2021 ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿ ಮಿಂಚು ಹರಿಸಿರುವಂತಹ ಟಾಪ್ 10 ಯುವ ನಾಯಕ ನಟಿಯರು ಯಾರ್ಯಾರು ಗೊತ್ತಾ??ಇವರಲ್ಲಿ ನಿಮ್ಮ ಫೇವರಿಟ್ ಯಾರು??

ನಮಸ್ಕಾರ ಸ್ನೇಹಿತರೇ ಕಳೆದ ಒಂದು ವರ್ಷದ ಹಿಂದೆ ಕನ್ನಡ ಚಿತ್ರರಂಗ ಸಂಪೂರ್ಣ ನಿಂತ ನೀರಿನಂತೆ ಯಾವುದೇ ಸಿನಿಮಾಗಳ ಬಿಡುಗಡೆ ಇಲ್ಲದೆ ಚಲನೆ ಇಲ್ಲದಂತೆ ಸ್ಥಗಿತಗೊಂಡಿತ್ತು. ಲಾಕ್ಡೌನ್ ನಿಂದಾಗಿ ಸಂಪೂರ್ಣವಾಗಿ ಡೌನ್ ಆಗಿದ್ದ ಕನ್ನಡ ಚಿತ್ರರಂಗ 2021 ರಲ್ಲಿ ಹಲವಾರು ಚಿತ್ರಗಳ ಮೂಲಕ ಮತ್ತೆ ಚಲನೆಗೆ ಬಂದಿತ್ತು. ಇನ್ನು 2021 ರಲ್ಲಿ ಹಲವಾರು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ಸನ್ನು ಕೂಡ ಸಾಧಿಸಿದ್ದವು.

ಇನ್ನು ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು 2021 ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂತಹ ಟಾಪ್-10 ಉದಯೋನ್ಮುಖ ನಟಿಯರ ಕುರಿತಂತೆ. ಹಾಗಿದ್ದರೆ ಈ ಸಾಲಿನಲ್ಲಿ ಯಾವೆಲ್ಲ ನಟಿಯರು ಕಾಣಸಿಗುತ್ತಾರೆ ಎಂಬುದನ್ನು ತಪ್ಪದೇ ಕೊನೆಯವರೆಗೂ ಓದಿ.

ಆಶಾ ಭಟ್ ಬಾಲಿವುಡ್ ಚಿತ್ರರಂಗದಲ್ಲಿ ಮಾಡೆಲ್ ಆಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದ ಭದ್ರಾವತಿ ಮೂಲದ ಕನ್ನಡದವರಾದ ಆಶಾ ಭಟ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಸಯ್ಯೇಶಾ ತಮಿಳು ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಹೆಸರು ಮಾಡಿರುವ ಸಯ್ಯೇಶಾ ರವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಯುವರತ್ನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಗಾನವಿ ಲಕ್ಷ್ಮಣ ಮಗಳು ಜಾನಕಿ ಎಂಬ ಸೀರಿಯಲ್ ನಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಗಾನವಿ ಲಕ್ಷ್ಮಣ್ ರಿಷಬ್ ಶೆಟ್ಟಿ ನಟನೆಯ ಹೀರೋ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ. ಮಡೋನ್ನಾ ಸೆಬಾಸ್ಟಿಯನ್ ಪ್ರೇಮಂ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಮೋಡಿಮಾಡಿದ್ದ ನಟಿ ಮಡೋನಾ ಸೆಬಾಸ್ಟಿಯನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ.

ಸುರಭಿ ತಮಿಳು ಹಾಗೂ ತೆಲುಗು ಚಿತ್ರ ಗಳಲ್ಲಿ ನಟಿಸಿರುವ ಸುರಭಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡುತ್ತಾರೆ. ಭೂಮಿಕ ಶೆಟ್ಟಿ ಕಿರುತೆರೆಯ ಯಶಸ್ವಿ ಧಾರವಾಹಿ ಕಿನ್ನರಿ ಹಾಗೂ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ನಂತರ ಇತ್ತೀಚಿಗಷ್ಟೇ ಭೂಮಿಕಾ ಶೆಟ್ಟಿ ನಟನೆಯಲ್ಲಿ ಮೂಡಿ ಬಂದಂತಹ ಇಕ್ಕಟ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು.

ರೆಬ ಮೋನಿಕಾ ಮಲಯಾಳಂ ಚಿತ್ರರಂಗದ ಬಹು ಬೇಡಿಕೆಯ ನಟಿ ರೆಬಾ ಮೋನಿಕ ಡಾಲಿ ಧನಂಜಯ್ ನಟನೆಯ ರತ್ನನ್ ಪ್ರಪಂಚ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು. ಧನ್ಯ ರಾಮ್ ಕುಮಾರ್ ರಾಜಕುಮಾರ್ ಕುಟುಂಬದ ಮೂರನೇ ಕುಡಿ ಹಾಗೂ ನಟ ರಾಮ್ ಕುಮಾರ್ ರವರ ಪುತ್ರಿಯಾಗಿರುವ ಧನ್ಯ ರಾಮ್ ಕುಮಾರ್ ರವರು ಸೂರಜ್ ಗೌಡ ನಟಿಸಿ ನಿರ್ದೇಶಿಸಿರುವ ನಿನ್ನ ಸನಿಹಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ.

ಕಯಾದು ಲೋಹರ್ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಪುತ್ರನಾಗಿರುವ ಮನೋರಂಜನ್ ರವಿಚಂದ್ರನ್ ನಟನೆಯ ಮುಗಿಲ್ಪೇಟೆ ಚಿತ್ರದಲ್ಲಿ ನಟಿಸುವ ಮೂಲಕ ಕಯಾದು ಲೋಹರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಬೃಂದಾ ಆಚಾರ್ಯ ಲವ್ಲಿ ಸ್ಟಾರ್ ಪ್ರೇಮ್ ನಟನೆಯ 25ನೇ ಚಿತ್ರವಾಗಿರುವ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಾಯಕ ನಟಿಯಾಗಿ ಬೃಂದಾ ಆಚಾರ್ಯರವರು ನಟಿಸಿ ಕನ್ನಡಿಗರ ಮನವನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ.

Post Author: Ravi Yadav