿರುವ ಸ್ಟೋಕ್ಸ್ ಆರ್ಸಿಬಿಯ ಮೊದಲ ಆಯ್ಕೆಯಾಗಿದ್ದಾರೆ.ಇವರ ಮೇಲೆ ಆರ್ಸಿಬಿ ವಿಶೇಷ ಕಣ್ಣಿಟ್ಟಿದೆ.

2.ಜೋಫ್ರಾ ಆರ್ಚರ್ – ಇಂಗ್ಲೆಂಡ್ ನ ಮತ್ತೊಬ್ಬ ಘಾತಕ ವೇಗಿ ಮೇಲೂ ಸಹ ಆರ್ಸಿಬಿ ಕಣ್ಣಿಟ್ಟಿದೆ. ಟಿ 20 ಯಲ್ಲಿ ತಮ್ಮ ಕರಾರುವಕ್ಕು ಯಾರ್ಕರ್ ಗಳಿಂದ ಫಲಿತಾಂಶ ಬದಲಾಯಿಸಬಲ್ಲ ಸಾಮರ್ಥ್ಯ ಆರ್ಚರ್ ಗಿದೆ. ಸಿರಾಜ್ ಗೆ ಒಬ್ಬ ಉತ್ತಮ ಸಾಥ್ ನೀಡಲು ಜೋಫ್ರಾ ಆರ್ಚರ್ ಅಗತ್ಯ ಆರ್ಸಿಬಿಗಿದೆ.

3.ಟ್ರೆಂಟ್ ಬೌಲ್ಟ್ – ನ್ಯೂಜಿಲೆಂಡ್ ನ ಏಡಗೈ ವೇಗಿ ಟಿ 20 ಕ್ರಿಕೇಟ್ ನಲ್ಲಿ ಬಹಳ ಪರಿಣಾಮಕಾರಿಯಾಗಿದ್ದಾರೆ. ಪವರ್ ಪ್ಲೇ ಹಾಗೂ ಡೆತ್ ಓವರ್ ಗಳಲ್ಲಿ ಉತ್ತಮ ಬೌಲಿಂಗ್ ಮಾಡುವ ಆಟಗಾರನನ್ನ ಹುಡುಕುತ್ತಿರುವ ಆರ್ಸಿಬಿಗೆ ಇವರು ಉತ್ತಮ ಆಯ್ಕೆಯಾಗಿದ್ದಾರೆ.

4.ಲಿಯಾಮ್ ಲಿವಿಂಗ್ ಸ್ಟೋನ್ – ಇಂಗ್ಲೆಂಡ್ ನ ಆಲ್ ರೌಂಡರ್ ಲಿಯಾಮ್ ಉತ್ತಮ ಸ್ಪಿನ್ನರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿದ್ದಾರೆ.ಅದ್ಭುತ ಫೀಲ್ಡರ್ ಕೂಡ ಆಗಿರುವ ಕಾರಣ ಇವರ ಮೇಲೂ ಸಹ ಆರ್ಸಿಬಿ ಕಣ್ಣಿಟ್ಟಿದೆ.

5.ನಿಕೋಲಸ್ ಪೂರನ್ – ಕಳೆದ ಸೀಸನ್ ನಲ್ಲಿ ಉತ್ತಮ ಆಟವಾಡದಿದ್ದರೂ, ವಿಂಡಿಸ್ ನ ಈ ಹೊಡಿಬಡಿ ವಿಕೇಟ್ ಕೀಪರ್ ಬ್ಯಾಟ್ಸಮನ್ ಯಾವಾಗ ಬೇಕಾದರೂ ಸಿಡಿದೇಳುತ್ತಾರೆ. ಆರ್ಸಿಬಿಗೆ ವಿಕೇಟ್ ಕೀಪರ್ ಅಗತ್ಯವಿರುವ ಕಾರಣ, ಇವರ ಮೇಲೆ ಆಸೆಗಣ್ಣಿಟ್ಟಿದೆ.

6.ಇಯಾನ್ ಮಾರ್ಗನ್ – ವಿರಾಟ್ ರಾಜೀನಾಮೆ ನೀಡಿರುವ ಕಾರಣ, ನಾಯಕನ ಹುದ್ದೆ ತುಂಬಲು ತನ್ನ ಮಾಜಿ ಆಟಗಾರ ಮಾರ್ಗನ್ ನತ್ತ ಆರ್ಸಿಬಿ ನೋಡುತ್ತಿದೆ. ಕಡಿಮೆ ಬೆಲೆಗೆ ಸಿಕ್ಕರೇ ಇವರನ್ನು ಖರೀದಿಸುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.