ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ಆಟಗಾರ ಯಾರೆಂದು ತಿಳಿಸಿದ ಸೆಹ್ವಾಗ್, ಈತನೇ ಟಾಪ್ ಎಂದದ್ದು ಯಾರಿಗೆ ಗೊತ್ತೇ??

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಬಾಚಿಕೊಳ್ಳುವ ಆಟಗಾರ ಯಾರೆಂದು ತಿಳಿಸಿದ ಸೆಹ್ವಾಗ್, ಈತನೇ ಟಾಪ್ ಎಂದದ್ದು ಯಾರಿಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಮುಗಿದಿದ್ದೆ ತಡ, ಆ ಕಪ್ ನ ಕ್ರೇಜ್ ಸಹ ಕಡಿಮೆಯಾಗಿದೆ. ಸದ್ಯ ಈಗ ಎಲ್ಲರ ಚಿತ್ತ ದೇಶಿ ಟೂರ್ನಿಯಾದ ಸಯ್ಯದ್ ಮುಷ್ತಾಕ ಅಲಿ ಹಾಗೂ ನ್ಯೂಜಿಲೆಂಡ್ ವಿರುದ್ದ ನಡೆಯುವ ಟಿ 20 ಸರಣಿ ಮೇಲಿದೆ. ಈ ಎರಡು ಸರಣಿ ಮುಗಿದ ನಂತರ ಡಿಸೆಂಬರ್ ನಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು ನಡೆಯಲಿದೆ. ಇಷ್ಟು ವರ್ಷ ಎಂಟು ತಂಡಗಳಿಗಾಗಿ ನಡೆಯುತ್ತಿದ್ದ ಹರಾಜು ಈ ಭಾರಿ ಹತ್ತು ತಂಡಗಳಿಗಾಗಿ ನಡೆಯಲಿದೆ. ಹಾಗಾಗಿ ಜೋರಾಗಿ ಬ್ಯಾಟ್ ಬೀಸುವ ಆಟಗಾರರಿಗೆ, ವಿಕೇಟ್ ಟೇಕಿಂಗ್ ಬೌಲರ್ ಗಳಿಗೆ, ಮಿಸ್ಟರಿ ಸ್ಪಿನ್ನರ್ ಗಳಿಗೆ, ಆಲ್ರೌಂಡರ್ಗಳಿಗೆ ಈ ಭಾರಿ ಹೆಚ್ಚಿನ ಬೇಡಿಕೆ ಇರಲಿದೆ.

ಈ ಬಗ್ಗೆ ಮಾತನಾಡಿರುವ ಭಾರತೀಯ ಕ್ರಿಕೇಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್, ಈ ಆಟಗಾರ ಈ ಭಾರಿ ಐಪಿಎಲ್ ಆಡುತ್ತಾನೆ ಹಾಗೂ ಅತಿ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗುತ್ತಾನೆ ಎಂದು ಹೇಳಿದ್ದಾರೆ. ಅಫಘಾನಿಸ್ತಾನ ತಂಡದ ರಶೀದ್ ಖಾನ್, ಮಹಮದ್ ನಬಿ ಹಾಗೂ ಮುಜೀಬ್ ಉರ್ ರೆಹಮಾನ್ ಮಾತ್ರ ಐಪಿಎಲ್ ನಲ್ಲಿ ಪಾಲ್ಗೊಂಡಿದ್ದರು. ಈ ಭಾರಿ ಈತ ಸಹ ಆ ಲಿಸ್ಟ್ ಗೆ ಸೇರುತ್ತಾನೆ ಎಂದಿದ್ದಾರೆ. ಅಷ್ಟಕ್ಕೂ ಆ ಆಟಗಾರ ಬೇರೆ ಯಾರೂ ಅಲ್ಲ. ಮೊನ್ನೆಯ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಏಕಾಂಗಿಯಾಗಿ ಹೋರಾಡಿದ ನಜೀಬುಲ್ಲಾ ಜದ್ರಾನ್. ಕೇವಲ 48 ಎಸೆತಗಳಲ್ಲಿ 73 ರನ್ ಭಾರಿಸಿದ ನಜೀಬುಲ್ಲಾ ಇನ್ನಿಂಗ್ಸ್ ರನ್ನ ವಿರೇಂದ್ರ ಸೆಹ್ವಾಗ್ ಮನತುಂಬಿ ಹೊಗಳಿದ್ದಾರೆ.

ಒಂದೆಡೆ ವಿಕೇಟ್ ಗಳು ಉರುಳುತ್ತಿದ್ದರೂ, ಕ್ರೀಸ್ ನಲ್ಲಿ ಕಲ್ಲುಬಂಡೆಯ ರೀತಿ ಜದ್ರಾನ್ ನಿಂತುಕೊಂಡರು. ಕ್ವಾಲಿಟಿ ಸ್ಪಿನ್ನರ್ ಗಳಾದ ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್ ರವರನ್ನ ಮನಬಂದಂತೆ ದಂಡಿಸಿದರು. ಅವರು ಇನ್ನಿಂಗ್ಸ್ ನಲ್ಲಿ ಹತ್ತು ಎಸೆತಗಳು ಬಾಕಿ ಇರುವಂತೆ ಔಟಾದರು. ಹಾಗಾಗಿ ಅಫಘಾನಿಸ್ತಾಧ 124 ರನ್ ಗಳಿಸಿತು. ಅವರು ಔಟಾಗದೇ ಕೊನೆಯವರೆಗೆ ಆಡಿದ್ದರೇ ಅಫಘಾನಿಸ್ತಾನ 150 ರನ್ ಗಳಿಸಿ, ಪಂದ್ಯವನ್ನ ಮತ್ತಷ್ಟು ರೋಚಕವಾಗಿ ಇರುವಂತೆ ಮಾಡುತ್ತಿದ್ದರು ಎಂದು ಹೇಳಿದರು. ಇವರ ಇನ್ನಿಂಗ್ಸ್ ನ್ನು ಈಗಾಗಲೇ ಐಪಿಎಲ್ ಫ್ರಾಂಚೈಸಿಗಳು ಗಮನಿಸಿರುತ್ತಾರೆ. ಕ್ರಮಾಂಕದಲ್ಲಿ ಈ ತರಹದ ಒಬ್ಬ ದಾಂಡಿಗನನ್ನ ಎಲ್ಲಾ ಫ್ರಾಂಚೈಸಿಗಳು ಎದುರು ನೋಡುತ್ತಿರುತ್ತಾರೆ. ಹಾಗಾಗಿ ನಜೀಬುಲ್ಲಾ ಜದ್ರಾನ್ ಈ ಭಾರಿ ಹೆಚ್ಚು ಮೊತ್ತಕ್ಕೆ ಹರಾಜಾಗುವುದು ಗ್ಯಾರಂಟಿ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.