ರಾಜಾ-ರಾಣಿ ಶೋ ನಂತರ ಹೊಸ ಶೋ ನನ್ನಮ್ಮ ಸೂಪರ್ ಸ್ಟಾರ್ ಗೆ ಹೊಸ ತೀರ್ಪು ದಾರರನ್ನು ಕರೆತಂದ ಕಲರ್ಸ್, ಆ ಚೆಲುವೆ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಸುಗ್ಗಿ. ಒಂದಾದ ನಂತರ ಒಂದು ಶೋಗಳು ಮುಗಿದ ನಂತರ ಮತ್ತೊಂದು ಶುರುವಾಗುತ್ತವೆ. ಇತ್ತಿಚೆಗೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ರಾಜಾ-ರಾಣಿ ಎಂಬ ಶೋ ಕೊನೆಗೂ ಮುಗಿದಿದೆ. ಈಗ ಆ ಜಾಗಕ್ಕೆ ಮತ್ತೊಂದು ಹೊಸ ರಿಯಾಲಿಟಿ ಶೋ ಶುರುವಾಗುತ್ತಿದೆ. ಅದುವೇ ನನ್ನಮ್ಮ ಸೂಪರ್ ಸ್ಟಾರ್.

ರಾಜಾ-ರಾಣಿ ಶೋನಲ್ಲಿ ಕಿರುತೆರೆಯ ನಟಿ ನೇಹಾಗೌಡ ದಂಪತಿ ಜಯಗಳಿಸಿದ್ದರು. ಆ ಕಾರ್ಯಕ್ರಮದ ನಿರೂಪಣೆಯನ್ನ ನಟಿ ಅನುಪಮಾ ಗೌಡ ನೇರವೇರಿಸಿದ್ದರೇ, ಜಡ್ಜ್ ಗಳಾಗಿ ನಟ ಸೃಜನ್ ಲೋಕೇಶ್ ಹಾಗೂ ನಟಿ ತಾರಾ ಅನುರಾಧ ಇದ್ದರು. ಕಿರುತೆರೆ ಹಾಗೂ ಹಿರಿತೆರೆ ತಾರಾ ಜೋಡಿಗಳ ಗೇಮ್ ಶೋ ಅದಾಗಿತ್ತು. ಈಗ ಅಮ್ಮ ಹಾಗೂ ಮಕ್ಕಳ ಗೇಮ್ ಶೋ ಇದಾಗಿದ್ದು ತಾಯಿ ಹಾಗೂ ಮಗು ಈ ಕಾರ್ಯಕ್ರಮದ ಸ್ಪರ್ಧಿಗಳಾಗಲಿದ್ದಾರೆ.

14 ಜನ ಸೆಲೆಬ್ರಿಟಿ ತಾಯಂದಿರು ಹಾಗೂ ಅವರ ಮಕ್ಕಳು ಭಾಗವಹಿಸುತ್ತಿದ್ದು ಪ್ರತಿ ವಾರ ತಾಯಿ ಹಾಗೂ ಮಗುವಿಗೆ ಗೇಮ್ ಶೋ ಜೊತೆಜೊತೆಗೆ ಸ್ಕಿಟ್ ಹಾಗೂ ಕೆಲವು ಮನೋರಂಜನಾತ್ಮಕ ಆಟಗಳನ್ನು ಆಡಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮವನ್ನು ಸಹ ನಟಿ ಅನುಪಮಾ ಗೌಡ ನಿರೂಪಣೆ ಮಾಡಲಿದ್ದು, ಶೋ ನ ಜಡ್ಜ್ ಗಳಾಗಿ ನಟ ಸೃಜನ್ ಲೋಕೇಶ್, ನಟಿಯರಾದ ತಾರಾ ಅನುರಾಧ ಜೊತೆ ಈ ಭಾರಿ ಹೊಸ ಸೇರ್ಪಡೆ ಎಂಬಂತೆ ನಟಿ ಅನು ಪ್ರಭಾಕರ್ ಸಹ ಸೇರ್ಪಡೆಯಾಗಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮನರಂಜನೆಗೆ ಹೊಸ ಹಾದಿ ಎಂದು ಹೇಳಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav