ಬದಲಾಗುತ್ತಿರುವ ಇಲೆಕ್ಟ್ರಾನಿಕ್ ಯುಗದಲ್ಲಿ ಒಮ್ಮೆ ಚಾರ್ಜ್ ಮಾಡಿದರೇ ಅತ್ಯಂತ ದೂರ ಚಲಿಸಬಲ್ಲ ಸ್ಕೂಟರ್ ಬಿಡುಗಡೆ, ಇದರ ವಿಶೇಷತೆ ಏನು ಗೊತ್ತೇ??

ಬದಲಾಗುತ್ತಿರುವ ಇಲೆಕ್ಟ್ರಾನಿಕ್ ಯುಗದಲ್ಲಿ ಒಮ್ಮೆ ಚಾರ್ಜ್ ಮಾಡಿದರೇ ಅತ್ಯಂತ ದೂರ ಚಲಿಸಬಲ್ಲ ಸ್ಕೂಟರ್ ಬಿಡುಗಡೆ, ಇದರ ವಿಶೇಷತೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಗಾಡಿ ಗಳಿಂದಾಗಿ ಸಾಕಷ್ಟು ಪರಿಸರ ಎನ್ನುವುದು ಕಲುಷಿತವಾಗುತ್ತಿದೆ. ಇದಕ್ಕಿರುವ ಒಂದೇ ಒಂದು ಉಪಾಯವೆಂದರೆ ವಿದ್ಯುತ್ ಚಾಲಿತ ವಾಹನಗಳನ್ನು ಉಪಯೋಗಿಸುವುದು. ಇನ್ನು ಎಲೋನ್ ಮಸ್ಕ್ ರವರ ಟೆಸ್ಲಾ ಎನ್ನುವ ವಿದ್ಯುತ್ ಚಾಲಿತ ವಾಹನ ಮಾರ್ಕೆಟ್ಗೆ ಬಂದ ನಂತರ ಪ್ರತಿಯೊಂದು ಕಂಪನಿಗಳು ಕೂಡ ಸ್ಪರ್ಧೆಗೆ ಬಿದ್ದವರಂತೆ ವಿದ್ಯುತ್ಚಾಲಿತ ಕಾರುಗಳನ್ನು ಹಾಗೂ ದ್ವಿಚಕ್ರವಾಹನಗಳನ್ನು ಮಾರ್ಕೆಟ್ಗೆ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು ಇದೇ ಮಾದರಿಯಲ್ಲಿ ಪರಿಸರಸ್ನೇಹಿ ಯಾಗಿರುವ ಎಲೆಕ್ಟ್ರಾನಿಕ್ ಸ್ಕೂಟರನ್ನು ಒಕಿನೋವಾ ಸಂಸ್ಥೆ ಮಾರ್ಕೆಟ್ಗೆ ಬಿಡುಗಡೆ ಮಾಡಿದೆ.

ಒಕಿನೋವಾ ಇಪ್ರೈಸ್ ಪ್ಲಸ್ ಎನ್ನುವ ಎಲೆಕ್ಟ್ರಾನಿಕ್ಸ್ ಸ್ಕೂಟರ್ ಮಾರುಕಟ್ಟೆಗೆ ಕಾಲಿಟ್ಟಿದ್ದು ಒಳ್ಳೆಯ ಡಿಸೈನ್ ಜೊತೆಗೆ ಅತಿ ಕಡಿಮೆ ಹಣದಲ್ಲಿ ಒಂದೇ ಚಾರ್ಜ್ ಗೆ 100ಕ್ಕಿಂತಲೂ ಕಿಲೋಮೀಟರ್ ಓಡುವಂತಹ ಕ್ಷಮತೆಯನ್ನು ಹೊಂದಿದೆ. ಈ ಸ್ಕೂಟರನ್ನು ನೀವು ಖರೀದಿಸಲು ಇಷ್ಟಪಟ್ಟರೆ ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಬುಕಿಂಗ್ ಮಾಡಬೇಕು. ಇನ್ನು ಸ್ಕೂಟರನ್ನು ಬುಕ್ ಮಾಡಲು ಮುಂಗಡವಾಗಿ 2000 ಹಣವನ್ನು ಪಾವತಿಸಬೇಕು. ಒಂದು ವೇಳೆ ನಿಮಗೆ ಖರೀದಿಸಲು ಇಷ್ಟ ಇಲ್ಲವೆಂದರೆ ಕಂಪನಿ ನಿಮಗೆ 2000 ಹಣವನ್ನು ವಾಪಸ್ ನೀಡುತ್ತದೆ. ಇನ್ನು ಇದರಲ್ಲಿ 3.3 ಕಿ ವ್ಯಾಟ್ ಲಿತಿಯಂ ಬ್ಯಾಟರಿ ಇದೆ. ಇದು ಡಿಜಿಟೇಬಲ್ ಬ್ಯಾಟರಿ ಆಗಿದೆ.

ಇನ್ನು ಇದರಜೊತೆಗೆ 1000 ವ್ಯಾಟ್ ಇರುವ ಬಿಎಲ್ ಡಿಸಿ ಮೋಟಾರ್ ಅನ್ನು ಇಟ್ಟಿದ್ದು ಇದು 2500ಕ್ಕೂ ಅಧಿಕ ಅವರನ್ನು ಜನರೇಟ್ ಮಾಡುತ್ತದೆ. ನಾರ್ಮಲ್ ಚಾರ್ಜರ್ ನಿಂದ ಗಾಡಿಯನ್ನು ಚಾರ್ಜ್ ಮಾಡಿದರೆ ನಾಲ್ಕರಿಂದ ಐದು ಗಂಟೆಗಳು ತಗುಲಬಹುದು. ಇನ್ನು ಕಂಪನಿ ಸ್ಕೂಟರ್ ಮೇಲೆ ಮೂರು ವರ್ಷ ಅಥವಾ 30 ಸಾವಿರ ಕಿಲೋಮೀಟರ್ ಗ್ಯಾರಂಟಿ ನೀಡುತ್ತದೆ. ಇನ್ನು ಕಂಪನಿಯವರು ಹೇಳುವಂತೆ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಈ ಸ್ಕೂಟರ್ ಬರೋಬ್ಬರಿ 139 ಕಿಲೋಮೀಟರ್ ದೂರವನ್ನು ಕ್ರಮಿಸಬಹುದಂತೆ. ಇನ್ನು ಪ್ರತಿ ಗಂಟೆಗೆ 58 ಕಿಲೋಮೀಟರ್ ವೇಗದಲ್ಲಿ ಗರಿಷ್ಠ ವೇಗವನ್ನು ತಲುಪಬಹುದು. ಮುಂದಿನ ಚಕ್ರಕ್ಕೆ ಡಿಸ್ಕ್ ಬ್ರೇಕ್ ಹಿಂದಿನ ಚಕ್ರಕ್ಕೆ ಬ್ರಹ್ಮ ಬ್ರೇಕ್ ಹಾಗೂ ಎಲೆಕ್ಟ್ರಾನಿಕ್ ಅಸಿಸ್ಟೆಂಟ್ ಬ್ರೇಕ್ ಕೂಡ ನೀಡಲಾಗಿದೆ. ಇನ್ನು ಈ ಗಾಡಿ ಎಂತಹ ಹಾದಿಗಳಲ್ಲಿ ಕೂಡ ಸುಗಮವಾಗಿ ಚಲಿಸಬಹುದು. ಇನ್ನು ಈ ಗಾಡಿಯ ಬೆಲೆ 1,05,990 ರಿಂದ ಪ್ರಾರಂಭವಾಗಲಿದೆ. ನೀವು ಕೂಡ ಈ ಗಾಡಿಯನ್ನು ಖರೀದಿಸಲು ಇಷ್ಟಪಟ್ಟರೆ ಇಂದೇ ಬುಕಿಂಗ್ ಮಾಡಿಕೊಳ್ಳಿ.