ಚಾಹಲ್ ರವರನ್ನು ತಂಡದಿಂದ ಕೈ ಬಿಟ್ಟು, ಅವರ ಬದಲಿಗೆ ಆರ್ಸಿಬಿ ಯಾರನ್ನು ತೆಗೆದುಕೊಳ್ಳಲಿದೆಯಂತೆ ಗೊತ್ತೆ?? ಚಾಹಲ್ ಸ್ಥಾನಕ್ಕೆ ಈತ ಸೂಕ್ತನೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಮೆಗಾ ಹರಾಜು ಹತ್ತಿರ ಬಂದಂತೆ ಈಗ ಹೊಸ ಹೊಸ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಆರ್ಸಿಬಿ ತಂಡ ಈ ಭಾರಿ ಯಾರನ್ನ ನಾಯಕನನ್ನಾಗಿ ಮಾಡಲಿದೆ ಹಾಗೂ ಯಾವ ಯಾವ ಆಟಗಾರರನ್ನ ಹರಾಜಿನಲ್ಲಿ ಖರೀದಿಸಲಿದೆ ಎಂಬುದರ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ಬಗ್ಗೆ ಮಾತನಾಡಿರುವ ಮಾಜಿ ಕ್ರಿಕೇಟಿಗ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ, ಆರ್ಸಿಬಿ ಅಭಿಮಾನಿಗಳಿಗೆ ಶಾಕಿಂಗ್ ವಿಷಯವೊಂದನ್ನ ಹೇಳಿದ್ದಾರೆ.

ರಿಟೈನ್ ಮಾಡಿಕೊಳ್ಳುವ ವಿಚಾರದಲ್ಲಿ ಆರ್ಸಿಬಿ ತನ್ನ ಪ್ರಮುಖ ಸ್ಪಿನ್ನರ್ ಯುಜವೇಂದ್ರ ಚಾಹಲ್ ರನ್ನ ಕೈ ಬಿಟ್ಟಿತ್ತು. ಹರಾಜಿನಲ್ಲಿ ಪುನಃ ಖರೀದಿಸುತ್ತದೆ ಎಂಬ ಆಶ್ವಾಸನೆ ಸಹ ನೀಡಲಾಗಿತ್ತು. ಆದರೇ ಆಕಾಶ್ ಪ್ರಕಾರ ಇದು ಅಸಾಧ್ಯವಂತೆ. ಚಾಹಲ್ ಹರಾಜಿನಲ್ಲಿ ಲಭ್ಯವಾದ ಕಾರಣ , ಅವರನ್ನ ಖರೀದಿಸಲು ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಪೈಪೋಟಿಗಿಳಿಯುತ್ತವೆ. ಸಹಜವಾಗಿಯೇ ಅವರು ದೊಡ್ಡ ಮೊತ್ತಕ್ಕೆ ಸೇಲ್ ಆಗುತ್ತಾರೆ. ಹೀಗಾಗಿ ಆರ್ಸಿಬಿ ಚಾಹಲ್ ಮೇಲಿನ ಆಸೆ ಕೈ ಬಿಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಯುಜವೇಂದ್ರ ಚಾಹಲ್ ಬದಲು ಆರ್ಸಿಬಿ ತಂಡ ರಾಹುಲ್ ಚಾಹರ್ ಅಥವಾ ರವಿ ಬಿಷ್ಣೋಯಿ ಮೇಲೆ ಕಣ್ಣಿಡುತ್ತದೆ. ಅವರು ಸಹ ಐಪಿಎಲ್ ನಲ್ಲಿ ಉತ್ತಮ ದಾಳಿ ನಡೆಸಿದ್ದಾರೆ. ತಮ್ಮ ಲೆಗ್ ಸ್ಪಿನ್ ಮೋಡಿಯಿಂದ ಹಲವಾರು ವಿಕೇಟ್ ಕಬಳಿಸಿದ್ದಾರೆ. ಇನ್ನು ತಮಿಳುನಾಡಿನ ಮುರುಗನ್ ಅಶ್ವಿನ್ ಸಹ ಉತ್ತಮ ಲೆಗ್ ಸ್ಪಿನ್ನರ್. ಇವರ ಮೇಲೂ ಸಹ ಆರ್ಸಿಬಿ ಕಣ್ಣಿಡಲಿದೆ. ಅದಲ್ಲದೇ ಕರ್ನಾಟಕದವರೇ ಆದ ಶ್ರೇಯಸ್ ಗೋಪಾಲ್ ಹಾಗೂ ಕೆಸಿ ಕಾರ್ಯಪ್ಪ ಸಹ ಉತ್ತಮ ಬೌಲರ್ ಗಳಾಗಿದ್ದು, ಆರ್ಸಿಬಿ ಅವರನ್ನು ಸಹ ಖರೀದಿಸಬಹುದು ಎಂಬ ಅಭಿಪ್ರಾಯಪಟ್ಟಿದ್ದಾರೆ. ಆದರೇ ಯಾವುದೇ ಕಾರಣಕ್ಕೂ ಯುಜವೇಂದ್ರ ಚಾಹಲ್ ಆರ್ಸಿಬಿ ತಂಡಕ್ಕೆ ವಾಪಸ್ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav