ನಾಯಕನ ಸ್ಥಾನದಿಂದ ಕೊಹ್ಲಿಯನ್ನು ಕೆಳಗಿಳಿಸಿದ ಮೇಲೆ ಮೊದಲ ಬಾರಿಗೆ ಮಾತನಾಡಿದ ಗಂಗೂಲಿ, ಕೊಹ್ಲಿ ನನ್ನ ಮಾತನ್ನು ಅಂದು ಕೇಳಿಲ್ಲ ಎಂದು ಹೇಳಿದ್ದು ಯಾಕೆ ಗೊತ್ತೇ??

ನಾಯಕನ ಸ್ಥಾನದಿಂದ ಕೊಹ್ಲಿಯನ್ನು ಕೆಳಗಿಳಿಸಿದ ಮೇಲೆ ಮೊದಲ ಬಾರಿಗೆ ಮಾತನಾಡಿದ ಗಂಗೂಲಿ, ಕೊಹ್ಲಿ ನನ್ನ ಮಾತನ್ನು ಅಂದು ಕೇಳಿಲ್ಲ ಎಂದು ಹೇಳಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಕ್ರಿಕೇಟ್ ಪ್ರೇಮಿಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿವೆ‌. ವಿರಾಟ್ ಕೊಹ್ಲಿ ಈ ಹಿಂದೆ ಟಿ 20 ವರ್ಲ್ಡ್ ಕಪ್ ಸಮಯದಲ್ಲಿ ಮುಂಬರುವ ಸರಣಿಗಳಿಂದ ಟಿ 20 ತಂಡದ ನಾಯಕನ ಸ್ಥಾನದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಆದರೇ ಟೆಸ್ಟ್ ಹಾಗೂ ಏಕದಿನ ತಂಡಗಳ ನಾಯಕರಾಗಿ ಮುಂದುವರೆಯುವುದಾಗಿ ತಿಳಿಸಿದ್ದರು. ಆದರೇ ದಕ್ಷಿಣ ಆಫ್ರಿಕಾ ಸರಣಿಗೆ ಟೆಸ್ಟ್ ತಂಡಕ್ಕೆ ಮಾತ್ರ ವಿರಾಟ್ ಕೊಹ್ಲಿಯನ್ನ ನಾಯಕನನ್ನಾಗಿ ಮಾಡಿ, ಏಕದಿನ ಕ್ರಿಕೇಟ್ ತಂಡದ ನಾಯಕತ್ವವನ್ನ ರೋಹಿತ್ ಶರ್ಮಾಗೆ ವಹಿಸಿದೆ.

ಇನ್ನು ಈ ನಡುವೆ ಏಕಾಏಕಿ ವಿರಾಟ್ ಕೊಹ್ಲಿಯವರನ್ನ ನಾಯಕತ್ವದಿಂದ ಇಳಿಸಿದ ಬಗ್ಗೆ ಮೊದಲ ಭಾರಿಗೆ ಸೌರವ್ ಗಂಗೂಲಿ ಮಾತನಾಡಿದ್ದಾರೆ. ಟಿ 20 ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯುವುದಾಗಿ ವಿರಾಟ್ ಘೋಷಿಸಿದಾಗ, ಬಿಸಿಸಿಐ ಅವರನ್ನ ಸಂಪರ್ಕಿಸಿ ಸದ್ಯಕ್ಕೆ ಆ ಘೋಷಣೆಯನ್ನ ಹಿಂಪಡೆಯಿರಿ, ಸ್ವಲ್ಪ ದಿನಗಳ ಕಾಲ ನೀವೇ ಟಿ 20 ತಂಡದ ನಾಯಕರಾಗಿ ಮುಂದುವರೆಯಿರಿ ಎಂದು ಹೇಳಿದರೂ, ವಿರಾಟ್ ಕೊಹ್ಲಿ ಬಿಸಿಸಿಐ ನಿರ್ಧಾರವನ್ನ ತಿರಸ್ಕರಿಸಿದರು.

ಅದಲ್ಲದೇ ಟಿ 20 ಹಾಗೂ ಏಕದಿನ ಪಂದ್ಯಗಳು ವೈಟ್ ಬಾಲ್ ನಲ್ಲಿ ನಡೆಯುತ್ತವೆ. ಟೆಸ್ಟ್ ಕ್ರಿಕೇಟ್ ರೆಡ್ ಬಾಲ್ ನಲ್ಲಿ ನಡೆಯುತ್ತದೆ. ವೈಟ್ ಬಾಲ್ ಕ್ರಿಕೇಟ್ ನ ಎರಡು ಮಾದರಿಗಳಿಗೆ ಬೇರೆ ಬೇರೆ ನಾಯಕರಾಗುವುದು ಆಯ್ಕೆ ಸಮತಿಯ ದೃಷ್ಠಿಯಿಂದ ಸರಿ ಕಂಡಿರಲಿಲ್ಲ. ಹಾಗಾಗಿ ಆಯ್ಕೆ ಸಮಿತಿ, ಏಕದಿನ ತಂಡಕ್ಕೂ ರೋಹಿತ್ ಶರ್ಮಾರನ್ನ ನಾಯಕನ್ನಾಗಿ ಆಯ್ಕೆ ಮಾಡಿದೆ ಎಂದು ಹೇಳಿದರು‌. ಅದಲ್ಲದೇ ನಾಯಕತ್ವ ತೊರೆಯಿರಿ ಎಂದು 48 ಘಂಟೆಗಳ ಹಿಂದೆಯೇ ಬಿಸಿಸಿಐ ವಿರಾಟ್ ರನ್ನ ಸಂಪರ್ಕಿಸಿದರೂ ಅವರು ಉತ್ತರ ನೀಡಿರಲಿಲ್ಲ. ಹಾಗಾಗಿ ಬಿಸಿಸಿಐ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.