ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಕಳೆದ ಬಾರಿ ಮ್ಯಾಕ್ಸ್ವೆಲ್ ರವರನ್ನು ಕರೆತಂದಂತೆ ಈ ಬಾರಿಯೂ ಮತ್ತೊಬ್ಬ ಬಲಿಷ್ಠ ಆಟಗಾರರನ್ನು ಕರೆತರಲು ಮುಂದಾದ ಕೊಹ್ಲಿ, ಯಾರು ಗೊತ್ತೇ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ರಾಜೀನಾಮೆ ನಂತರ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ನಾಯಕನನ್ನು ಹುಡುಕುತ್ತಿದೆ. ಆರ್ಸಿಬಿ ತಂಡದ ಆಪತ್ಭಾಂದವ ಎಬಿ ಡಿ ವಿಲಿಯರ್ಸ್ ಸಹ ಈ ಭಾರಿಯಿಂದ ಐಪಿಎಲ್ ನಲ್ಲಿ ಆಡುತ್ತಿಲ್ಲ. ಹೀಗಾಗಿ ಆರ್ಸಿಬಿ ತಂಡ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸವೆಲ್ ರನ್ನು ರೀಟೈನ್ ಮಾಡಿಕೊಂಡಿತು. ಇನ್ನು ಬೌಲಿಂಗ್ ನಲ್ಲಿಯೂ ಸ್ಪಿನ್ನರ್ ಯುಜವೇಂದ್ರ ಚಾಹಲ್ ಬದಲು, ವೇಗದ ಬೌಲರ್ ಮಹಮದ್ ಸಿರಾಜ್ ರನ್ನ ರಿಟೇನ್ ಮಾಡಿಕೊಂಡಿದೆ. ಈಗ ಸಮರ್ಥ ತಂಡ ಕಟ್ಟಲು ಆರ್ಸಿಬಿ ಪಡೆ ಘಟಾನುಘಟಿ ಆಟಗಾರರಿಗೆ ಬಲೆ ಬೀಸಿದೆ.

ಅತ್ಯುತ್ತಮ ಫಾರ್ಮ್ ನಲ್ಲಿದ್ದರೂ ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ರವರನ್ನ ರಿಟೇನ್ ಮಾಡಿಕೊಳ್ಳಲಿಲ್ಲ. ಇನ್ನು ಟಿಕ್ ಟಾಕ್ ಶೋಕಿ ಇರುವ ಡೇವಿಡ್ ವಾರ್ನರ್, ಇತ್ತಿಚೆಗೆ ಟ್ರೈಲರ್ ಬಿಡುಗಡೆ ಮಾಡಿದ ತೆಲುಗಿನ ಪುಷ್ಪ ಸಿನಿಮಾದ ಹಾಡಿಗೆ ಅವರ ಫೋಟೋವನ್ನ ಎಡಿಟ್ ಮಾಡಿ ಹಾಕಿಕೊಂಡಿದ್ದರು. ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಪೋಸ್ಟ್ ಗೆ ವಿರಾಟ್ ಕೊಹ್ಲಿ ಸಹ ಕಮೆಂಟ್ ಮಾಡಿದ್ದು, ಗೆಳೆಯಾ ನೀನು ಆರಾಮಾಗಿದ್ದಿಯಾ ಎಂದು ಕಮೆಂಟ್ ಮಾಡಿದ್ದರು. ಇನ್ನು ಇದಕ್ಕೆ ರಿಪ್ಲೈ ಮಾಡಿದ್ದ ಡೇವಿಡ್ ವಾರ್ನರ್ ನನ್ನ ತಲೆಯಲ್ಲಿ ಇನ್ನು ಸಹ ಬೇಸರವಿದೆ. ಅದು ಎಂದಿಗೂ ಸರಿಯಾಗುವುದಿಲ್ಲ ಎಂಬ ಹಾಸ್ಯಾಸ್ಪದ ಉತ್ತರ ನೀಡಿದ್ದಾರೆ.

ಇನ್ನು ಈ ಬಗ್ಗೆ ಅಭಿಮಾನಿಗಳ ಚರ್ಚೆ ಜೋರಾಗಿ ನಡೆದಿದ್ದು, ವಾರ್ನರ್ ಹಾಗೂ ವಿರಾಟ್ ನಡುವಿನ ಸಂಬಂಧ ಹಾಗೂ ಅನ್ಯೋನ್ಯತೆ ಕಂಡು ಅಭಿಮಾನಿಗಳೆಲ್ಲಾ, ಡೇವಿಡ್ ವಾರ್ನರ್ ಮುಂದಿನ ಭಾರಿ ಆರ್ಸಿಬಿ ತಂಡ ಸೇರಬೇಕು ಎಂಬ ಅಭಿಯಾನ ಶುರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿರುವ ನಿಮ್ಮ ಅನ್ಯೋನ್ಯತೆ ಆರ್ಸಿಬಿ ತಂಡದಲ್ಲಿಯೂ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಡೇವಿಡ್ ವಾರ್ನರ್ ಆರ್ಸಿಬಿ ತಂಡ ಸೇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.