ಕ್ಯಾಪ್ಟನ್ ಆದ ಆರಂಭದಲ್ಲಿಯೇ ವಿಗ್ನ, ಸೌತ್ ಆಫ್ರಿಕಾ ಸರಣಿಗೆ ಮೊದಲೇ ರೋಹಿತ್ ಗೆ ಶಾಕ್. ನತದೃಷ್ಠ ನಾಯಕರ ಸಾಲಿಗೆ ಮುಂಬೈಕರ್??

ಕ್ಯಾಪ್ಟನ್ ಆದ ಆರಂಭದಲ್ಲಿಯೇ ವಿಗ್ನ, ಸೌತ್ ಆಫ್ರಿಕಾ ಸರಣಿಗೆ ಮೊದಲೇ ರೋಹಿತ್ ಗೆ ಶಾಕ್. ನತದೃಷ್ಠ ನಾಯಕರ ಸಾಲಿಗೆ ಮುಂಬೈಕರ್??

ನಮಸ್ಕಾರ ಸ್ನೇಹಿತರೇ ಭಾರತ – ದಕ್ಷಿಣ ಆಫ್ರಿಕಾ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಮೊದಲೇ ನಾಯಕತ್ವ ಬದಲಾವಣೆ ವಿಚಾರದಲ್ಲಿ ಗೊಂದಲದ ಗೂಡಾಗಿದ್ದ ಭಾರತ ತಂಡಕ್ಕೆ ಈಗ ಮತ್ತೊಂದು ಆಘಾತದ ಸುದ್ದಿ ಎದುರಾಗಿದೆ. ಸೌತ್ ಆಫ್ರಿಕಾ ಸರಣಿಗೆ ಪೂರ್ವ ಸಿದ್ದತೆ ನಡೆಸುವ ಸಲುವಾಗಿ ಭಾರತ ತಂಡದ ಆಟಗಾರರು ಅಭ್ಯಾಸ ಶಿಬಿರಕ್ಕೆ ಮುಂಬೈನಲ್ಲಿ ಹಾಜರಾಗಿದ್ದರು. ಭಾರತ ಏಕದಿನ ತಂಡದ ನೂತನ ನಾಯಕ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ರಿಷಭ್ ಪಂತ್ ಹಾಗೂ ವೇಗಿ ಶಾರ್ದೂಲ್ ಠಾಕೂರ್ ಹಾಜರಾಗಿದ್ದರು.

ಭಾರತ ತಂಡದ ಥ್ರೋ ಡೌನ್ ಎಕ್ಸ್ ಪರ್ಟ್ ಗಳು ಬೌಲಿಂಗ್ ಮಾಡುತ್ತಿದ್ದರು. ಭಾರತ‌ ತಂಡದ ಯಶಸ್ವಿ ಥ್ರೋ ಡೌನ್ ಬೌಲರ್ ಆಗಿರುವ ಕನ್ನಡಿಗ ರಾಘು ಹಾಕಿದ ಎಸೆತವೊಂದು ರೋಹಿತ್ ಶರ್ಮಾರವರ ಮುಂಗೈಗೆ ತಗುಲಿದೆಯಂತೆ. ತಕ್ಷಣವೇ ನೋವಿನಿಂದ ಕಿರುಚಿದ ರೋಹಿತ್, ಬ್ಯಾಟನ್ನು ಕೈಯಿಂದ ಬಿಟ್ಟರಂತೆ. ರೋಹಿತ್ ಗ್ಲೌಸ್ ಧರಿಸಿದ್ದರೂ, ಚೆಂಡು ಜೋರಾಗಿ ಬಡಿದ ಕಾರಣ, ಗಾಯ ತೀವ್ರತರದ್ದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರೋಹಿತ್ ಬೇಗ ಗುಣಮುಖರಾಗುತ್ತಾರೆಂದು ಫಿಸಿಯೋಗಳು ಹೇಳಿದ್ದರೂ, ರೋಹಿತ್ ಆರಂಭದ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆಂಬ ಆತಂಕ ಟೀಮ್ ಇಂಡಿಯಾ ಮ್ಯಾನೇಜ್ ಮೆಂಟ್ ಗಿದೆ.

ಹೀಗಾಗಿ ರೋಹಿತ್ ಶರ್ಮಾ ಮಹತ್ವದ ದಕ್ಷಿಣ ಆಫ್ರಿಕಾದ ಸರಣಿಯಿಂದ ಹಿಂದುಳಿಯಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೋಹಿತ್ ಪದೇ ಪದೇ ಗಾಯಕ್ಕೆ ತುತ್ತಾಗುತ್ತಿದ್ದು, ಹಲವಾರು ಮಹತ್ವದ ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಏಕದಿನ ತಂಡದ ನಾಯಕರಾದ ಮೇಲೆ ಮೊದಲ ಸರಣಿಯಲ್ಲೇ ರೋಹಿತ್ ಶರ್ಮಾರಿಗಾಗಿರುವ ಈ ಹಿನ್ನಡೆ ಈಗ ಬೇರೆಯದ್ದೇ ಚರ್ಚೆಯತ್ತ ಸಾಗಿದೆ..ರೋಹಿತ್ ಶರ್ಮಾ ಒಬ್ಬ ನತದೃಷ್ಠ ನಾಯಕರಾಗುತ್ತಿದ್ದಾರಾ ಎಂಬ ಚರ್ಚೆ ಸೋಶಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.