ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಯೌಟ್ಯೂಬ್ ನಲ್ಲಿ RRR ಹಾಗೂ ಗಂಧದ ಗುಡಿ ಟ್ರೆಂಡಿಂಗ್ ನ ನಡುವೆ ರಾಜಮೌಳಿ ಗಂಧದ ಗುಡಿ ಟ್ರೈಲರ್ ನೋಡಿ ಹೇಳಿದ್ದೆ ಬೇರೆ. ಏನು ಗೊತ್ತೇ??

5

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಪುನೀತ್ ರಾಜಕುಮಾರ್ ಅವರನ್ನು ಕಳೆದು ಕೊಂಡು ಇಡೀ ಕರ್ನಾಟಕ ಇನ್ನು ಕೂಡ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲಿಯೂ ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದ ಮೇಲೆ ಅವರು ಮಾಡಿದ ಕಾರ್ಯಗಳು ಎಲ್ಲವೂ ಕೂಡ ಎಲ್ಲರಿಗೂ ತಿಳಿದ ಮೇಲೆ ನಿಜಕ್ಕೂ ಪುನೀತ್ ರಾಜಕುಮಾರ್ ಅವರನ್ನು ಕಳೆದು ಕೊಂಡಿದ್ದು ತುಂಬಲಾರದ ನಷ್ಟ ಎಂಬ ಮಾತುಗಳು ಸಾಮಾನ್ಯ ಅಭಿಮಾನಿಗಳಿಂದ ಅಲ್ಲ ಬದಲಾಗಿ ಚಿತ್ರರಂಗ, ಹಾಗೂ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಸೆಲೆಬ್ರಿಟಿಗಳಿಂದ ಕೂಡ ಕೇಳಿ ಬಂದಿದೆ.

ಇನ್ನು ಪುನೀತ್ ರವರ ಜೀವಮಾನದ ಕನಸಾಗಿದ್ದ ಗಂಧದ ಗುಡಿ ಟ್ರೈಲರ್ ಕೂಡ ಇದೀಗ ಬಿಡುಗಡೆಯಾಗಿದ್ದು ಪ್ರಕೃತಿಯ ಸೊಬಗನ್ನು ತೋರಿಸುವ ಅದ್ಭುತ ಸಿನಿಮಾವನ್ನು ಮಾಡಲು ಪುನೀತ್ ರಾಜಕುಮಾರ್ ರವರು ಎಷ್ಟೆಲ್ಲ ತಯಾರಿ ನಡೆಸಿದ್ದರು ಎಂಬುದು ಟ್ರೈಲರ್ ಮೂಲಕ ತಿಳಿದು ಬಂದಿದೆ. ಈ ಕಾರ್ಯಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಗಳು ವ್ಯಕ್ತವಾಗುತ್ತಿದ್ದು ಇದೀಗ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಬಾಹುಬಲಿ ಮೂಲಕ ಇಡೀ ಪ್ರಪಂಚದಲ್ಲಿ ಸದ್ದು ಮಾಡಿದ ರಾಜಮೌಳಿ ರವರು ಟ್ರೈಲರ್ ನೋಡಿ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಪುನೀತ್ ರವರ ಗಂಧದ ಗುಡಿ ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿರುವ ರಾಜಮೌಳಿ ರವರು ಗಂಧದ ಗುಡಿ ಟ್ರೈಲರ್ ನೋಡುವುದಕ್ಕೆ ನಿಜಕ್ಕೂ ಅಸಾಧಾರಣ ಎನಿಸುತ್ತದೆ, ಇದು ನಿಜಕ್ಕೂ ಪುನೀತ್ ರವರಿಗೆ ಹೃದಯತುಂಬಿ ನೀಡಲಾಗುವ ಗೌರವ. ಕರ್ನಾಟಕದ ಪ್ರಕೃತಿ ಸೊಬಗನ್ನು ಸಂಭ್ರಮಿಸಲು ಪುನೀತ್ ರಾಜಕುಮಾರ್ ಅವರು ಕನಸು ಕಂಡ ಡಾಕ್ಯುಮೆಂಟರಿ ನಿಜಕ್ಕೂ ಗಮನ ಸೆಳೆಯುತ್ತಿದೆ, ಈ ವಿಶಿಷ್ಟ ಪ್ರಯತ್ನ ಮಾಡಿದ್ದಕ್ಕಾಗಿ ಇಡೀ ಸಂಪೂರ್ಣ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.