ಛೆ ಪಾಪ ಸ್ವಾಮಿ, ಕೊನೆಯ ಕ್ಷಣಗಳಲ್ಲಿ ಪವರ್ ಸ್ಟಾರ್ ಅನುಭವಿಸಿದ ನೋವು ಬಿಚ್ಚಿಟ್ಟ ಡಾಕ್ಟರ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮೆಲ್ಲರ ಅಚ್ಚುಮೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ನಿನ್ನೆಯಷ್ಟ ಕಳೆದುಕೊಂಡಿದ್ದೇವೆ. ಮಗುವಿನ ಮನಸ್ಸಿನಂತಹ ಬಂಗಾರದ ಮನುಷ್ಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದು ಹೇಳಿದರೆ ಖಂಡಿತವಾಗಿ ತಪ್ಪಾಗಲಾರದು. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಆಗಲಿದ್ದಾರೆ ಎಂಬ ಸುದ್ದಿ ಕೇಳುವುದಕ್ಕೆ ಮನಸ್ಸಿಗೆ ಬಹಳಷ್ಟು ದುಃಖವಾಗುತ್ತಿದೆ. ಇದೆಲ್ಲ ಕೆಟ್ಟ ಕನಸಾಗಿ ಮತ್ತೆ ಅಪ್ಪು ಎದ್ದು ಬರಲಿ ಎಂದು ಮನಸ್ಸು ಸಾರಿ ಸಾರಿ ಹೇಳುತ್ತಿದೆ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಗಳಿಗೆಯಲ್ಲಿ ಅನುಭವಿಸಿದ ನೋವಿನ ಕುರಿತಂತೆ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಚೆಕಪ್ ಮಾಡಿಸಿಕೊಂಡು ಬಂದಿದ್ದರಂತೆ. ಅದಾದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಅಣ್ಣ ಕರುನಾಡ ಚಕ್ರವರ್ತಿ ಶಿವಣ್ಣರವರ ಬಹುನಿರೀಕ್ಷಿತ ಚಿತ್ರ ಭಜರಂಗಿ 2ರ ಬಿಡುಗಡೆ ಮುನ್ನಾ ಕಾರ್ಯಕ್ರಮಕ್ಕೆ ಹೋಗಿದ್ದರು.

ಅಲ್ಲಿ ಶಿವಣ್ಣ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ವೇದಿಕೆಯಲ್ಲಿ ಸ್ಟೆಪ್ ಕೂಡ ಹಾಕಿದ್ದರು. ಅದಾದನಂತರ ನಿನ್ನೆ ರಾತ್ರಿ ಹನ್ನೆರಡು ಗಂಟೆಯವರೆಗೂ ಕೂಡ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು. ಇನ್ನು ಬೆಳಗ್ಗೆಯಷ್ಟೇ ವಾಕಿಂಗ್ ಹೋದಾಗಲೂ ಕೂಡ ಅಭಿಮಾನಿಯೊಬ್ಬರು ತೆಗೆದ ಫೋಟೋದಲ್ಲಿ ಅವರು ಎದೆಯನ್ನು ಹಿಡಿದುಕೊಂಡಿರುವುದು ಕಾಣಿಸುತ್ತಿತ್ತು. ಕೊನೆಪಕ್ಷ ಈ ಸಮಯದಲ್ಲಾದರೂ ಅಪ್ಪು ಇದರ ಕುರಿತಂತೆ ಗಂಭೀರವಾಗಿ ಯೋಚಿಸಿ ಆಸ್ಪತ್ರೆಗೆ ಹೋಗಿದ್ದಾರೆ ಬದುಕುತ್ತಿದ್ದರೋ ಏನೋ. ಆದರೆ ಇದಾದ ನಂತರ ಅವರು ಹೋಗಿದ್ದೆ ಜಿಮ್ ನಲ್ಲಿ ವರ್ಕೌಟ್ ಮಾಡಲು.

ಕನ್ನಡ ಚಿತ್ರರಂಗದ ಆರೋಗ್ಯವಂತ ನಟರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೊದಲ ಸ್ಥಾನದಲ್ಲಿ ಕಾಣಸಿಗುತ್ತಾರೆ. ಆದರೆ ಈ ದೈಹಿಕ ಕಸರತ್ತು ಅವರ ದೇಹಕ್ಕೆ ಮುಳುವಾಯಿತು. ಈ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದುಬಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಮೊದಲಿಗೆ ರಮಣಶ್ರೀ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಇದಾದ ನಂತರ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಯಿತು. ವಿಕ್ರಂ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಸತತ ಮೂರು ಗಂಟೆಗಳ ಕಾಲ ಎಡೆಬಿಡದೆ ಅವಿರತವಾಗಿ ಉಳಿಸಿಕೊಳ್ಳಲು ಪ್ರಯತ್ನವನ್ನು ನಡೆಸಿದರು.

ಆದರೆ ಚಿಕಿತ್ಸೆಗೆ ಸ್ಪಂದಿಸದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ದೈವಾಧೀನರಾದರು. ನಿನ್ನೆ ಮಧ್ಯಾಹ್ನ ಸರಿಸುಮಾರು 1.30 ಹೊತ್ತಿಗೆ ವೈದ್ಯರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿಯನ್ನು ಪತ್ರಿಕೆ ಮಾಧ್ಯಮಗಳಿಗೆ ನೀಡಿದ್ದಾರೆ. ಇನ್ನು ಸಕಲ ಸರ್ಕಾರಿ ಗೌರವ ಗಳಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ವಿಧಾನವನ್ನು ಪೂರೈಸಲು ಮುಖ್ಯಮಂತ್ರಿಗಳು ಅಧಿಸೂಚನೆ ನೀಡಿದ್ದಾರೆ.

ಇನ್ನು ತಮ್ಮ ತಂದೆಯಂತೆಯೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನಮಾಡಿದ್ದಾರೆ. ತಮ್ಮ ಕೊನೆಯ ಗಳಿಗೆಯಲ್ಲಿ ಕೂಡ ಬೇರೆಯವರ ಬಾಳಿಗೆ ಬೆಳಕಾಗಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಂತಿದ್ದು ಅವರ ಸಾರ್ಥಕ ಜೀವನದ ಉದಾಹರಣೆಯಾಗಿದೆ. ಅಪ್ಪು ನೀವು ನಮ್ಮನ್ನು ದೈಹಿಕವಾಗಿ ಆಗಲಿ ಇರಬಹುದು ಆದರೆ ನಿಮ್ಮ ಆದರ್ಶ ಹಾಗೂ ಜೀವನ ಮೌಲ್ಯಗಳು ಖಂಡಿತವಾಗಿ ನಮ್ಮೊಂದಿಗೆ ಸದಾಕಾಲ ಚಿರ ನೂತನವಾಗಿರುತ್ತದೆ. ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ನೀವೆಂದು ನಮ್ಮ ರಾಜಕುಮಾರ.

Post Author: Ravi Yadav