ಆರ್ಸಿಬಿ ಈತನೇ ಬೆಸ್ಟ್ ನಾಯಕ ಎಂದು ಹೇಳಿಕೆ ನೀಡಿದ ಆಕಾಶ್ ಚೋಪ್ರಾ, ಈತ ಬೇಡವೇ ಬೇಡ ಎಂದ ನೆಟ್ಟಿಗರು. ಯಾರು ಮತ್ತು ಯಾಕೆ ಗೊತ್ತೇ??

ಆರ್ಸಿಬಿ ಈತನೇ ಬೆಸ್ಟ್ ನಾಯಕ ಎಂದು ಹೇಳಿಕೆ ನೀಡಿದ ಆಕಾಶ್ ಚೋಪ್ರಾ, ಈತ ಬೇಡವೇ ಬೇಡ ಎಂದ ನೆಟ್ಟಿಗರು. ಯಾರು ಮತ್ತು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಹಲವಾರು ನೀರಿಕ್ಷೆಗಳಿಗೆ ಕಾರಣವಾಗಿದೆ. ಇದೇ ಮೊದಲ ಭಾರಿ ಹೊಸದಾಗಿ ಎರಡು ತಂಡಗಳು ಸೇರಿಕೊಳ್ಳಲಿದ್ದು, ಇದರ ಜೊತೆ ಆಟಗಾರರೆಲ್ಲರೂ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುವುದರಿಂದ ಹೊಸದಾಗಿ ತಂಡಗಳು ಸಂಯೋಜನೆಗೊಳ್ಳುತ್ತವೆ. ಇದ್ದೆಲ್ಲಕ್ಕೂ ವಿಶೇಷ ಎಂಬಂತೆ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಭಾರಿ ಹೊಸ ನಾಯಕನ ಅಡಿಯಲ್ಲಿ ಆಡಲಿದೆ.

ಈಗಾಗಲೇ ಆರ್ಸಿಬಿ ತಂಡದ ಮುಂದಿನ ನಾಯಕ ಯಾರಾಗುತ್ತಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದ್ದು ಎಲ್ಲರೂ ಎಬಿ ಡಿ ವಿಲಿಯರ್ಸ್ ಮುಂದಿನ ನಾಯಕರಾಗಬಹುದು ಎಂದು ಹೇಳಿದ್ದರು. ಆದರೇ ಎಬಿಡಿ ಎಲ್ಲಾ ಮಾದರಿಯ ಕ್ರಿಕೇಟ್ ಗೆ ನಿವೃತ್ತಿ ಘೋಷಿಸಿದ ಕಾರಣ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸವೆಲ್ ಆಗಬಹುದು ಎಂದು ಊಹಿಸಲಾಗಿತ್ತು. ಆದರೇ ಈಗ ಭಾರತ ತಂಡದ ಮಾಜಿ ಆಟಗಾರ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಹೊಸ ಹೆಸರೊಂದನ್ನು ಸೂಚಿಸಿ ಇತನೇ ಮುಂದಿನ ಆರ್ಸಿಬಿ ತಂಡದ ನಾಯಕ ಎಂದು ಭವಿಷ್ಯ ನುಡಿದಿದ್ದಾರೆ.

ಅಷ್ಟಕ್ಕೂ ಆತ ಬೇರೆ ಯಾರೂ ಅಲ್ಲ, ವಿಂಡೀಸ್ ತಂಡದ ಆಲ್ ರೌಂಡರ್ ಜೇಸನ್ ಹೋಲ್ಡರ್‌. ಹೋಲ್ಡರ್ ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು. ಉತ್ತಮ ಆಲ್ ರೌಂಡರ್ ಆಗಿರುವ ಹೋಲ್ಡರ್ ಎರಡು ಭಾರಿ ನಾಯಕರಾಗಿ ವಿಂಡೀಸ್ ತಂಡ ಟಿ 20 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗುವಂತೆ ಮಾಡಿದ್ದರು. ಈ ಭಾರಿ ಆರ್ಸಿಬಿ ತಂಡ ಇವರನ್ನ ಹರಾಜಿನಲ್ಲಿ ಖರೀದಿಸಿ, ಇವರಿಗೆ ನಾಯಕನ ಪಟ್ಟ ಕಟ್ಟುವುದು ಬಹುತೇಖ ಖಚಿತ ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಜೇಸನ್ ಹೋಲ್ಡರ್ ಒಬ್ಬ ಉತ್ತಮ ಆಲ್ ರೌಂಡರ್ ಆಗಿದ್ದು, ನಾಲ್ಕು ಓವರ್ ಬೌಲಿಂಗ್ ಹಾಗೂ ಕೆಳ ಕ್ರಮಾಂಕದಲ್ಲಿ ಉತ್ತಮ ಬಿಗ್ ಹಿಟ್ ಬಾರಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಆರ್ಸಿಬಿ ತಂಡಕ್ಕೆ ಸದ್ಯ ಇವರು ಹೇಳಿ ಮಾಡಿಸಿದ ಆಟಗಾರರಾಗಿದ್ದಾರೆ. ನಾಯಕರಾಗಿಯೂ ಉತ್ತಮ ಅನುಭವ ಹೊಂದಿದ್ದಾರೆ. ಹೀಗಾಗಿ ಆರ್ಸಿಬಿ ತಂಡ ಇವರನ್ನ ಹರಾಜಿನಲ್ಲಿ ಖರೀದಿಸಿದರೇ, ಖಂಡಿತವಾಗಿಯೂ ನಾಯಕನ ಸ್ಥಾನಕ್ಕೆ ಅರ್ಹ ಅಭ್ಯರ್ಥಿಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಈ ಕುರಿತು ಆರ್ಸಿಬಿ ಅಭಿಮಾನಿಗಳು ಮಾತ್ರ ಬೇಡವೇ ಬೇಡ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.