ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಐಪಿಎಲ್ ಅಭಿಮಾನಿಗಳೇ ಮತ್ತೊಂದು ಸಿಹಿ ಸುದ್ದಿ, ಹರಾಜಿಗೂ ಮುನ್ನ ಐಪಿಎಲ್ ನಲ್ಲಿ ಮಹತ್ವದ ಬದಲಾವಣೆ ಘೋಷಿಸಿದ ಬಿಸಿಸಿಐ. ಏನು ಗೊತ್ತೇ??

16

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇಷ್ಟು ವರ್ಷಗಳ ಕಾಲ ನಡೆದ ಐಪಿಎಲ್ ಟ್ರೋಫಿಗೂ, ಈ ವರ್ಷದಿಂದ ನಡೆಯಲಿರುವ ಐಪಿಎಲ್ ಟ್ರೋಫಿಗೂ ಅಜಗಜಾಂತರ ವ್ಯತ್ಯಾಸ ಇರಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಎಲ್ಲರಿಗೂ ತಿಳಿದಿರುವಂತೆ ಈ ಭಾರಿ ಐಪಿಎಲ್ ಗೆ ಲಕ್ನೋ ಹಾಗೂ ಅಹಮದಾಬಾದ್ ಎಂಬ ಎರಡು ಹೊಸ ತಂಡಗಳು ಸೇರಿಕೊಂಡಿವೆ. ಹಾಗಾಗಿ ಈ ಭಾರಿ ಐಪಿಎಲ್ ಹಣಾಹಣಿ ಎಂಟು ತಂಡಗಳ ಬದಲಿಗೆ ಹತ್ತು ತಂಡಗಳ ಮಧ್ಯೆ ನಡೆಯಲಿದೆ.

ಈ ಹಿಂದೆ ಎಂಟು ತಂಡಗಳ ಪರಸ್ಪರ ಸೆಣಸುತ್ತಿದ್ದವು. ಒಮ್ಮೆ ತಮ್ಮ ತವರು ನೆಲದಲ್ಲಿ ಮತ್ತೊಮ್ಮೆ ಎದುರಾಳಿ ತಂಡದ ತವರು ನೆಲದಲ್ಲಿ. ಹೀಗಾಗಿ ಒಟ್ಟು 60 ಲೀಗ್ ಪಂದ್ಯಗಳು ನಡೆಯುತ್ತಿದ್ದವು. ಇದೊಂದು ರೀತಿ ರೌಂಡ್ ರಾಬಿನ್ ಲೀಗ್ ನಿಯಮದಡಿ ನಡೆಯುತ್ತಿತ್ತು. ಆದರೇ ಈ ಭಾರಿ ಹತ್ತು ತಂಡಗಳ ಮಧ್ಯೆ ರೌಂಡ್ ರಾಬಿನ್ ಲೀಗ್ ಪ್ರಕಾರ ಪಂದ್ಯ ನಡೆಸಿದರೇ 90 ಲೀಗ್ ಪಂದ್ಯಗಳು ನಡೆಯಬೇಕಾಗುತ್ತದೆ. ಟೂರ್ನಿಯ ಅವಧಿ ಎರಡು ತಿಂಗಳಿಗಿಂತ ಜಾಸ್ತಿ ಸಮಯ ಹಿಡಿಯುತ್ತದೆ. ಹೀಗಾಗಿ ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಪರಸ್ಪರ ಎರಡೆರೆಡು ಪಂದ್ಯಗಳನ್ನ ಆಡಿಸಲು ನಿರ್ಧರಿಸಿದೆ. ನಂತರ ಗುಂಪಿನ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಮುಂದಿನ ಸುತ್ತಿಗೆ ತೇರ್ಗಡೆಯಾಗಲಿವೆ.

ಇನ್ನು ಕೇವಲ ಫ್ರಾಂಚೈಸಿ ನಗರಗಳಲ್ಲಿ ಮಾತ್ರ ಟೂರ್ನಿ ನಡೆಸಿದರೇ ಐಪಿಎಲ್ ನ ಜನಪ್ರಿಯತೆ ಕಡಿಮೆಯಾಗಬಹುದು ಎಂದು ಭಾವಿಸಿರುವ ಬಿಸಿಸಿಐ ಈ ಭಾರಿ ತಟಸ್ಥ ಸ್ಥಳಗಳಲ್ಲಿಯೂ ಪಂದ್ಯಗಳನ್ನು ಆಡುವಂತೆ ಫ್ರಾಂಚೈಸಿಗಳಾಗೆ ಸಲಹೆ ನೀಡಿದೆ. ಈ ಹಿಂದೆ ಕಿಂಗ್ಸ್ ಪಂಜಾಬ್ ತಂಡ ಮೊಹಾಲಿ ಜೊತೆಜೊತೆಗೆ ಧರ್ಮಶಾಲಾದಲ್ಲಿಯೂ ಪಂದ್ಯಗಳನ್ನು ಆಡಿತ್ತು. ಚೆನ್ನೈ ತಂಡ ಇಂದೋರ್ ನಲ್ಲಿ ಆಡಿತ್ತು. ಹಾಗಾಗಿ ಈ ಭಾರಿ ರಾಂಚಿ, ಕೊಚ್ಚಿನ್, ವಿಶಾಖಪಟ್ಟಣಂ, ಕಾನ್ಪುರ, ಗುವಾಹಟಿ ಮುಂತಾದ ಸ್ಥಳಗಳಲ್ಲಿಯೂ ಸಹ ಐಪಿಎಲ್ ಟೂರ್ನಿ ನಡೆಸುವ ಮೂಲಕ ಫ್ರಾಂಚೈಸಿಗಳ ಮೇಲಿನ ಟೆನ್ಶನ್ ಹಾಗೂ ಕ್ರೀಡಾಂಗಣದ ಸುರಕ್ಷತೆಗೃ ಆದ್ಯತೆ ನೀಡುವತ್ತ ಗಮನ ಹರಿಸಿದೆ. ಇದಲ್ಲದೇ ಇನ್ನು ಹಲವಾರು ಬದಲಾವಣೆಗಳ ಸುಳಿವು ನೀಡಿರುವ ಬಿಸಿಸಿಐ, ತಂಡಗಳ ಸಂಯೋಜನೆ ಬಗ್ಗೆಯೂ ಹೊಸ ನಿಯಮ ತರಬಹುದು ಎನ್ನಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.