ಶೀಘ್ರದಲ್ಲಿಯೇ ಟೆಸ್ಟ್ ನಿಂದ ನಿವೃತ್ತಿಯಾಗಲಿರುವ ಮತ್ತೊಬ್ಬ ಆಲ್ ರೌಂಡರ್. ಪಾಂಡ್ಯ ನಂತರ ಮತ್ತೊಬ್ಬರು. ಯಾಕಂತೆ ಗೊತ್ತೇ??

ಶೀಘ್ರದಲ್ಲಿಯೇ ಟೆಸ್ಟ್ ನಿಂದ ನಿವೃತ್ತಿಯಾಗಲಿರುವ ಮತ್ತೊಬ್ಬ ಆಲ್ ರೌಂಡರ್. ಪಾಂಡ್ಯ ನಂತರ ಮತ್ತೊಬ್ಬರು. ಯಾಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದು ಯಾರೂ ಸಹ ನೀರಿಕ್ಷಿಸದ ಸುದ್ದಿ. ಟೆಸ್ಟ್ ಕ್ರಿಕೇಟ್ ನಲ್ಲಿ ಭಾರತ ತಂಡಕ್ಕೆ ಮೇಲಿಂದ ಮೇಲೆ ಆಘಾತದ ಸುದ್ದಿಗಳು ಹೊರ ಬರುತ್ತಿವೆ. ಕೆಲವು ದಿನಗಳ ಹಿಂದೆ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿವೃತ್ತಿಯಾಗುವುದರ ಬಗ್ಗೆ ಸುಳಿವು ನೀಡಿದ್ದರು. ಈಗ ಭಾರತ ತಂಡದ ಮತ್ತೊಬ್ಬ ಯಶಸ್ವಿ ಆಲ್ ರೌಂಡರ್ ಸಹ ನಿವೃತ್ತಿಯ ಬಗ್ಗೆ ಚಿಂತನೆ ನಡೆಸಿದ್ದಾರಂತೆ. ಬನ್ನಿ ಆ ಆಲ್ ರೌಂಡರ್ ಯಾರು ಎಂದು ತಿಳಿಯೋಣ.

ಬ್ಯಾಟಿಂಗ್,ಬೌಲಿಂಗ್,ಫೀಲ್ಡಿಂಗ್ ಹೀಗೆ ಮೂರು ರಂಗದಲ್ಲಿಯೂ ಅಸಾಧಾರಾಣ ಪ್ರದರ್ಶನ ನೀಡುತ್ತಿದ್ದ, ಭಾರತ ತಂಡದ ಆಲ್ ರೌಂಡರ್ ಸರ್ ರವೀಂದ್ರ ಜಡೇಜಾ ಸಹ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾಗಲು ಚಿಂತನೆ ನಡೆಸಿದ್ದಾರಂತೆ. ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಆಡಿದ್ದ ಜಡೇಜಾ, ಗಾಯಧ ಸಮಸ್ಯೆಯಿಂದ ಎರಡನೇ ಟೆಸ್ಟ್ ನಿಂದ ದೂರವುಳಿದಿದ್ದರು. ಸದ್ಯ 33 ವರ್ಷದ ರವೀಂದ್ರ ಜಡೇಜಾ, ಸೀಮಿತ ಓವರ್ ಕ್ರಿಕೇಟ್ ನಲ್ಲಿ ಹೆಚ್ಚು ಆಡುವ ಕಾರಣಕ್ಕಾಗಿ ಟೆಸ್ಟ್ ಕ್ರಿಕೇಟ್ ನಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರಂತೆ.

ಸದ್ಯ ಮೊಣಕಾಲು ನೋವಿನಿಂದ ಬಳಲುತ್ತಿರುವ ಅವರು, ಶೀಘ್ರದಲ್ಲಿಯೇ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದು, ಅವರಿಗೆ ಕನಿಷ್ಠ ಮೂರು ತಿಂಗಳ ವಿಶ್ರಾಂತಿ ಅಗತ್ಯವಾಗಿದೆಯಂತೆ. ಹಾಗಾಗಿ ಮುಂಬರುವ ಐಪಿಎಲ್ ಹಾಗೂ ಟಿ 20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೆಸ್ಟ್ ಕ್ರಿಕೇಟ್ ಗೆ ವಿದಾಯ ಹೇಳಲು ಚಿಂತನೆ ನಡೆಸಿದ್ದಾರೆ. ಸದ್ಯ ಜಡೇಜಾ ಜಾಗವನ್ನು ಟೆಸ್ಟ್ ನಲ್ಲಿ ಅಕ್ಷರ್ ಪಟೇಲ್ ಯಶಸ್ವಿಯಾಗಿ ತುಂಬುತ್ತಿದ್ದು, ಅವರಿಗೆ ಹೆಚ್ಚು ಅವಕಾಶ ನೀಡಲು ಸಹ ಈ ತೀರ್ಮಾನ ಕೈಗೊಂಡಿದ್ದಾರಂತೆ. ಇದಲ್ಲದೇ ಧೋನಿ ನಿವೃತ್ತಿ ಬಳಿಕ ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಲಿದ್ದಾರಂತೆ. ಹೀಗಾಗಿ ಜಡೇಜಾ ಟೆಸ್ಟ್ ಕ್ರಿಕೇಟ್ ಗೆ ಆದಷ್ಟು ಬೇಗ ನಿವೃತ್ತಿ ಹೇಳುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.