ನಾಳೆ ಪ್ರಭು ಶ್ರೀ ರಾಮನು ಸೀತಾ ಮಾತೆಯನ್ನು ವಿವಾಹವಾದ ದಿನ, ಈ ದಿನ ಮದುವೆಗೆ ಒಳ್ಳೆಯದಲ್ಲ ಆದರೆ ಸುಖಕರ ಜೀವನಕ್ಕೆ ಈ ರೀತಿ ಪೂಜೆ ಮಾಡಿ. ಮುಹೂರ್ತ ಏನು ಗೊತ್ತೇ??

ನಾಳೆ ಪ್ರಭು ಶ್ರೀ ರಾಮನು ಸೀತಾ ಮಾತೆಯನ್ನು ವಿವಾಹವಾದ ದಿನ, ಈ ದಿನ ಮದುವೆಗೆ ಒಳ್ಳೆಯದಲ್ಲ ಆದರೆ ಸುಖಕರ ಜೀವನಕ್ಕೆ ಈ ರೀತಿ ಪೂಜೆ ಮಾಡಿ. ಮುಹೂರ್ತ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆಗೆ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವಿದೆ. ಇಲ್ಲಿ ವಿವಾಹಿತರಿಗೆ, ಸರಿಯಾಗಿ ಸಂಸಾರ ತೋಗಿಸುತ್ತಿರುವವರಿಗೆ ಒಂದು ಹಿಡಿ ಗೌರವ ಜಾಸ್ತಿಯೇ ಎಂದರೆ ತಪ್ಪಾಗಲಿಕ್ಕಿಲ್ಲ. ಭೂಲೋಕದಲ್ಲಿ ಮಾತ್ರವಲ್ಲ, ಪೌರಾಣಿಕ ಕಥೆಗಳ ಪ್ರಕಾರ ದೇವಾನುದೇವತೆಗಳಿಗೂ ಕೂಡ ಮದುವೆ ಎನ್ನುವುದು ಸಂಭ್ರಮದ ವಿಚಾರ. ಶ್ರೀರಾಮಚಂದ್ರ ಹಾಗೂ ಸೀತಾಮಾತೆಯ ವಿವಾಹ ಹಲವರಿಗೆ ಮಾದರಿ. ರಾಮ ಸೀತೆಯ ವಿವಾಹದ ದಿನವನ್ನೇ ವಿವಾಹ ಪಂಚಮಿ ಎಂದು ಕರೆಯಲಾಗುತ್ತದೆ.

ಹೌದು ಡಿಸೆಂಬರ್ 8 ವಿವಾಹ ಪಂಚಮಿ ಅಂದರೆ ರಾಮ ಸೀತೆಯನ್ನು ಸ್ವಯಂವರದಲ್ಲಿ ಮದುವೆಯಾದ ಶುಭ ದಿನ. ದೇವ ಲೋಕದಲ್ಲಿ ಮಾತ್ರವಲ್ಲದೇ ಭೂಲೋಕದಲ್ಲಿಯೂ ಕೂಡ ಶ್ರೀರಾಮದ ವಿವಾಹಕ್ಕೂ ಮಹತ್ತರ ಸ್ಥಾನವಿದೆ. ಈ ಶುಭದಿನದಂದು ಭಕ್ತಿಯಿಂದ ರಾಮ-ಸೀತೆಯನ್ನು ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ವಿಶೇಷವಾದ ಪೂಜೆಗಳನ್ನು ಮಾಡಬೇಕು.

ವಿವಾಹ ಪಂಚಮಿಯ ಮುಹೂರ್ತ ಹೀಗಿದೆ: ಈ ವರ್ಷ ವಿವಾಹ ಪಂಚಮಿಯು ಡಿಸೆಂಬರ್ 07 ರ ರಾತ್ರಿ 11:40ಕ್ಕೆ ಪ್ರಾರಂಭವಾಗುತ್ತದೆ ಹಾಗೂ ಮರುದಿನ ಅಂದರೆ ಡಿಸೆಂಬರ್ 08ರ ರಾತ್ರಿ 09.25ಕ್ಕೆ ಕೊನೆಗೊಳ್ಳುತ್ತದೆ. ಇವತ್ತು ದಿನವಿಡೀ ಶ್ರೀ ರಾಮ ಮತ್ತು ಮಾತಾ ಸೀತೆಯ ಧ್ಯಾನದಲ್ಲಿಯೇ ಮಗ್ನರಾಗಿದ್ದವರಿಗೆ ಖಂಡಿತವಾಗಿಯೂ ಶುಭಫಲ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಇನ್ನು ವಿವಾಹ ಪಂಚಮಿಯ ದಿನ ಹೇಗೆ ಪೂಜೆ ಮಾಡಬೇಕು ಎಂದರೆ, ಮುಂಜಾನೆ ಎದ್ದು ಸ್ನಾನಾದಿಗಳನ್ನು ಮಾಡಿ ಶುಭ್ರವಾದ ಬಟ್ಟೆ ತೊಟ್ಟು ಶ್ರೀರಾಮ-ಸೀತಾ ಪೂಜೆ ಮಾಡಬೇಕು. ಮೊದಲು ಸೂರ್ಯದೇವನಿಗೆ ನಮಸ್ಕರಿಸಿ ಪೂಜೆ ಆರಂಭಿಸಬೇಕು. ಇದಕ್ಕಾಗಿ ಚೌಕದ ಮೇಲೆ ರಾಮ, ಸೀತೆಯ ವಿಗ್ರಹ ಅಥವಾ ಪಟ ನಿಲ್ಲಿಸಿ ರಾಮನಿಗೆ ಹಳದಿ ಬಟ್ಟೆ ಮತ್ತು ಸೀತಾ ದೇವಿಗೆ ಕೆಂಪು ಬಟ್ಟೆಗಳ ಅಲಂಕಾರ ಮಾಡಿ. ಹಣ್ಣು, ಹೂವುಗಳನ್ನು ಇಟ್ಟು, ದೀಪ ಬೆಳಗಿಸಿ, ಧೂಪ ಇಟ್ಟು ನೈವೇದ್ಯ ಮಾಡಿ, ಪೂಜಿಸಬೇಕು. ಪೂಜೆಯನ್ನು ಮುಗಿಸುವ ಮೊದಲು “ಓಂ ಜಾನಕಿವಲ್ಲಭಾಯೇ ನಮಃ” ಎಂದು 108 ಬಾರಿ ಪಠಿಸಿ ನಂತರ ರಾಮ ಹಾಗೂ ಸೀತಾ ಮಾತೆಗೆ ಆರತಿ ಬೆಳಗಿ ಕೈ ಮುಗಿದು ಪ್ರಸಾದ ಸ್ವೀಕರಿಸಬೇಕು.

ಇನ್ನು ಅವಿವಾಹಿತರು ವಿವಾಹ ಪಂಚಮಿಯಂದು ಉಪವಾಸ ಮಾಡಿ ತಮ್ಮಿಷ್ಟದ ವರ/ವಧುವನ್ನು ಪಡೆಯಲು ಪ್ರಾರ್ಥಿಸಿ. ಜೊತೆಗೆ ರಾಮ ಹಾಗೂ ಸೀತಾ ಕಲ್ಯಾಣದ ಕಥೆಯನ್ನು ಈ ದಿನ ಓದುವುದು/ ಕೇಳುವುದು ಪುಣ್ಯದ ಕೆಲಸ ಎನ್ನಲಾಗುತ್ತದೆ. ಇಷ್ಟು ಶುಭದಿನವಾಗಿದ್ದರೂ ಕೂಡ ಕೆಲವು ಕಡೆ ಈ ದಿನವನ್ನು ಮದುವೆಗೆ ಅಶುಭ ಎಂದು ಪರಿಗಣಿಸಲಾಗುತ್ತದೆ. ಕಾರಣ, ಈ ದಿನ ಸೀತಾ ಮಾತೆ ಶ್ರೀ ರಾಮನನ್ನು ವಿವಾಹವಾಗಿದ್ದರೂ ಕೂಡ, ಆಕೆ ತನ್ನ ವೈವಾಹಿಕ ಜೀವನದಲ್ಲಿ ಅತೃಪ್ತಳಾಗಿದ್ದಳು ಎಂಬುದು. ಬಿಹಾರ, ನೇಪಾಳದಂಥ ಸ್ಥಳಗಳಲ್ಲಿ ಈ ದಿನ ಅಶುಭ ಎಂದು ಪರಿಗಣಿಸಲಾಗುತ್ತಿದೆ.