ಇದುವರೆಗೂ ತಮ್ಮ ಮದುವೆ ವಿಡಿಯೋ ಮಾರಾಟ ಮಾಡಿ ದುಡ್ಡು ಮಾಡಿದ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ?? ಕತ್ರಿನಾ ವಿಕ್ಕಿ ಅಷ್ಟೇ ಅಲ್ಲ, ಮತ್ಯಾರಿದ್ದಾರೆ ಗೊತ್ತಾ??

ಇದುವರೆಗೂ ತಮ್ಮ ಮದುವೆ ವಿಡಿಯೋ ಮಾರಾಟ ಮಾಡಿ ದುಡ್ಡು ಮಾಡಿದ ಸೆಲೆಬ್ರೆಟಿಗಳು ಯಾರ್ಯಾರು ಗೊತ್ತೇ?? ಕತ್ರಿನಾ ವಿಕ್ಕಿ ಅಷ್ಟೇ ಅಲ್ಲ, ಮತ್ಯಾರಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಅದ್ದೂರಿ ಮದುವೆಯ ಫೋಟೋ ಮತ್ತು ಮದುವೆಯ ವೀಡಿಯೋಗಳನ್ನು ಕೂಡ ವ್ಯಾಪರ ಮಾಡುತ್ತಿದ್ದಾರೆ. ಇದರಿಂದ ಅವರು ಕೋಟಿ ಕೋಟಿ ಹಣವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ನೋಡುವವರಿಗೆ ಈ ಸ್ಟಾರ್ ಸೆಲೆಬ್ರಿಟಿಗಳು ಯಾಕೆ ಇಷ್ಟೊಂದು ವೈಭೋಗದ ಅದ್ದೂರಿತನದ ಮದುವೆ ಆಗುತ್ತಾರೆ ಎಂಬುದಕ್ಕೆ ಇದೀಗ ಇಲ್ಲೊಂದು ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ.

ಆದರೆ ಈ ವಿಚಾರ ಸಂಗತಿಗಳು ಬಹುತೇಕರಿಗೆ ತಿಳಿದಿಲ್ಲ. ಹೌದು ಡಿಸೆಂಬರ್ 9 ರಂದು ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್ ನಟ ವಿಕ್ಕಿ ಕೌಶಲ್ ಅವರೊಂದಿಗೆ ಬಹಳ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಇವರ ಮದುವೆಗೆ ಬಾಲಿವುಡ್ ದಿಗ್ಗಜರು, ಗಣ್ಯಾತಿಗಣ್ಯ ವ್ಯಕ್ತಿಗಳು ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಿದ್ದಾರೆ. ಗಮನಿಸಬೇಕಾದ ವಿಚಾರ ಅಂದರೆ ಕತ್ರಿನಾ ಕೈಫ್ ಅವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮೊಬೈಲ್ ವೀಡಿಯೋ ಶೂಟ್ ಫೋಟೋ ಗೆ ಅವಕಾಶವಿಲ್ಲ ಎಂದು ಮಾಧ್ಯಮದವರಿಗೆ ನಿಷೇಧ ಎಂದು ಬರೆಸಲಾಗಿತ್ತು.

ತಮ್ಮ ಅದ್ದೂರಿ ವಿವಾಹದ ಫೋಟೋ ಮತ್ತು ವೀಡಿಯೋಗಳನ್ನು ಬಹಳ ಸುರಕ್ಷತೆಯಾಗಿ ಸಾರ್ವಜನಿಕವಾಗಿ ಲೀಕ್ ಆಗದ ಹಾಗೇ ಗೌಪ್ಯವಾಗಿ ಇರುವಂತೆ ನೋಡಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಅಂದರೆ ತಮ್ಮ ಮದುವೆಯ ಫೋಟೋಗಳನ್ನು ಮತ್ತು ವೀಡಿಯೋವನ್ನು ಓಟಿಟಿ ಪ್ಲಾಟ್ ಫಾರ್ಮ್ ವೊಂದಕ್ಕೆ ಕತ್ರಿನಾ ಕೈಫ್ ಅವರು ಬರೋಬ್ಬರಿ ನೂರು ಕೋಟಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹೊರ ಬಿದ್ದಿದೆ. ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ ಈ ಹಿಂದೆ ಮದುವೆಯಾದ ಅನೇಕ ಹಿಂದಿ ಸ್ಟಾರ್ ಗಳು ತಮ್ಮ ಮದುವೆಯ ಫೋಟೋ ಮತ್ತೂ ವೀಡಿಯೋ ಆಲ್ಬಂಗಳನ್ನು ಖಾಸಗಿ ವಾಹಿನಿಗಳು ಮತ್ತು ಮ್ಯಾಗ್ ಜಿ಼ನ್ ಗಳಿಗೆ ಮಾರಾಟ ಮಾಡಿಕೊಂಡಿದ್ದಾರೆ. ಅಂತಹ ಸ್ಟಾರ್ಸ್ ನೋಡುವುದಾದರೆ..

ಬಾಲಿವುಡ್ ಸ್ಟಾರ್ ನಟಿಯರಲ್ಲಿ ಒಬ್ಬರಾದ ನಟಿ ಪ್ರಿಯಾಂಕಾ ಚೋಪ್ರಾ 2018 ರಲ್ಲಿ ನಿಕ್ ಜೋನಾಸ್ ಎಂಬುವರನ್ನು ಮದುವೆ ಆದರು. ಇವರ ಮದುವೆಯ ಫೋಟೋಗಳು ಮತ್ತು ವೀಡಿಯೋ ಆಲ್ಬಂ ಅನ್ನು ಇಂಟರ್ ನ್ಯಾಶನಲ್ ಮ್ಯಾಗ್ ಜಿ಼ನ್ ಗಳು 18 ಕೋಟಿಗೆ ಖರೀದಿ ಮಾಡಿದ್ದರು‌. ಇನ್ನು ಖ್ಯಾತ ಕ್ರಿಕೆಟಿಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಿವುಡ್ ಸ್ಟಾರ್ ನಟಿಯಾದ ಅನುಷ್ಕಾ ಶರ್ಮಾ ಜೋಡಿ ತಮ್ಮ ಮದುವೆಯ ಫೋಟೋ ಗಳನ್ನು ಒಂದಷ್ಟು ಮ್ಯಾಗ್ ಜಿ಼ನ್ ಸಂಸ್ಥೆಗಳಿಗೆ ಮಾರಾಟ ಮಾಡಿ ಅದರಿಂದ ಬಂದಂತಹ ಆದಾಯವನ್ನು ದತ್ತಿ ಸಂಸ್ಥೆಗಳಿಗೆ ನೀಡಿ ನೆರವಾಗಿದ್ದರು ವಿರುಷ್ಕಾ ದಂಪತಿ.

ಅಂತೆಯೇ 2016 ರಲ್ಲಿ ಲಾಸ್ ಏಂಜಲೀಸ್ ನಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಬಾಲಿವುಡ್ ಮತ್ತೊಬ್ಬ ಸ್ಟಾರ್ ನಟಿಯಾದ ಪ್ರೀತಿ ಜಿಂಟಾ ಮತ್ತು ಜೀನ್ ಗುಡ್ ನಫ್ ಅವರು ಕೂಡ ತಮ್ಮ ಮದುವೆಯ ಫೋಟೋಗಳನ್ನು ಹರಾಜಿಗಿಟ್ಟು ಮಾರಾಟ ಮಾಡಿ ಅದರಿಂದ ಬಂದ ಆದಾಯವನ್ನು ಬಡ ಮಕ್ಕಳ ಶಿಕ್ಷಣಕ್ಕೆ ಮತ್ತು ವೃದ್ದಾಶ್ರಮಕ್ಕೆ ಹಣ ನೀಡಿ ನೆರವಾಗಿದ್ದರು. ಇದೀಗ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಂಪತಿಗಳು ಯಾವ ರೀತಿಯಾದ ಆಲೋಚನೆ ಮಾಡಿದ್ದಾರೆ ಎಂಬುದನ್ನ ಕಾದು ನೋಡಬೇಕಾಗಿದೆ.