ಬಿಗ್ ನ್ಯೂಸ್: ಬಹುನೀರಿಕ್ಷಿತ ಐಪಿಎಲ್ 2022 ರ ಮೆಗಾ ಹರಾಜಿಗೆ ದಿನಾಂಕ ಪ್ರಕಟ, ಯಾವಾಗ ಗೊತ್ತಾ?? ಗರಿಗೆದರಿದ ಐಪಿಎಲ್.

ಬಿಗ್ ನ್ಯೂಸ್: ಬಹುನೀರಿಕ್ಷಿತ ಐಪಿಎಲ್ 2022 ರ ಮೆಗಾ ಹರಾಜಿಗೆ ದಿನಾಂಕ ಪ್ರಕಟ, ಯಾವಾಗ ಗೊತ್ತಾ?? ಗರಿಗೆದರಿದ ಐಪಿಎಲ್.

ನಮಸ್ಕಾರ ಸ್ನೇಹಿತರೇ ಇಂಡಿಯನ್ ಪ್ರೀಮಿಯಲ್ ಲೀಗ್ ಯಾನೆ ಐಪಿಎಲ್ ಕ್ರೇಜ್ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2008 ರಲ್ಲಿ ಶುರುವಾದ ಈ ಕ್ರಿಕೇಟ್ ಹಬ್ಬ, ಅನೇಕ ಏಳು-ಬೀಳುಗಳ ನಡುವೆ ಮತ್ತೆ ತನ್ನ ಹಳೇ ವೈಭವಕ್ಕೆ ಮರಳಲಿದೆ. ಈ ಭಾರಿ ಐಪಿಎಲ್ ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿದ್ದು, ಒಟ್ಟು ತಂಡಗಳ ಸಂಖ್ಯೆ ಹತ್ತಕ್ಕೆ ಏರಿದೆ.

ಅದಲ್ಲದೇ ಈ ಭಾರಿ ಐಪಿಎಲ್ ನ ಸಾರ್ವತ್ರಿಕ ಹರಾಜು ನಡೆಯಲಿದ್ದು, ಎಲ್ಲಾ ಫ್ರಾಂಚೈಸೀಗಳು ನಾಲ್ವರು ಹಾಲಿ ಆಟಗಾರರನ್ನ ರಿಟೇನ್ ಮಾಡುವಂತೆ ಅವಕಾಶ ಕಲ್ಪಿಸಲಾಗಿತ್ತು. ಕೆಲವು ಫ್ರಾಂಚೈಸಿಗಳು ನಾಲ್ವರು ಆಟಗಾರರನ್ನ ರೀಟೈನ್ ಮಾಡಿದರೇ, ಕೆಲವು ಫ್ರಾಂಚೈಸಿಗಳು ಮೂವರು ಆಟಗಾರರು ಹಾಗೂ ಕೆಲವು ಫ್ರಾಂಚೈಸಿಗಳು ಎರಡು ಆಟಗಾರರನ್ನು ರೀಟೈನ್ ಮಾಡಿಕೊಂಡಿವೆ‌. ಹೊಸದಾಗಿ ಐಪಿಎಲ್ ನಲ್ಲಿ ಭಾಗವಹಿಸುತ್ತಿರುವ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಡಿಸೆಂಬರ್ 25 ರೊಳಗೆ , ಮೆಗಾ ಹರಾಜಿಗಿಂತ ಮುಂಚೆಯೇ, ಮೂವರು ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಿದೆ.

ಮೂವರಲ್ಲಿ ಇಬ್ಬರು ದೇಶಿಯ ಆಟಗಾರರು ಹಾಗೂ ಒಬ್ಬ ವಿದೇಶಿ ಆಟಗಾರನಿರಬೇಕು ಎಂಬ ನಿಯಮ ರೂಪಿಸಲಾಗಿದೆ. ಹಾಗಾಗಿ ಡಿಸೆಂಬರ್ 25 ಕ್ಕೆ ಹೊಸ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನ ಬಿಡುಗಡೆ ಮಾಡಿದರೇ, ಜನೇವರಿ ಏರಡನೇ ವಾರದಲ್ಲಿ ಐಪಿಎಲ್ ನ ಆಟಗಾರರ ಸಾರ್ವತ್ರಿಕ ಹರಾಜನ್ನು ನಡೆಸಲು ಬಿಸಿಸಿಐ ನಿರ್ಧರಿಸಿದೆ.ಸಂಕ್ರಾಂತಿಗಿಂತ ಮುಂಚೆಯೇ ಹರಾಜನ್ನು ಪೂರ್ಣಗೊಳಿಸಿ ತಂಡಗಳಿಗೊಂದು ಫೈನಲ್ ಟಚ್ ನೀಡುವ ಇರಾದೆ ಬಿಸಿಸಿಐನದ್ದು. ಅದಲ್ಲದೇ ಇಷ್ಟು ವರ್ಷ ಐಪಿಎಲ್ ನ ಫ್ರಾಂಚೈಸಿಗಳಿಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಪರ್ಸ್ ಗಾತ್ರ 85 ಕೋಟಿ ರೂಪಾಯಿ ನಿಗದಿಗೊಳಿಸಲಾಗಿತ್ತು. ಈಗ ಆ ಪರ್ಸ್ ಗಾತ್ರವನ್ನು 5 ಕೋಟಿಗೇರಿಸಿ, ಒಟ್ಟು 90 ಕೋಟಿ ರೂಪಾಯಿ ನಿಗದಿಪಡಿಸಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.