ದೇವರು ನಿಜವಾಗಲೂ ಇದ್ದಾನ ಎಂದ ಜನ, ಪುನೀತ್ ರವರ ಜೀವನದ ಮತ್ತೊಂದು ಆಸೆಯನ್ನು ಈಡೇರಿಸಿದ ಶಿವಣ್ಣ. ಇಂತ ಪರಿಸ್ಥಿತಿ ಯಾರಿಗೂ ಬೇಡ ಎಂದ ಜಗತ್ತು.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ದುಃಖದ ಛಾಯೆಯಲ್ಲಿ ಮರಗುತ್ತಿದೆ. ಕಾರಣ ಕನ್ನಡಾಂಬೆ ತನ್ನ ನೆಚ್ಚಿನ ಪುತ್ರನನ್ನು ಕಳೆದುಕೊಂಡಿದ್ದಾರೆ. ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ಕರ್ನಾಟಕದ ಜನತೆಯ ನೋವಿನ ಸಮುದ್ರದಲ್ಲಿ ಮುಳುಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಕೋಟ್ಯಾಂತರ ಅಭಿಮಾನಿಗಳನ್ನು ಹಾಗೂ ಹಿತೈಷಿಗಳನ್ನು ತೊರೆದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇನ್ನೆಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಉತ್ತಮವಾದಂತಹ ದೈಹಿಕ ಧಾರ್ಡ್ಯತೆ ಹಾಗೂ ಆರೋಗ್ಯ ಹೊಂದಿರುವ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಸದಾ ಮುಂಚೂಣಿಯಲ್ಲಿ ಕಾಣಸಿಗುತ್ತಾರೆ. ಆದರೆ ಅವರಿಗೆ ಈ ತರಹ ಅನಿರೀಕ್ಷಿತ ಹೃದಯಘಾತ ಸಂಭವಿಸಿರುವುದು ಖಂಡಿತವಾಗಿಯೂ ಅರಗಿಸಿಕೊಳ್ಳಲಾಗದ ಸತ್ಯ ಆದರೂ ಕೂಡ ನಂಬಲೇಬೇಕು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಿನ್ನೆ ಬೆಳಿಗ್ಗೆ ಜಿಮ್ ನಲ್ಲಿ ದೈಹಿಕ ಕಸರತ್ತನ್ನು ಮಾಡುತ್ತಿದ್ದರು.

ದೈಹಿಕವಾಗಿ ಕಸರತ್ತನ್ನು ದೈನಂದಿಕವಾಗಿ ಮಾಡುವುದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ದಿನಚರಿಗಳಲ್ಲಿ ಪ್ರಮುಖವಾದಂತಹ ಕೆಲಸ. ಆದರೆ ಇದೇ ಸಮಯದಲ್ಲಿ ಅವರು ತಮ್ಮ ಕೊನೆಯ ಉಸಿರನ್ನು ಚೆಲ್ಲುತ್ತಾರೆ ಎಂಬುದು ಪ್ರಾಯಶಹ ಅವರಿಗೂ ಕೂಡ ಅರಿವಿಲ್ಲ ಎಂದು ಕಾಣುತ್ತೆ. ಇದಾದ ಕೂಡಲೇ ಅವರಿಗೆ ಫ್ಯಾಮಿಲಿ ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಇಸಿಜಿ ಮಾಡುತ್ತಾರೆ.

ಆದರೆ ಆ ಸಮಯದಲ್ಲಿ ಅಲ್ಲಿ ಅವರು ಕುಸಿದು ಬೀಳುತ್ತಾರೆ. ಇದಾದ ತಕ್ಷಣವೇ ಪರಿಸ್ಥಿತಿ ಗಂಭೀರವಾಗಿದ್ದರೂ ತಿಳಿದು ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಹೋದಾಗ ಅವರು ಯಾವುದೇ ರೀತಿಯ ರೆಸ್ಪಾನ್ಸ್ ಮಾಡುತ್ತಿರಲಿಲ್ಲ. ಹೃದಯವು ಕೂಡ ಬಹುತೇಕವಾಗಿ ಸ್ತಬ್ಧಗೊಂಡಿತ್ತು. 1:00 ಗಂಟೆ ತನಕ ನುರಿತ ವೈದ್ಯರ ತಜ್ಞರ ತಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಇನ್ನಿಲ್ಲದಂತೆ ಶತಾಯಗತಾಯ ಪ್ರಯತ್ನ ಮಾಡಿ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವನ್ನು ಕೂಡ ಮಾಡಲಾಯಿತು. ಆದರೆ ಯಾವುದು ಫಲಕಾರಿಯಾಗದೆ ಅಪ್ಪು ಅವರು ಅಸುನೀಗಿದರು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಶಿವಣ್ಣ ಅಳುತ್ತಲೇ ಆಗಮಿಸಿದ್ದಾರೆ.

ಇನ್ನು ಆಸ್ಪತ್ರೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಕಿಂಗ್ ಸ್ಟಾರ್ ಯಶ್ ರಿಯಲ್ ಸ್ಟಾರ್ ಉಪೇಂದ್ರ ಗೋಲ್ಡನ್ ಸ್ಟಾರ್ ಗಣೇಶ್ ಶ್ರೀಮುರಳಿ ಕಿಚ್ಚ ಸುದೀಪ್ ರಮೇಶ್ ಅರವಿಂದ್ ಕನ್ನಡ ಚಿತ್ರರಂಗದ ಎಲ್ಲಾ ನಟರು ಕೂಡ ಆಗಮಿಸಿ ಅಪ್ಪು ಅವರನ್ನು ನೋಡಿದ್ದಾರೆ. ಇದೇ ಸಂದರ್ಭದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಆಸೆಯನ್ನು ಅವರ ಅಣ್ಣ ಶಿವಣ್ಣ ಪೂರೈಸಿದ್ದಾರೆ. ಅದೇನೆಂದರೆ ತಂದೆಯಂತೆ ನಾನೂ ಕೂಡ ಮರಣಾನಂತರ ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಪುನೀತ್ ರಾಜಕುಮಾರ್ ಅವರು ಹೇಳಿದ್ದಾರಂತೆ.

ಇನ್ನು ಕಣ್ಣನ್ನು ದಾನ ಮಾಡಲು ಕುಟುಂಬದ ಪರವಾಗಿ ಒಪ್ಪಿಗೆಯನ್ನು ಸೂಚಿಸುವ ಸಹಿಯನ್ನು ಶಿವಣ್ಣ ಮಾಡುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಆಸೆಯನ್ನು ತೀರಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ತಾವು ಇದ್ದಷ್ಟು ದಿನದಂದು ಪರರಿಗೆ ಒಳ್ಳೆಯದನ್ನು ಮಾಡುವ ಮೂಲಕ ಸಾರ್ಥಕ ಜೀವನವನ್ನು ಜೀವಿಸಿದ್ದರು. ಅಂತಹ ಬಂಗಾರದ ಮನುಷ್ಯನ ಕುಡಿಯನ್ನು ಕರುನಾಡು ಎಂದಿಗೂ ಕೂಡ ನೆನಪಿಸಿಕೊಳ್ಳುತ್ತದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಸಾರ್ವಜನಿಕ ವೀಕ್ಷಣೆಗಾಗಿ ಕಂಠೀರವ ಸ್ಟುಡಿಯೋದಲ್ಲಿ ಇಟ್ಟಿದ್ದು ಭಾನುವಾರದಂದು ಸಕಲ ವಿಧಿವಿಧಾನಗಳೊಂದಿಗೆ ಹಾಗೂ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರವನ್ನು ನಡೆಸುವ ತಯಾರಿ ನಡೆಯಲಿದೆ.

Post Author: Ravi Yadav