ಹಿಂದೆಂದಿಗಿಂತಲೂ ಬಲಿಷ್ಠವಾದ ಬೆಂಗಳೂರು ಬುಲ್ಸ್, 8 ದಿನದಲ್ಲಿ ಆರಂಭವಾಗಲಿರುವ ಕಬ್ಬಡಿ ಲೀಗ್ ನಲ್ಲಿ ಬೆಂಗಳೂರಿನ ಪರವಾಗಿ ಯಾರು ಆಡಲಿದ್ದಾರೆ ಗೊತ್ತೇ??

ಹಿಂದೆಂದಿಗಿಂತಲೂ ಬಲಿಷ್ಠವಾದ ಬೆಂಗಳೂರು ಬುಲ್ಸ್, 8 ದಿನದಲ್ಲಿ ಆರಂಭವಾಗಲಿರುವ ಕಬ್ಬಡಿ ಲೀಗ್ ನಲ್ಲಿ ಬೆಂಗಳೂರಿನ ಪರವಾಗಿ ಯಾರು ಆಡಲಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದೇ ಡಿಸೆಂಬರ್ 22 ರಿಂದ ಪ್ರೋ ಕಬಡ್ಡಿ ಲೀಗ್ ಆರಂಭವಾಗಲಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಪ್ರೋ ಕಬಡ್ಡಿ ಲೀಗ್ ಗೆ ಇದೀಗ ಪ್ರಾರಂಭಿಸುವ ಬಗ್ಗೆ ಹಸಿರು ನಿಶಾನೆ ಸಿಕ್ಕಿದ್ದು. ತಂಡಗಳು ಕೂಡ ಅಖಾಡದಲ್ಲಿ ಗುದ್ದಾಡಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿವೆ. ಪ್ರೋ ಕಬಡ್ಡಿ ಲೀಗ್ ನಲ್ಲಿ ಆರನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಬೆಂಗಳೂರು ಬುಲ್ಸ್ ತಂಡ ಈ ಬಾರಿಯ ಎಂಟನೇ ಆವೃತ್ತಿಯಲ್ಲಿಯೂ ಕೂಡ ಗೆಲ್ಲುವ ವಿಶ್ವಾಸವನ್ನು ಹೊಂದಿದೆ.

ಏಕೆಂದರೆ ಬೆಂಗಳೂರು ಬುಲ್ಸ್ ತಂಡದ ಕಳೆದ ಬಾರಿಯ ಆವೃತ್ತಿಯಲ್ಲಿದ್ದ ಆಟಗಾರರಿಗಿಂತ ಈ ಬಾರಿ ಹೆಚ್ಚು ಶಕ್ತಿ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ಪ್ರೋ ಕಬಡ್ಡಿ ಲೀಗ್ ನಲ್ಲಿ ಒಟ್ಟಾರೆಯಾಗಿ ಹನ್ನೆರಡು ತಂಡಗಳು ಭಾಗವಹಿಸಲಿದ್ದು ಕಬಡ್ಡಿ ಕ್ರೀಡೆ ಪ್ರಿಯರಿಗೆ ರೋಚಕತೆಯ ಮನರಂಜನೆ ನೀಡಲಿದೆ ಎನ್ನಬಹುದಾಗಿದೆ. ಇನ್ನು ಬೆಂಗಳೂರು ಬುಲ್ಸ್ ತಂಡದ ಬಲಾಬಲಗಳನ್ನು ತಿಳಿಯುವುದಾದರೆ ಈ ಬಾರಿ ಬೆಂಗಳೂರು ಬುಲ್ಸ್ ಫ್ರಾಂಚೈಸಿ ಬಿಡ್ಡಿಂಗ್ ನಲ್ಲಿ ಒಂದಷ್ಟು ಸ್ಟ್ರಾಂಗ್ ಆಟಗಾರರನ್ನು ಖರೀದಿ ಮಾಡಿದೆ.

ಬೆಂಗಳೂರು ಬುಲ್ಸ್ ತಂಡ ಈ ಬಾರಿ ಅತ್ಯುತ್ತಮ ಬಲಿಷ್ಠ ತಂಡವಾಗಿ ಕಾಣುತ್ತಿದೆ ಅಂದರೆ ಅದಕ್ಕೆ ಪ್ರಮುಖವಾಗಿ ತಂಡದಲ್ಲಿ ಈಗ ಚಂದ್ರನ್ ರಂಜಿತ್, ಡೋಂಗ್ ಗಿಯೋನ್ ಲೀ, ಅಬುಲ್ ಫಜಲ್ ಮಗ್ ಸೂದ್ ಲೂ ಮಹಾಲಿ, ಜಿ ಬಿ ಮೋರೆ ಬೆಂಗಳೂರು ಬುಲ್ಸ್ ತಂಡಕ್ಕೆ ಆಗಮಸಿದ್ದಾರೆ. ಚಂದ್ರನ್ ರಂಜಿತ್ ಮತ್ತು ದೀಪಕ್ ನರ್ವಾಲ್ ಅವರು ಮನ್ನೂರ ಇಪ್ಪತ್ತಕ್ಕೂ ಅಧಿಕ ರೇಡಿಂಗ್ ಅಂಕಗಳನ್ನು ಗಳಿಸಿದ್ದಾರೆ. ಸೌತ್ ಕೊರಿಯಾದ ಡೋಂಗ್ ಗಿಯೋನ್ ಲೀ ಅಂಡ್ ಇರಾನ್ ದೇಶದ ಅಬುಲ್ ಫಜಲ್ ಇವರುಗಳು ಕಬಡ್ಡಿ ಕ್ರೀಡೆಯ ಅತ್ಯುತ್ತಮ ಪ್ರತಿಭಾಶಾಲಿ ಆಟಗಾರರು ಎಂದು ನಿರೂಪಿಸಿಕೊಂಡಿದ್ದಾರೆ.

ಅದಕ್ಕೆ ಪೂರಕ ಎಂಬಂತೆ ಗಿಯೋನ್ ಲೀ ಜಿಬಿ ಮೋರೆ ಅವರು ಪ್ರೋ ಕಬಡ್ಡಿ ಕಳೆದ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಇನ್ನು ಪ್ರೋ ಕಬಡ್ಡಿ ಲೀಗ್ ಮೂರನೇ ಆವೃತ್ತಿಯಲ್ಲಿ ಇಪ್ಪತೈದು ವರ್ಷದ ಪವನ್ ಕುಮಾರ್ ಸೆಹ್ರಾವತ್ ಬೆಂಗಳೂರು ಬುಲ್ಸ್ ತಂಡಕ್ಕೆ ಸೇರ್ಪಡೆಗೊಂಡು ಕಳೆದ ಮೂರು ಆವೃತ್ತಿಗಳಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಸ್ಟಾರ್ ಆಟಗಾರನಾಗಿ ಹೆಸರು ಮಾಡಿದ್ದಾರೆ. ಪವನ್ ಅವರು ರೋಹಿತ್ ಕುಮಾರ್ ಅವರ ಗರಡಿಯಲ್ಲಿ ಪಳಗಿದ ಕ್ರೀಡಾಪಟು ಆಗಿರುವುದರಿಂದ ಪವನ್ ಅವರಿಂದ ಬೆಂಗಳೂರು ಬುಲ್ಸ್ ತಂಡ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.

ಪವನ್ ಕುಮಾರ್ ವಿಶೇಷತೆ ಅಂದರೆ ಅವರು ರೇಡಿಂಗ್ ಮಾಡುವಾಗ ಡಿಫೆಂಡರ್ ಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಜಿಗಿದು ರನ್ನಿಂಗ್ ಹ್ಯಾಂಡ್ ಟಚ್ ಮಾಡಿ. ಸುಲಭವಾಗಿ ಅಂಕಗಳನ್ನು ಪಡೆದುಕೊಳ್ಳುವ ಚಾಕಚಕ್ಯತೆ ಅವರಲ್ಲಿದೆ. ಕಳೆದ ಆವೃತ್ತಿಯಲ್ಲಿ ಅವರು ಬರೋಬ್ಬರಿ 350 ರೇಡಿಂಗ್ ಪಾಯಿಂಟ್ ಗಿಟ್ಟಿಸಿಕೊಂಡಿದ್ದಾರೆ.

ಈ ಮೂಲಕ ಅವರು ಕಳೆದ ಎರಡು ಆವೃತ್ತಿಯಲ್ಲಿ ಅತಿ ಹೆಚ್ಚು ರೇಡಿಂಗ್ ಅಂಕ ಪಡೆದ ಕೀರ್ತೀಗೆ ಪಾತ್ರರಾಗಿದ್ದಾರೆ. ಕಳೆದ ಸೀಸನ್ ಗಳಲ್ಲಿ ಬೆಂಗಳೂರು ಬುಲ್ಸ್ ತಂಡ ಸಂಪೂರ್ಣವಾಗಿ ಪವನ್ ಅವರ ಮೇಲೆಯೇ ಅವಲಂಬನೆ ಆಗಿತ್ತು. ಆದರೆ ಈ ಆವೃತ್ತಿಯಲ್ಲಿ ಉತ್ತಮ ಆಟಗಾರರು ತಂಡದಲ್ಲಿ ಇದ್ದಾರೆ. ಇವರಿಂದ ಕೊಂಚ ನೆಗೆಟಿವ್ ಕಂಡು ಬಂದರೂ ಉಳಿದ ಪ್ರಬಲ ಆಟಗಾರರು ತಂಡವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸ ಇದೀಗ ಬೆಂಗಳೂರು ಬುಲ್ಸ್ ತಂಡಕ್ಕಿದೆ.