ಇದ್ದಕ್ಕಿದ್ದ ಹಾಗೆ ಮತ್ತೆ ಬೆಂಗಳೂರಿಗೆ ಬಂದ ಖ್ಯಾತ ನಟಿ ರಮ್ಯಾ. ಬೆಂಗಳೂರಿನಲ್ಲಿ ಇಳಿದ ತಕ್ಷಣ ವ್ಯವಸ್ಥೆಯ ಕುರಿತು ಹೇಳಿದ್ದೇನು ಗೊತ್ತೇ?? ಮೋದಿ ಫ್ಯಾನ್ಸ್ ಫುಲ್ ಕುಶ್.

ಇದ್ದಕ್ಕಿದ್ದ ಹಾಗೆ ಮತ್ತೆ ಬೆಂಗಳೂರಿಗೆ ಬಂದ ಖ್ಯಾತ ನಟಿ ರಮ್ಯಾ. ಬೆಂಗಳೂರಿನಲ್ಲಿ ಇಳಿದ ತಕ್ಷಣ ವ್ಯವಸ್ಥೆಯ ಕುರಿತು ಹೇಳಿದ್ದೇನು ಗೊತ್ತೇ?? ಮೋದಿ ಫ್ಯಾನ್ಸ್ ಫುಲ್ ಕುಶ್.

ನಮಸ್ಕಾರ ಸ್ನೇಹಿತರೇ ನಟಿ ರಮ್ಯಾ ಕನ್ನಡದ ಸೂಪರ್ ಹಿರೋಯಿನ್. ಯಾರೇ ಬರಲಿ, ಯಾರೇ ಬಿಡಲಿ ನಿನ್ ರೇಂಜಿಗೆ ಯಾರಿಲ್ಲ ಎಂದು ಈಗಲೂ ಸಹ ಅಭಿಮಾನಿಗಳು ಹೇಳುತ್ತಿರುತ್ತಾರೆ‌. ಈಗ ನಟಿ ರಮ್ಯಾ ಮೊದಲಿನಂತೆ ಕನ್ನಡದ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೇ ಆಗಾಗ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತ್ಯಕ್ಷರಾಗುತ್ತಿರುತ್ತಾರೆ.

ರಾಜಕೀಯದಿಂದ ಹೊರಬಂದ ಬಳಿಕ ರಮ್ಯಾ ಸಿನಿಮಾ ಕಡೆ ಮತ್ತೆ ಮುಖ ಹಾಕುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೇ ಅದಿನ್ನು ನಿಜವಾಗಿಲ್ಲ. ಹಲವಾರು ಬಾರಿ ಈ ಕುರಿತು ಸುದ್ದಿಗಳು ಕೇಳಿ ಬಂದರು ಕೂಡ ಯಾವ ಸಿಹಿ ಸುದ್ದಿ ಕೂಡ ನೀಡಿಲ್ಲ. ಇನ್ನು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಇವರು, ಕೇಂದ್ರದ ಬಗ್ಗೆ ಟೀಕೆಗಳ ಬಾಣಗಳನ್ನು ಸುರಿಸುತ್ತಾರೆ.

ಇನ್ನು ಮೊನ್ನೆ ರಮ್ಯಾರ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದು ಸಖತ್ ವೈರಲ್ ಆಗಿದೆ. ವಿಮಾನದ ಮೂಲಕ ಬೆಂಗಳೂರಿಗೆ ಬಂದಿಳಿದ ರಮ್ಯಾ, ಅಲ್ಲಿನ ಏರ್ ಪೋರ್ಟ್ ನಲ್ಲಿ ಕೋರೋನಾ ಟೆಸ್ಟಿಂಗ್ ಬಗ್ಗೆ ತಮ್ಮ ರಿಯಾಲಿಟಿ ಚೆಕ್ ಬಗ್ಗೆ ಬರೆದುಕೊಂಡಿದ್ದಾರೆ. ವಿಮಾನದಿಂದ ಬಂದಿಳಿಯುವ ಪ್ರಯಾಣಿಕರಿಗೆ ಸರಿಯಾಗಿ ಕೋವಿಡ್ ಟೆಸ್ಟ್ ಸುಲಭವಾಗಿ ನಡೆಯುತ್ತಿದೆ. ಯಾವುದೇ ಗೊಂದಲ ಇಲ್ಲದೆಯೇ ಡಾಕ್ಟರ್ ಗಳು ಚೆಕ್ ಮಾಡುತ್ತಿದ್ದಾರೆ. ವೈದ್ಯರು, ನರ್ಸ್‌ಗಳು, ಅಧಿಕಾರಿಗಳು ಮತ್ತು ಅಲ್ಲಿನ ಉದ್ಯೋಗಿಗಳು ಕೋವಿಡ್‌ ಟೆಸ್ಟ್‌ಗಾಗಿ ಬಹಳ ಅದ್ಭುತವಾದ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಕೆಲವರು ಇದನ್ನು ಮೋದಿ ರವರ ನಾಯಕತ್ವ ಅಂದ್ರೆ ಹೀಗೆ ಇರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.