ಪಾಕ್ ವಿರುದ್ಧ ಸೋತ ಬೆನ್ನಲ್ಲೇ ಎಚ್ಚೆತ್ತ ಭಾರತ, ಮುಂದಿನ ನ್ಯೂಜಿಲೆಂಡ್ ಪಂದ್ಯಕ್ಕೆ ಮಾಡಲಾಗುತ್ತಿರುವ ಬದಲಾವಣೆಗಳು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಹೀನಾಯವಾಗಿ ಸೋತ ನಂತರ ಭಾರತ ತಂಡದ ಆಡುವ ಹನ್ನೊಂದು ಆಟಗಾರರ ಆಯ್ಕೆಯ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಫಾರ್ಮ್ ನಲ್ಲಿ ಇಲ್ಲದ ಭುವನೇಶ್ವರ್ ರವರನ್ನ ಆಯ್ಕೆ ಮಾಡಿದ್ದು ಏಕೆ..? ಬೌಲಿಂಗ್ ಮಾಡಲು ಒಪ್ಪದ ಹಾರ್ದಿಕ್ ಪಾಂಡ್ಯರನ್ನ ತಂಡದಲ್ಲಿ ಇರಿಸಿದ್ದೇಕೆ..? ಮಹತ್ವದ ಐತಿಹಾಸಿಕ ಪಂದ್ಯಗಳಿಗೆ ವರುಣ್ ಚಕ್ರವರ್ತಿಯಂತಹ ಅನನುಭವಿಗೆ ಮಣೆ ಹಾಕಿದ್ದು ಏಕೆ..?

ಜಡೇಜಾರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿದ್ದು ಏಕೆ..? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಕೇಳಿ ಬರುತ್ತಿವೆ. ಈ ನಡುವೆ ಮಾಡು ಇಲ್ಲವೇ ಮಡಿ ಎಂಬಂತಿರುವ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಭಾರತ ಕನಿಷ್ಠ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಬನ್ನಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಆಯ್ಕೆಯಾಗುವ ಆಟಗಾರರು ಯಾರು ಎಂಬುದನ್ನ ತಿಳಿಯೋಣ.

ಮೊದಲನೆಯದಾಗಿ ಇಶಾನ್ ಕಿಶನ್ – ಪ್ರತಿಭಾವಂತ ಏಡಗೈ ಬ್ಯಾಟ್ಸಮನ್ ಇಶಾನ್ ಕಿಶನ್ ಮುಂದಿನ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಹಾರ್ದಿಕ್ ಹೇಗೂ ಬೌಲಿಂಗ್ ಮಾಡುತ್ತಿಲ್ಲ, ಹಾಗಾಗಿ ಆರನೇ ಕ್ರಮಾಂಕದಲ್ಲಿ ತಜ್ಞ ಬ್ಯಾಟ್ಸಮನ್ ಆರಿಸುವುದೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಇಶಾನ್ ತಂಡದೊಳಗೆ ಬಂದರೇ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು.

ಎರಡನೆಯದಾಗಿ ಶಾರ್ದೂಲ್ ಠಾಕೂರ್ – ವೇಗಿ ಭುವನೇಶ್ವರ್ ಸಂಪೂರ್ಣ ಲಯ ಕಳೆದುಕೊಂಡಿದ್ದಾರೆ. ಅವರ ಬೌಲ್ ಗಳು ಸ್ವಿಂಗ್ ಆಗುತ್ತಿಲ್ಲ. ಹೀಗಾಗಿ ಭುವನೇಶ್ವರ್ ಬದಲು ಸ್ವಿಂಗ್ ಕಿಂಗ್ ಆಗಿರುವ ಲಾರ್ಡ್ ಶಾರ್ದೂಲ್ ಠಾಕೂರ್ ಕಣಕ್ಕಿಳಿಯುವುದು ಪಕ್ಕಾ ಆಗಿದೆ.

ಮೂರನೆಯದಾಗಿ ಆರ್.ಅಶ್ವಿನ್ – ಭಾರತ ತಂಡದ ಅತ್ಯಂತ ಅನುಭವಿ ಸ್ಪಿನ್ನರ್ ಆಗಿರುವ ಆರ್.ಅಶ್ವಿನ್ ರನ್ನ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಬದಲು ಆಡಿಸಬೇಕಿತ್ತು ಎಂಬ ಅಭಿಪ್ರಾಯ ಇತ್ತು. ಪಿಚ್ ಎಂತಹದೇ ಇದ್ದರೂ, ತಮ್ಮ ಚಾಣಾಕ್ಷ ಬೌಲಿಂಗ್ ಮೂಲಕ ವಿಕೇಟ್ ಕೀಳುವ ಸಾಮರ್ಥ್ಯವನ್ನ ಅಶ್ವಿನ್ ಹೊಂದಿದ್ದಾರೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಬದಲು ಆರ್.ಅಶ್ವಿನ್ ಕಣಕ್ಕಿಳಿಯಲಿದ್ದಾರೆ.

ನ್ಯೂಜಿಲೆಂಡ್ ವಿರುದ್ದ ಕಣಕ್ಕಿಳಿಯಲಿರುವ ಭಾರತ ತಂಡ ಇಂತಿದೆ. – ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ರವೀಂದ್ರ ಜಡೇಜಾ, ಆರ್‌.ಅಶ್ವಿನ್, ಶಾರ್ದೂಲ್ ಠಾಕೂರ್, ಮಹಮದ್ ಶಮಿ, ಜಸಪ್ರಿತ್ ಬುಮ್ರಾ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav