ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮತ್ತೊಮ್ಮೆ ಕಣ್ಣೀರು ಹಾಕಿ ಬೇಡಿದ ಶಿವಣ್ಣ, ನಮ್ಮ ಮನೆ ವಿಚಾರದಲ್ಲಿ ಈ ರೀತಿ ಮಾಡಬೇಡಿ ಎಂದಿದ್ದು ಯಾಕೆ ಗೊತ್ತೇ??

12

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಈಗಾಗಲೇ ಹಲವಾರು ದಿನಗಳು ಕಳೆದರೂ ಕೂಡ ಇಂದಿಗೂ ಅವರ ಹೆಸರಿನಲ್ಲಿ ನಾಡಿನಾದ್ಯಂತ ಹಲವಾರು ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯುತ್ತವೆ. ಇಂದಿಗೂ ಅವರ ದರ್ಶನವನ್ನು ಪಡೆಯಲು ಅವರ ಸಮಾಧಿಗೆ ದಿನಕ್ಕೆ ಹತ್ತರಿಂದ ಹದಿನೈದು ಸಾವಿರ ಜನರವರೆಗೂ ಕೂಡ ಬಂದು ಹೋಗುತ್ತಾರೆ. ಇದು ಪುನೀತ್ ರಾಜಕುಮಾರ್ ರವರು ಕನ್ನಡ ನಾಡಿನಲ್ಲಿ ಸಂಪಾದಿಸಿದ ನಿಜವಾದ ಸಂಪಾದನೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಜನರ ಪ್ರೀತಿಯನ್ನು ಸಂಪಾದಿಸುವುದು ಮನುಷ್ಯನ ಜೀವನದಲ್ಲಿ ಅತ್ಯಂತ ಕಷ್ಟವಾದ ಕೆಲಸ ಎಂದು ಹೇಳುತ್ತಾರೆ ಆದರೆ ಪುನೀತ್ ರಾಜಕುಮಾರ್ ಅವರು ಈ ಕೆಲಸವನ್ನು ಅತ್ಯಂತ ಸುಲಭವಾಗಿ ಮಾಡಿ ಮುಗಿಸಿದ್ದಾರೆ ಎಂದರೆ ಅವರು ಎಷ್ಟು ಜನರನ್ನು ಸಂಪಾದಿಸಿದ್ದಾರೆ ಎಂದು ಅಂದಾಜು ಹಾಕಿ ಕೊಳ್ಳಬಹುದಾಗಿದೆ. ಇನ್ನು ಇತ್ತೀಚಿಗಷ್ಟೇ ಆರ್ಯ ಈಡಿಗರ ಸಂಘ ಪುನೀತ್ ರಾಜಕುಮಾರ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಶಿವಣ್ಣನವರು ಬಿಕ್ಕಿಬಿಕ್ಕಿ ಅಳುತ್ತಿದ್ದ ಎಲ್ಲರ ಹೃದಯವನ್ನು ಹಿಂಡುವಂತಿತ್ತು. ಈ ಸಮಯದಲ್ಲಿ ಅಪ್ಪು ಅವರ ಕುರಿತಂತೆ ಮಾತನಾಡುವಾಗಲೂ ಕೂಡ ಶಿವಣ್ಣರವರ ಗದ್ಗದಿತರಾದರು.

ಅಪ್ಪು ಇಲ್ಲೇ ಎಲ್ಲೋ ಹೋಗಿದ್ದಾನೆ ಬತ್ತೆ ಬರುತ್ತಾನೆ ಎಂಬ ಭ್ರಮೆಯಲ್ಲಿ ನಾವು ಜೀವನಪೂರ್ತಿ ಕಳೆಯುವಂತಾಗಿದೆ ಎಂಬುದಾಗಿ ಕೂಡ ಹೇಳಿದ್ದಾರೆ. ಇನ್ನು ಈ ಸಮಾರಂಭದಲ್ಲಿ ಶಿವಣ್ಣನವರು ಅತ್ತಿದ್ದ ಪರಿಯನ್ನು ನೋಡಿ ಒಂದಂತೂ ಅರ್ಥವಾಗುತ್ತದೆ. ಅದೇನೆಂದರೆ ಪುನೀತ್ ರಾಜಕುಮಾರ್ ಅವರ ಮೇಲೆ ಇರುವ ಗೌರವ ದಿಂದಾಗಿ ಅವರ ಕುಟುಂಬಸ್ಥರನ್ನು ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಕರೆದು ಅವರಿಗೆ ಮತ್ತಷ್ಟು ದುಃಖವನ್ನು ನೀಡುವಂತೆ ಆಗುತ್ತದೆ, ದಯವಿಟ್ಟು ನಮ್ಮನ್ನೇ ಕರೆಯಬೇಡಿ ಎಂದು ಹೇಳಿದರು. ಅಪ್ಪು ಅವರು ಇಲ್ಲ ಎಂಬ ದುಃಖವನ್ನು ಮರೆಯುವ ಪ್ರಯತ್ನದಲ್ಲಿರುವ ಅವರಿಗೆ ಮತ್ತೆ ಮತ್ತೆ ಶ್ರದ್ಧಾಂಜಲಿ ಕಾರ್ಯಕ್ರಮದ ಹೆಸರಿನಲ್ಲಿ ಕರೆಯೋದು ಬೇಡ ಎಂಬುದು ನಮ್ಮ ಅನಿಸಿಕೆಯಾಗಿದೆ. ಈ ವಿಚಾರದ ಕುರಿತಂತೆ ನಿಮ್ಮೆಲ್ಲರ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ಹಂಚಿಕೊಳ್ಳಿ.

Get real time updates directly on you device, subscribe now.