ಬಿಗ್ ನ್ಯೂಸ್: ಸೈಲೆಂಟ್ ಆಗಿ ಕೆಲಸ ಮಾಡಿ ಮುಗಿಸಿದ ಭಾರತ. 10 ವರ್ಷಗಳ ಐತಿಹಾಸಿಕ ನಿರ್ಧಾರಕ್ಕೆ ಸಹಿ ಹಾಕಿದ ಭಾರತ ಇಸ್ರೇಲ್. ಏನು ಗೊತ್ತೇ??

ಬಿಗ್ ನ್ಯೂಸ್: ಸೈಲೆಂಟ್ ಆಗಿ ಕೆಲಸ ಮಾಡಿ ಮುಗಿಸಿದ ಭಾರತ. 10 ವರ್ಷಗಳ ಐತಿಹಾಸಿಕ ನಿರ್ಧಾರಕ್ಕೆ ಸಹಿ ಹಾಕಿದ ಭಾರತ ಇಸ್ರೇಲ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗುವತ್ತ ದಾಪುಗಾಲಿಡುತ್ತಿರುವುದು ನಿಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಇಷ್ಟು ವರ್ಷಗಳ ಕಾಲ ರಕ್ಷಣೆಗೆ ಬೇಕಾಗುತ್ತಿದ್ದ ಸುಧಾರಿತ ಶಸ್ತ್ರಾಸ್ತ್ರಗಳನ್ನ ಆಮದು ಮಾಡಿಕೊಳ್ಳುತ್ತಿದ್ದ ಅತಿ ದೊಡ್ಡ ದೇಶ ಭಾರತ, ಇಂದು ರಫ್ತು ಮಾಡುವ ದೇಶವಾಗಿ ಬೆಳೆದಿದೆ. ಭಾರತದ ಬಳಿ ಸಹ ಈಗ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇವೆ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಮತ್ತೊಂದು ಶಕ್ತಿಶಾಲಿ ದೇಶ ಇಸ್ರೇಲ್ ನೊಂದಿಗೆ ಈಗ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ರಕ್ಷಣಾ ಕ್ಷೇತ್ರಕ್ಕೆ ಸಂಭಂದಿಸಿದಂತೆ ಒಟ್ಟು ಹತ್ತು ವರ್ಷಗಳ ಯೋಜನೆಗಳನ್ನ ರೂಪಿಸುವ ಟಾಸ್ಕ್ ಫೋರ್ಸ್ ರಚನೆಗೆ ಮುಂದಾಗಿವೆ.

ಹೊರದೇಶದಲ್ಲಿ ನಡೆದ ಭಾರತ ಹಾಗೂ ಇಸ್ರೇಲ್ ನಡುವೆ ನಡೆದ ಜಂಟಿ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಸಮಿತಿ ಮುಖ್ಯಸ್ಥ ಡಾಕ್ಟರ್ ಅಜಯ್ ಕುಮಾರ್ ಹಾಗೂ ಇಸ್ರೇಲ್ ರಕ್ಷಣಾ ಸಮಿತಿ ಮುಖ್ಯಸ್ಥ ಅಮೀರ್ ಇಶೆಲ್ , ಈ ಸಮಿತಿ ರಚಿಸುವ ನಿರ್ಧಾರಕ್ಕೆ ಪರಸ್ಪರ ಸಹಿ ಹಾಕಿದ್ದಾರೆ. ಈ ಒಪ್ಪಂದದ ಪ್ರಕಾರ ಭಾರತ ಹಾಗೂ ಇಸ್ರೇಲ್ ಎರಡು ದೇಶಗಳು ಮುಂಬರುವ ಹತ್ತು ವರ್ಷಗಳಲ್ಲಿ ರಕ್ಷಣೆಯ ವಿಷಯವಾಗಿ ಪರಸ್ಪರ ಸಹಕಾರ ನೀಡಲು ಒಮ್ಮತ ಸೂಚಿಸಿವೆ.

ಅದರಂತೆ ಜಂಟಿ ಸಮರಾಭ್ಯಾಸ, ಇಂಡಸ್ಟ್ರಿ ಕೋ ಆಪರೇಷನ್, ಡಿಫೇನ್ಸ್ ನೇಮಕಾತಿ, ಹೊಸ ಸಂಶೋಧನೆ ಮತ್ತು ಅಭಿವೃದ್ಧಿ, ನೂತನ ತಂತ್ರಜ್ಞಾನಗಳ ಹಂಚಿಕೆ, ಸೈನ್ಯದ ಮೌಲ್ಯಮಾಪನ ಹೀಗೆ ಹತ್ತು ಹಲವು ವಿಷಯಗಳಿದ್ದೂ, ಈ ಒಪ್ಪಂದ ಎರಡು ದೇಶಗಳಿಗೂ ಹಲವಾರು ಲಾಭಗಳನ್ನು ತಂದು ಕೊಡಲಿದೆ. ಭಾರತ ಹಾಗೂ ಇಸ್ರೇಲ್ ನಲ್ಲಿರುವ ಸಂಪನ್ಮೂಲಗಳ ಸಮರ್ಥ ಬಳಕೆ, ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಹಂಚಿಕೆ, ನೂತನ ರಕ್ಷಣಾ ಕೈಗಾರಿಕೆಗಳು, ರಫ್ತು ಮತ್ತು ಆಮದು, ಸುಧಾರಿತ ಶಸ್ತ್ರಾಸ್ತ್ರಗಳ ಮೌಲ್ಯಮಾಪನ ಈ ಎಲ್ಲಾ ಕಾರ್ಯಗಳು ಇನ್ಮುಂದೆ ಸುಲಲಿತವಾಗಲಿವೆ. ಹಾಗೂ ಸಮಯ ಹಾಗೂ ಹಣದ ಶ್ರಮವನ್ನು ಬಹಳಷ್ಟು ಉಳಿಸಲಿದೆ ಎಂಬ ಅಭಿಪ್ರಾಯ ಸಹ ವ್ಯಕ್ತವಾಗಿದೆ. ಒಟ್ಟಿನಲ್ಲಿ ಇಸ್ರೇಲ್ ಸ್ನೇಹ ಭಾರತದ ಜೊತೆ ಮತ್ತಷ್ಟು ಗಟ್ಟಿಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.