ದೀಪಾವಳಿ ಸಮಯದಲ್ಲಿ ಪರಿಸರದ ಕುರಿತು ಬಿಟ್ಟಿ ಪಾಠ ಮಾಡುವ ಗಂಜಿ ಗಿರಾಕಿಗಳಿಗೆ ಸರಿಯಾಗಿ ಟಾಂಗ್ ನೀಡಿದ ಸೆಹ್ವಾಗ್, ಹೇಳಿದ್ದೇನು ಗೊತ್ತೇ??

ದೀಪಾವಳಿ ಸಮಯದಲ್ಲಿ ಪರಿಸರದ ಕುರಿತು ಬಿಟ್ಟಿ ಪಾಠ ಮಾಡುವ ಗಂಜಿ ಗಿರಾಕಿಗಳಿಗೆ ಸರಿಯಾಗಿ ಟಾಂಗ್ ನೀಡಿದ ಸೆಹ್ವಾಗ್, ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ನ ಮೊದಲ ಪಂದ್ಯದಲ್ಲೇ ಭಾರತ ಪಾಕಿಸ್ತಾನದ ವಿರುದ್ದ ಬರೋಬ್ಬರಿ 10 ವಿಕೇಟ್ ಗಳ ಹೀನಾಯ ಸೋಲು ಕಂಡಿತು. ಇದು ಭಾರತ ದಶಕಗಳ ಕಾಲ ಕಾಪಾಡಿಕೊಂಡು ಬಂದಿದ್ದ ದಾಖಲೆಯೊಂದು ಮುರಿದ ಹಾಗಾಯಿತು.ಪ್ರತಿಷ್ಠಿತ ಐಸಿಸಿ ವರ್ಲ್ಡ್ ಕಪ್ ಟೂರ್ನಿಗಳಲ್ಲಿ ಭಾರತ ಇಂದಿನವರೆಗೂ ಅಜೇಯ ದಾಖಲೆಯನ್ನ ಮುಂದುವರೆಸಿಕೊಂಡು ಹೋಗಿತ್ತು. ಆದರೇ ಇದೇ ಮೊದಲ ಭಾರಿಗೆ ಪಾಕಿಸ್ತಾನಕ್ಕೆ ಭಾರತದ ವಿರುದ್ದ ಗೆಲ್ಲುವ ಅವಕಾಶ ದೊರಕಿತು.

ಮೊದಲ ಓವರ್ ನಲ್ಲೇ ರೋಹಿತ್ ಶರ್ಮಾ, ಮೂರನೇ ಓವರ್ ನಲ್ಲಿ ರಾಹುಲ್ ಹಾಗೂ ಐದನೇ ಓವರ್ ನಲ್ಲಿ ಸೂರ್ಯ ಕುಮಾರ್ ಯಾದವ್ ವಿಕೇಟ್ ಕಳೆದುಕೊಂಡ ಭಾರತ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ರವರ ಸಾಹಸಮಯ ಇನ್ನಿಂಗ್ಸ್ ನೆರವಿನಿಂದ 152 ರನ್ ಕಲೆ ಹಾಕಿದರೂ, ಬೌಲರ್ ಗಳು ಸಾಥ್ ನೀಡಲಿಲ್ಲ. ಹೀಗಾಗಿ ಪಾಕಿಸ್ತಾನ ವಿಕೇಟ್ ನಷ್ಟವಿಲ್ಲದೇ ಭಾರತದ ವಿರುದ್ದ ಗೆದ್ದು ಬೀಗಿತು.

ಆದರೇ ಭಾರತದ ವಿರುದ್ದ ಪಾಕಿಸ್ತಾನ ಗೆದ್ದ ನಂತರ, ಭಾರತದಲ್ಲಿಯೂ ಸಹ ಪಾಕಿಸ್ತಾನದ ಗೆಲುವಿನ ಸಂಭ್ರಮಕ್ಕೆ ಪಟಾಕಿ ಸಿಡಿಸಲಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ರವರ ಟ್ವೀಟ್ ಈಗ ಸಖತ್ ವೈರಲ್ ಆಗಿದೆ. ದೀಪಾವಳಿಯಂದು ಪರಿಸರ ಮಾಲಿನ್ಯದ ಕಾರಣವಾಗಿ ಪಟಾಕಿಗಳನ್ನು ನಿಷೇಧಿಸಲಾಗುತ್ತದೆ. ಆದರೇ ನಿನ್ನೆ ಪಾಕಿಸ್ತಾನ ಗೆದ್ದ ಕಾರಣ ಭಾರತದ ಕೆಲವು ಭಾಗಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರಂತೆ. ಕ್ರಿಕೇಟ್ ಗೆಲುವಿಗೆ ಸಂಭ್ರಮಿಸಿರ ಬಹುದು (ಪರೋಕ್ಷವಾಗಿ ಪಾಕಿಸ್ತಾನ ಗೆಲುವನ್ನು ಸಂಭ್ರಮಿಸಿರುವ ಗಂಜಿ ಗಿರಾಕಿಗಳಿಗೆ) ಒಳ್ಳೆಯ ಆಚರಣೆ, ಆದರೇ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿದಾಗ ಆಗುವ ಮಾಲಿನ್ಯ ಈಗ ಆಗುವುದಿಲ್ಲವೇ, ದೀಪಾವಳಿ ಸಮಯದಲ್ಲಿ ಮಾತ್ರ ಎಲ್ಲರಿಗೂ ಪರಿಸರ ಪ್ರೀತಿ ಉಕ್ಕಿ ಬರುವುದೇಕೆ?? ಯಾಕೆ ಈ ಇಬ್ಬಗಿ ನೀತಿ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ರೀಟ್ವೀಟ್ ಮಾಡಿರುವ ಹಲವಾರು ಜನ ಈ ಥರದ ಹಿಪಾಕ್ರಸಿಯನ್ನ ಪ್ರಶ್ನಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.