ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮುಂದಿನ ನ್ಯೂಜಿಲೆಂಡ್ ವಿರುದ್ದ ಪಂದ್ಯಕ್ಕೂ ಮುನ್ನವೇ ಭಾರತ ತಂಡಕ್ಕೆ ಸಿಗುತ್ತಾ ಸಿಹಿ ಸುದ್ದಿ?? ಏನು ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ನ ಬಹುನೀರಿಕ್ಷಿತ ಮೊದಲ ಪಂದ್ಯದಲ್ಲಿ ಅನೀರಿಕ್ಷಿತ ಆಘಾತಕ್ಕೆ ಒಳಗಾದ ಭಾರತ, ಪಾಕಿಸ್ತಾನದ ವಿರುದ್ದ ಹೀನಾಯ ಸೋಲು ಅನುಭವಿಸಿತು. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ಮಹಮದ್ ಶಮಿ,ಹಾರ್ದಿಕ್ ಪಾಂಡ್ಯರವರ ನೀರಸ ಪ್ರದರ್ಶನಕ್ಕೆ ಭಾರತ ಸರಿಯಾಗಿಯೇ ಬೆಲೆ ತೆತ್ತಿತ್ತು. ಇನ್ನು ಭಾರತ ತಂಡಕ್ಕೆ ಆರನೇ ಬೌಲಿಂಗ್ ಆಯ್ಕೆಯಾಗಿದ್ದ ಹಾರ್ದಿಕ್ ಪಾಂಡ್ಯ ಇತ್ತೀಚಿನ ದಿನಗಳಲ್ಲಿ ಬೌಲಿಂಗ್ ಮಾಡುತ್ತಿಲ್ಲ. ಮೊನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವೇಳೆಯಲ್ಲಿ ಹಾರ್ದಿಕ್ ಪಾಂಡ್ಯ ಬಲ ಭುಜಕ್ಕೆ ಗಾಯವಾಯಿತು. ಹೀಗಾಗಿ ಮುನ್ನೆಚ್ಚರಿಕೆ ಕಾರಣವಾಗಿ ಅವರನ್ನ ಸ್ಕ್ಯಾನಿಂಗ್ ಗೆ ಕರೆದೊಯ್ದ ಕಾರಣ ಹಾರ್ದಿಕ್ ಅಂದು ಫೀಲ್ಡಿಂಗ್ ಗೆ ಸಹ ಇಳಿದಿರಲಿಲ್ಲ. ಅವರ ಬದಲು ಸಂಪೂರ್ಣ ಇನ್ನಿಂಗ್ಸ್ ನಲ್ಲಿ ಇಶಾನ್ ಕಿಶನ್ ಫೀಲ್ಡಿಂಗ್ ಮಾಡುವಂತಾಯಿತು.

ಹಾರ್ದಿಕ್ ಪಾಂಡ್ಯ ಬರುವ ಭಾನುವಾರದಂದು ನಡೆಯಲಿರುವ ನ್ಯೂಜಿಲೆಂಡ್ ಪಂದ್ಯಕ್ಕೂ ಸಹ ಅಲಭ್ಯರಾಗುತ್ತಾರೆ ಎಂದು ಹೇಳಲಾಗಿತ್ತು. ಅದಲ್ಲದೇ ಭುಜ ಹಾಗೂ ಬೆನ್ನು ನೋವಿನಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಕಳೆದ ಆರೇಳು ತಿಂಗಳಿಂದ ಬೌಲಿಂಗ್ ಮಾಡುತ್ತಿಲ್ಲ. ಇತ್ತಿಚೇಗೆ ನಡೆದ ಐಪಿಎಲ್ ನಲ್ಲಿಯೂ ಸಹ ಪಾಂಡ್ಯ ಒಂದೇ ಓವರ್ ಸಹ ಬೌಲಿಂಗ್ ಮಾಡಿರಲಿಲ್ಲ. ಸದ್ಯ ಈಗ ಪಾಂಡ್ಯರವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಮೂಲಗಳ ಪ್ರಕಾರ ಪಾಂಡ್ಯ ನ್ಯೂಜಿಲೆಂಡ್ ವಿರುದ್ದ ಆಡಲಿರುವ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂಬ ಸುದ್ದಿ ಹೊರಬಂದಿದೆ.

ಆದರೇ ಫಾರ್ಮ್ ನಲ್ಲಿ ಇಲ್ಲದ ಪಾಂಡ್ಯ ಬದಲು ಒಬ್ಬ ತಜ್ಞ ಬ್ಯಾಟ್ಸಮನ್ ಆಡಿಸುವುದು ಉಚಿತ ಎಂದು ಹಲವಾರು ಹಿರಿಯ ಕ್ರಿಕೇಟ್ ಎಕ್ಸಪರ್ಟ್ ಗಳು ಸಲಹೆ ನೀಡಿದ್ದಾರೆ. ಪಾಂಡ್ಯ ಬದಲು ಬ್ಯಾಟ್ಸಮನ್ ಆಡಿದರೇ ಆತ ಕನಿಷ್ಠ ಮೂವತ್ತು ರನ್ ಸ್ಕೋರ್ ಮಾಡಿದರೇ ತಂಡಕ್ಕೆ ಉಪಯೋಗವಾಗುತ್ತದೆ. ಹೀಗಾಗಿ ಪಾಂಡ್ಯರನ್ನ ಗಾಯಾಳು ಎಂದು ಪರಿಗಣಿಸಿ, ಮೀಸಲು ಆಟಗಾರರಾಗಿರುವ ದೀಪಕ್ ಚಾಹರ್ ಅಥವಾ ಶ್ರೇಯಸ್ ಅಯ್ಯರ್ ರವರನ್ನ ತಂಡಕ್ಕೆ ಸೇರಿಸಿಕೊಳ್ಳುವುದು ಭಾರತದ ವಿಶ್ವಕಪ್ ಗೆಲ್ಲುವ ಹಿತದೃಷ್ಠಿಯಿಂದ ಒಳ್ಳೆಯದು ಎಂಬ ಅಭಿಪ್ರಾಯ ಹೇಳಿದ್ದಾರೆ.

ಹಾರ್ದಿಕ್ ಬದಲು ಇಶಾನ್ ಕಿಶನ್, ಭುವನೇಶ್ವರ್ ಕುಮಾರ್ ಬದಲು ಶಾರ್ದೂಲ್ ಠಾಕೂರ್ ಹಾಗೂ ವರುಣ್ ಚಕ್ರವರ್ತಿ ಬದಲು ಆರ್.ಅಶ್ವಿನ್ ರವರನ್ನ ಆಡಿಸಬೇಕು ಎಂಬ ಆಗ್ರಹ ಜೋರಾಗಿ ಕೇಳಿ ಬಂದಿದೆ. ನ್ಯೂಜಿಲೆಂಡ್ ವಿರುದ್ದದ ಪಂದ್ಯ ಭಾರತಕ್ಕೆ ಮಾಡು ಮಡಿ ಪಂದ್ಯವಾಗಲಿದ್ದು, ಈ ಪಂದ್ಯವೂ ಸೋತರೇ, ಭಾರತ ಸೆಮಿ ಫೈನಲ್ ಗೆ ಹೋಗುವುದು ಬಹಳ ಕಠಿಣವಾಗಲಿದೆ. ಹೀಗಾಗಿ ಭಾರತ ನ್ಯೂಜಿಲೆಂಡ್ ವಿರುದ್ದದ ಪಂದ್ಯವನ್ನು ಗೆಲ್ಲಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.