ಅನೇಕ ಗೊಂದಲಗಳ ಮಧ್ಯೆಯೂ ಟೀಮ್ ಇಂಡಿಯಾಗೆ ಸಂತಸದ ಸುದ್ದಿ ನೀಡಿದ ದಕ್ಷಿಣ ಆಫ್ರಿಕಾ ಕ್ರಿಕೇಟ್ ಬೋರ್ಡ್, ಏನು ಗೊತ್ತೇ??

ಅನೇಕ ಗೊಂದಲಗಳ ಮಧ್ಯೆಯೂ ಟೀಮ್ ಇಂಡಿಯಾಗೆ ಸಂತಸದ ಸುದ್ದಿ ನೀಡಿದ ದಕ್ಷಿಣ ಆಫ್ರಿಕಾ ಕ್ರಿಕೇಟ್ ಬೋರ್ಡ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾಯಕತ್ವ ಧೀಢೀರ್ ಬದಲಾವಣೆಗೆ ಭಾರತ ಕ್ರಿಕೇಟ್ ತಂಡದಲ್ಲಿ ಎಲ್ಲವೂ ಸರಿಯಿಲ್ಲವೆಂದು ಮೇಲ್ನೋಟಕ್ಕೆ ತಿಳಿಯುತ್ತಿತ್ತು. ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕರಾಗಿದ್ದರೇ, ಏಕದಿನ ಹಾಗೂ ಟಿ 20 ಕ್ರಿಕೇಟ್ ಗೆ ರೋಹಿತ್ ಶರ್ಮಾ ನಾಯಕ ಎಂದು ಘೋಷಿಸಲಾಗಿತ್ತು. ಏಕಾಏಕಿ ವಿರಾಟ್ ಕೊಹ್ಲಿ ಯವರನ್ನ ಏಕದಿನ ನಾಯಕತ್ವದಿಂದ ಕೆಳಗಿಳಿಸಿದ್ದು ಸಹಜವಾಗಿಯೇ ಒಂದಷ್ಟು ಗಾಸಿಪ್ ಗಳಿಗೆ ಕಾರಣವಾಗಿತ್ತು.

ಈ ನಡುವೆ ಇಂಜುರಿ ಸಮಸ್ಯೆ ಕಾರಣ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದರು. ಅವರ ಬದಲಿಗೆ ಪ್ರಿಯಾಂಕ್ ಪಾಂಚಾಲ್ ರವರಿಗೆ ತಂಡದಲ್ಲಿ ಸ್ಥಾನ ದೊರೆತಿದೆ. ಹೀಗಾಗಿ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾದ ವಿರುದ್ದ ನಡೆಯುವ ಮೂರು ಟೆಸ್ಟ್ ಗಳಿಗೆ ಅಲಭ್ಯರಾಗುತ್ತಿದ್ದಾರೆ. ಏಕದಿನ ಸರಣಿ ವೇಳೆಯೊಳಗೆ ರೋಹಿತ್ ಚೇತರಿಸಿಕೊಳ್ಳುವ ಲಕ್ಷಣ ಇದೆ. ಇನ್ನು ಮಗಳು ವಮಿಕಾಳ ಮೊದಲನೇ ವರ್ಷದ ಜನ್ಮದಿನ ಆಚರಿಸುವ ಸಲುವಾಗಿ ವಿರಾಟ್ ಕೊಹ್ಲಿ ಸಹ ಏಕದಿನ ಸರಣಿಯಿಂದ ದೂರವುಳಿಯುತ್ತಿದ್ದಾರೆ. ಇದು ಭಾರತ ತಂಡದೊಳಗೆ ನಡೆಯುತ್ತಿರುವ ಶೀತಲ ಸಮರ ಎಂದು ಬಿಂಬಿಸಲಾಗಿತ್ತು.

ಈ ಎಲ್ಲಾ ಗೊಂದಲಗಳ ಮಧ್ಯೆ ದಕ್ಷಿಣ ಆಫ್ರಿಕಾ ಕ್ರಿಕೇಟ್ ಸಂಸ್ಥೆ ಭಾರತೀಯ ಕ್ರಿಕೇಟ್ ಸಂಸ್ಥೆಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಮುಂಬೈನಲ್ಲಿ ಕ್ವಾರಂಟೈನ್ ನಲ್ಲಿರುವ ತಂಡ, ದಕ್ಷಿಣ ಆಫ್ರಿಕಾಕ್ಕೆ ತೆರಳಿ , ಅಲ್ಲಿಯೂ ಸಹ ಮೂರು ದಿನಗಳ ಕಾಲ ಕ್ವಾರಂಟೈನ್ ನಲ್ಲಿದ್ದು, ನಂತರ ಅಭ್ಯಾಸ ನಡೆಸಬೇಕು ಎಂದು ಈ ಮೊದಲು ಹೇಳಿತ್ತು. ಆದರೇ ಈಗ ನಿಯಮ ಬದಲಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೇಟ್ ಸಂಸ್ಥೆ, ಕೇವಲ ಒಂದು ದಿನ ಕ್ವಾರಂಟೈನ್ ನಲ್ಲಿದ್ದು, ನಂತರ ಅಭ್ಯಾಸ ಪ್ರಾರಂಭಿಸಬಹುದು ಎಂದು ಹೇಳಿದೆ. ಅದಲ್ಲದೇ ಎರಡು ದಿನಕ್ಕೊಮ್ಮೆ ಕೋವಿಡ್ ಟೆಸ್ಟ್ ನಡೆಸಲಿದ್ದು, ಶೀಘ್ರದಲ್ಲಿಯೇ ವರದಿ ನೀಡಲು ವಿಶೇಷ ಕ್ರಮ ಕೈಗೊಂಡಿದೆಯಂತೆ. ಒಮ್ರಿಕಾನ್ ನಂತಹ ಸಂಕಷ್ಟದ ಸಮಯದಲ್ಲಿಯೂ ಬಿಸಿಸಿಐ ಈ ಸರಣಿಯನ್ನ ರದ್ದುಪಡಿಸದೇ ಆಡಲು ಅವಕಾಶ ನೀಡಿದೆ. ಅವರಿಗೆ ನಾವು ಆಭಾರಿಯಾಗಿರುತ್ತೇವೆ ಎಂದು ಹೇಳಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.