ಭುವನೇಶ್ವರ್ ಬೇಡವೇ ಬೇಡ, ಈತನನ್ನು ಆಯ್ಕೆ ಮಾಡಿ. ಪಾಕ್ ತಂಡದ ವಿರುದ್ಧ ಇವರೆಲ್ಲರನ್ನು ಆಯ್ಕೆ ಮಾಡಿ ಎಂದು ತಂಡ ಘೋಷಿಸಿದ ಅಜಿತ್, ಯಾರ್ಯರಂತೆ ಗೊತ್ತೇ??

ಭುವನೇಶ್ವರ್ ಬೇಡವೇ ಬೇಡ, ಈತನನ್ನು ಆಯ್ಕೆ ಮಾಡಿ. ಪಾಕ್ ತಂಡದ ವಿರುದ್ಧ ಇವರೆಲ್ಲರನ್ನು ಆಯ್ಕೆ ಮಾಡಿ ಎಂದು ತಂಡ ಘೋಷಿಸಿದ ಅಜಿತ್, ಯಾರ್ಯರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆಯಲ್ಲಿ, ಈಗ ತಂಡದ ಸಂಯೋಜನೆ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಅದರಲ್ಲೂ ಮೊದಲನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಜಯ ದಾಖಲಿಸಿದರೂ, ಭಾರತದ ಬೌಲಿಂಗ್ ಬಗ್ಗೆ ಭಾರತ ತಂಡದ ಹಿರಿಯ ಕ್ರಿಕೇಟ್ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ‌. ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಜೊತೆಗೆ ಮಾತನಾಡಿದ ಅಜಿತ್ ಅಗರ್ಕರ್ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.

ಇಂಗ್ಲೆಂಡ್ ವಿರುದ್ದದ ಅಭ್ಯಾಸ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಹಾಗೂ ರಾಹುಲ್ ಚಾಹರ್ ಅತ್ಯಂತ ದುಬಾರಿಯಾಗಿದ್ದಾರೆ. ಅವರಿಬ್ಬರೂ ಸಂಪೂರ್ಣ ಲಯ ತಪ್ಪಿದ್ದಾರೆ. ಹಾಗಾಗಿ ಅವರಿಬ್ಬರನ್ನು ಭಾರತ ತಂಡ ಮುಂದಿನ ಪಂದ್ಯಗಳಲ್ಲಿ ಆಡಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಭುವನೇಶ್ವರ್ ಬದಲು ಶಾರ್ದೂಲ್ ಠಾಕೂರ್ ರವರನ್ನ ಆಡಿಸಬಹುದು. ಹಾಗೂ ರಾಹುಲ್ ಚಾಹರ್ ಬದಲು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯವರನ್ನ ಆಡಿಸಿ ಎಂದು ಹೇಳಿದ್ದಾರೆ.

ಇನ್ನು ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದ ಕಾರಣ ಭಾರತ ಐವರ ಬದಲು ಆರು ಬೌಲರ್ ಜೊತೆ ಕಣಕ್ಕಿಳಿಯುವುದು ಉತ್ತಮ. ಹಾಗಾದಾಗ ಮಾತ್ರ ವಿರಾಟ್ ಗೆ ಟೆನ್ಷನ್ ಇರುವುದಿಲ್ಲ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಾರೆಂದರೇ, ಐವರು ಬೌಲರ್ ಗಳು ಸಾಕು. ಆಗ ಸೂರ್ಯ ಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ ರವರನ್ನ ತಂಡದಲ್ಲಿ ಸೇರಿಸಿಕೊಳ್ಳುವ ಚಿಂತನೆ ನಡೆಸಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಅಜಿತ್ ಅಗರ್ಕರ್ ಪಾಕಿಸ್ತಾನದ ವಿರುದ್ದ ಆಡಲಿರುವ ಸಂಭವನೀಯ ತಂಡವನ್ನು ಪ್ರಕಟಿಸಿದ್ದಾರೆ. ತಂಡ ಇಂತಿದೆ – ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್,ಆರ್.ಅಶ್ವಿನ್,ಮಹಮದ್ ಶಮಿ, ಜಸಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ.