ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈ ಬಾರಿ ಹೊಸ ನಿಯಮಗಳದ್ದೇ ಕಾರುಬಾರು, ಬಿಸಿಸಿಐ ಐಪಿಎಲ್ ಹರಾಜಿಗೆ ನಿಗದಿ ಪಡಿಸಿರುವ ನಿಯಮಗಳು ಯಾವ್ಯಾವು ಗೊತ್ತೇ??

7

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಬಹಳಷ್ಟು ಹೊಸತನ್ನು ನೋಡುತ್ತಿದೆ. ಎಂಟು ತಂಡಗಳ ನಡುವೆ ನಡೆಯುತ್ತಿದ್ದ ಹಣಾಹಣಿ ಇನ್ಮುಂದೆ ಹತ್ತು ತಂಡಗಳ ಮಧ್ಯೆ ನಡೆಯಲಿದೆ. ಆಟಗಾರರ ಸಾರ್ವತ್ರಿಕ ಹರಾಜು ಜನೇವರಿ ಏರಡನೇ ವಾರದಲ್ಲಿ ನಡೆಯಲಿದ್ದು , ಈಗಾಗಲೇ ಎಂಟು ಫ್ರಾಂಚೈಸಿಗಳು ತಾವು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿಯನ್ನ ಬಿಡುಗಡೆ ಮಾಡಿವೆ. ಇದರ ಜೊತೆ ಹೊಸ ಫ್ರಾಂಚೈಸಿಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು, ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಖರೀದಿಸಬಹುದು. ಮೂವರಲ್ಲಿ ಇಬ್ಬರೂ ಭಾರತೀಯ ಹಾಗೂ ಒಬ್ಬ ವಿದೇಶಿ ಆಟಗಾರ ಇರಬೇಕು ಎಂಬ ನಿಯಮವನ್ನ ಬಿಸಿಸಿಐ ಮಾಡಿದೆ‌.

ಇನ್ನು ಫ್ರಾಂಚೈಸಿಗಳಿಗೆ ಖುಷಿ ತರುವ ಒಂದು ನಿಯಮವನ್ನು ಮಾರ್ಪಡಿಸಿರುವ ಬಿಸಿಸಿಐ, ಈ ಭಾರಿ ಹರಾಜಿನ ಪರ್ಸ್ ಅಂದರೇ ಫ್ರಾಂಚೈಸಿಗಳು ಆಟಗಾರರನ್ನ ಖರೀದಿಸಲು ನಿಗದಿಪಡಿಸಿದ ಮೊತ್ತವನ್ನ ಐದು ಕೋಟಿ ರೂಪಾಯಿ ಹೆಚ್ಚಿಸಲು ತೀರ್ಮಾನ ಮಾಡಿದೆ. ಇಷ್ಟು ವರ್ಷಗಳ ಕಾಲ ಪ್ರತಿ ಫ್ರಾಂಚೈಸಿ 85 ಕೋಟಿ ರೂಪೋಯಿಗಳಲ್ಲಿ ಆಟಗಾರರ ಹರಾಜು ಪ್ರಕ್ರಿಯೆಯನ್ನ ಪೂರ್ಮಗೊಳಿಸಬೇಕಿತ್ತು. ಆದರೇ ಈ ಭಾರಿ 90 ಕೋಟಿ ರೂಪಾಯಿ ನಿಗದಿಪಡಿಸಿದೆ.

ಈ 90 ಕೋಟಿ ರೂಪಾಯಿಯಲ್ಲಿ ಫ್ರಾಂಚೈಸಿಗಳು ಹಾಲಿ ಆಟಗಾರರನ್ನ ರಿಟೇನ್ ಮಾಡಿಕೊಂಡು ಉಳಿದ ಮೊತ್ತದಲ್ಲಿ ಖರೀದಿಸಬೇಕಿದೆ. ತಂಡದಲ್ಲಿ ನಾಲ್ವರು ಆಟಗಾರರನ್ನು ರಿಟೇನ್ ಮಾಡಿಕೊಂಡರೇ 42 ಕೋಟಿ, ಮೂವರಿಗಾದರೇ 33 ಕೋಟಿ, ಇಬ್ಬರಾದರೇ 24 ಕೋಟಿ ಹಾಗೂ ಒಬ್ಬರನ್ನ ರಿಟೇನ್ ಮಾಡಿಕೊಂಡರೇ 14 ಕೋಟಿ ರೂಪಾಯಿ ಕಡಿತವಾಗುತ್ತದೆ. ಅದಲ್ಲದೇ ಹರಾಜಿನ ವೇಳೆ, ತಮ್ಮ ತಂಡದ ಮಾಜಿ ಆಟಗಾರರನ್ನ ಖರೀದಿಸಲು ಅವಕಾಶವಿದ್ದ ರೈಟ್ ಟು ಮ್ಯಾಚ್ ನಿಯಮವನ್ನು ಈ ಭಾರಿ ತೆಗೆದು ಹಾಕಲಾಗಿದೆ. ಸದ್ಯ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಪರ್ಸ್ ನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಹಣವಿದ್ದು ಆ ತಂಡ ದೊಡ್ಡ ದೊಡ್ಡ ಆಟಗಾರರನ್ನ ಖರೀದಿ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.