ಅನಾಥ ಆಶ್ರಮದಲ್ಲಿ ಅನಾಥ ಮಕ್ಕಳೊಂದಿಗೆ ಅದ್ದೂರಿಯಾಗಿ ಜನ್ಮದಿನವನ್ನು ಆಚರಿಸಿಕೊಳ್ಳುವಂತಿಲ್ಲ. ಯಾಕಂತೆ ಗೊತ್ತೇ??

ಅನಾಥ ಆಶ್ರಮದಲ್ಲಿ ಅನಾಥ ಮಕ್ಕಳೊಂದಿಗೆ ಅದ್ದೂರಿಯಾಗಿ ಜನ್ಮದಿನವನ್ನು ಆಚರಿಸಿಕೊಳ್ಳುವಂತಿಲ್ಲ. ಯಾಕಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಜಗತ್ತು ಎಂದ ಮೇಲೆ ಬಡವರು ಹಾಗೂ ಶ್ರೀಮಂತರು ಎಂಬ ಎರಡು ವರ್ಗ ಇದ್ದೇ ಇರುತ್ತದೆ ಎಂಬುದು ನಿಮಗೆಲ್ಲ ಬುದ್ಧಿ ಬಂದ ಮೇಲಿಂದ ತಿಳಿದಿದೆ. ಇನ್ನು ಅನಾಥ ಮಕ್ಕಳನ್ನು ಅನಾಥಾಶ್ರಮದಲ್ಲಿ ಇಡುತ್ತಾರೆ ಈ ಸಂದರ್ಭದಲ್ಲಿ ಶ್ರೀಮಂತರ ಮಕ್ಕಳು ತಮ್ಮ ಜನ್ಮದಿನವನ್ನು ವಿಶೇಷವಾಗಿ ಇವರ ಜೊತೆಗೆ ಆಚರಿಸುತ್ತಾರೆ ಎಂಬ ಸುದ್ದಿಗಳನ್ನು ನೀವು ಸುದ್ದಿ ಮಾಧ್ಯಮಗಳಲ್ಲಿ ನೋಡಿರುತ್ತೀರಿ ಕೇಳಿರುತ್ತೀರಿ.

ಆದರೆ ಸರ್ಕಾರದಿಂದ ಇದು ಬಂದಿರುವ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಈ ತರಹದ ಕೆಲಸಗಳನ್ನು ಮಾಡುವ ಹಾಗಿಲ್ಲ. ಅರೆ ಇದೇನಪ್ಪ ಇಂತಹ ಒಳ್ಳೆಯ ಕೆಲಸವನ್ನು ಕೂಡ ಮಕ್ಕಳ ರಕ್ಷಣಾ ಕಾರ್ಯಾಲಯ ನಿಯಮಗಳನ್ನು ಮಾಡುವ ಮೂಲಕ ತಡೆಯನ್ನು ಒಡ್ಡುತ್ತಿದ್ಯಲ್ಲ ಎಂಬ ನಿಮ್ಮ ಪ್ರಶ್ನೆಗೆ ನಾವು ಉತ್ತರ ಕೊಡಲು ಹೊರಟಿದ್ದೇವೆ ಬನ್ನಿ ಸ್ನೇಹಿತರೆ. ಹೌದು ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳ ಮಕ್ಕಳು ತಮ್ಮ ಜನ್ಮದಿನವನ್ನು ಅನಾಥ ಮಕ್ಕಳ ಆಶ್ರಮಕ್ಕೆ ಹೋಗಿ ಅದ್ಧೂರಿಯಾಗಿ ಆಚರಿಸುವ ಹಾಗೂ ಕೇಕನ್ನು ತಿನ್ನಿಸುವ ಪ್ರಕ್ರಿಯೆಯನ್ನು ಹಲವಾರು ವರ್ಷಗಳ ಹಿಂದೆ ಪ್ರಾರಂಭಿಸಿದ್ದಾರೆ.

ಇನ್ನು ಇದನ್ನು ಈಗಾಗಲೇ ಎಲ್ಲರೂ ಕೂಡ ಒಳ್ಳೆಯ ಕೆಲಸ ಎಂಬುದಾಗಿ ಅಂದುಕೊಂಡಿದ್ದಾರೆ. ಆದರೆ ಮಕ್ಕಳ ರಕ್ಷಣೆ ಇಲಾಖೆ ಅನಾಥ ಮಕ್ಕಳ ಆಶ್ರಮ ದಲ್ಲಿ ಈ ರೀತಿಯ ಅದ್ದೂರಿ ಜನ್ಮ ದಿನವನ್ನು ಆಚರಿಸುವುದರ ಮೂಲಕ ಅನಾಥ ಮಕ್ಕಳ ಮನಸ್ಸಿನಲ್ಲಿ ಬೇರೆಯದೇ ಭಾವನೆ ಮೂಡುವಂತೆ ಮಾಡಲಾಗುತ್ತದೆ ಎಂಬುದಾಗಿ ಹೇಳಲಾಗುತ್ತದೆ. ಅದೇನೆಂದರೆ ಚಿಕ್ಕವಯಸ್ಸಿನಿಂದಲೇ ಅವರು ಶ್ರೀಮಂತರು ನಾವು ಬಡವರು ಎಂಬ ಭಾವನೆ ಮೂಡಿ ಬಂದು ಮುಂದಿನ ದಿನಗಳಲ್ಲಿ ಅದು ಅವರ ಜೀವನದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಪಾದಿಸಲಾಗಿದೆ. ಹೀಗಾಗಿಯೇ ಮಕ್ಕಳ ರಕ್ಷಣ ಕಾರ್ಯಾಲಯ ಅನಾಥಾಶ್ರಮದಲ್ಲಿ ಅನಾಥ ಮಕ್ಕಳೊಂದಿಗೆ ಅದ್ದೂರಿ ಜನ್ಮ ದಿನವನ್ನು ಆಚರಿಸಲು ನಿಷೇಧವನ್ನು ಹೇರಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.