ಅಪ್ಪು ವಿವಾದ ಬಿಡಿ ಮತ್ತೊಂದು ವಿಚಾರದಲ್ಲಿ ರಚಿತಾ ರಾಮ್ ರವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿ ಎಂಬ ಕೂಗು. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸದ್ಯದ ಮಟ್ಟಿಗೆ ಅತ್ಯಂತ ಬಹುಬೇಡಿಕೆಯ ನಟಿ ಯಾರು ಎಂದು ಕೇಳಿದರೆ ಖಂಡಿತವಾಗಿಯೂ ಕೇಳಿ ಬರುವ ಒಂದೇ ಒಂದು ಹೆಸರು ಎಂದರೆ ಅದು ರಚಿತರಾಮ್. ಆದರೆ ರಚಿತಾರಾಮ್ ಹಾಗೂ ವಿವಾದಕ್ಕೆ ಸದಾ ಅವಿನಾಭವ ಸಂಬಂಧ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ರವರ ಐ ಲವ್ ಯು ಚಿತ್ರದಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಇದಕ್ಕೆ ಕಾರಣ ಉಪೇಂದ್ರ ಅವರು ಎಂಬುದಾಗಿ ಮಾಧ್ಯಮಗಳಲ್ಲಿ ಹೇಳಿ ಓಡಾಡಿಕೊಂಡು ಬಂದಿದ್ದರು.

ಇದಕ್ಕೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ರವರು ಈ ಹಾಡಿಗೆ ಕೊರಿಯೋಗ್ರಫಿ ಮಾಡಿರುವುದು ಆರ್ ಚಂದ್ರು ಹಾಗೂ ಚಿನ್ನಿ ಮಾಸ್ಟರ್ ರಚಿತರಾಮ್ ರವರು ಯಾಕೆ ಉಪೇಂದ್ರರವರ ಮೇಲೆ ಈ ಆರೋಪವನ್ನು ಹೊರಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂಬುದಾಗಿ ಹೇಳಿದ್ದರು. ನಂತರ ಮಾಧ್ಯಮಗಳಿಗೆ ಸಿಕ್ಕಂತಹ ರಚಿತಾರಾಮ್ ರವರು ಇನ್ನು ಮುಂದೆ ಇಂತಹ ದೃಶ್ಯಗಳಲ್ಲಿ ತಾವು ನಟಿಸುವುದಿಲ್ಲ ಎಂಬುದಾಗಿ ಹೇಳಿದ್ದರು. ನಂತರ ಈಗ ಮತ್ತೊಮ್ಮೆ ಏಕ್ ಲವ್ ಯಾ ಚಿತ್ರದಲ್ಲಿ ಸ್ಮೋಕಿಂಗ್ ಹಾಗೂ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ನಂತರ ಕೃಷ್ಣ ಅಜಯ್ ರಾವ್ ನಾಯಕನಟನಾಗಿ ನಟಿಸಿರುವ ಲವ್ ಯು ರಚ್ಚು ಚಿತ್ರದಲ್ಲಿ ಸಾಂಗ್ ಒಂದರಲ್ಲಿ ಕೂಡ ಇಂತಹ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಇದಕ್ಕೆ ಮಾಧ್ಯಮದವರು ರಚಿತರಾಮ್ ರವರಿಗೆ ಈ ಹಿಂದೆಯಷ್ಟೇ ನೀವು ಹೇಳಿದ್ದೀರಲ್ಲ ಈ ತರಹದ ಬೋಲ್ಡ್ ದೃಶ್ಯಗಳಲ್ಲಿ ನಾನು ನಟಿಸುವುದಿಲ್ಲ ಎಂದು ಮತ್ತೆ ಯಾಕೆ ನಟಿಸಿದ್ದೀರಿ ಎಂದು ಕೇಳಿದ್ದಾರೆ. ಅದಕ್ಕೆ ಮಾಧ್ಯಮದವರಿಗೆ ನೀವು ಫಸ್ಟ್ ನೈಟ್ ದಿನ ಏನು ಮಾಡುತ್ತೀರಿ ಎಂಬುದಾಗಿ ಹೇಳಿದ್ದಾರೆ. ಹೌದು ರಚಿತರಾಮ್ ರವರು ಫಸ್ಟ್ ನೈಟ್ ಸಮಯದಲ್ಲಿ ರೋಮ್ಯಾನ್ಸ್ ನಡೆಯುತ್ತದೆಯೋ ಅದನ್ನು ಈ ಸಾಂಗಿನಲ್ಲಿ ನಾನು ನಟಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಇನ್ನು ಇಂತಹ ಹೇಳಿಕೆ ನೀಡಿರುವ ರಚಿತರಾಮ್ ರವರ ವಿರುದ್ಧ ಕರ್ನಾಟಕ ಕ್ರಾಂತಿಗಳ ಸಂಸ್ಥೆ ರಚಿತರಾಮ್ ರವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬುದಾಗಿ ಹೇಳಿದ್ದಾರೆ. ಇನ್ನು ಕೆಲವರು ರಚಿತರಾಮ್ ನಟಿಯಾಗಿ ಏನು ಮಾಡಬೇಕು ಅದನ್ನೇ ಮಾಡಿದ್ದಾರೆ ಎಂಬುದಾಗಿ ಅವರ ಪರ ಮಾತನಾಡಿದ್ದಾರೆ. ಇದರ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Post Author: Ravi Yadav