ಕೇವಲ 161 ಕೋಟಿ ಹಾಕಿ ಮಾಡಿದ ಸ್ಕ್ವಿಡ್ ಗೇಮ್ ವೆಬ್ ಸೀರಿಸ್ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತೇ?? ಯಪ್ಪಾ ಒಂದು ಶೋ ಗೆ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಕರೋನಾ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಚಿತ್ರಮಂದಿರಗಳು ಮುಚ್ಚಿದವು. ಸಿನಿಮಾಗಳ ಚಿತ್ರೀಕರಣವನ್ನು ಸ್ತಗಿತಗೊಳಿಸಲಾಯಿತು. ಇದರಿಂದ ಭಾರಿ ಹೊಡೆತ ಬಿದ್ದಿದ್ದು ಸಿನಿಮಾ ಕ್ಷೇತ್ರಕ್ಕೆ. ಇಲ್ಲಿನ ಪ್ರತಿ ಸಿಬ್ಬಂದಿ ವರ್ಗ ಕೆಲಸವಿಲ್ಲದೇ ಸಾಕಷ್ಟು ಕಷ್ಟ ಪಡಬೇಕಾಯಿತು. ಇದು ವೀಕ್ಷಕರ ಮೇಲೆಯೂ ಪರಿಣಾಮ ಬೀರಿದ್ದು ಸುಳ್ಳಲ್ಲ. ಆದರೆ ವೀಕ್ಷಕರಿಗೆ ಅಲ್ಟ್ರನೇಟಿವ್ ಆಗಿ ಒಟಿಟಿ ಫ್ಲಾಟ್ ಫಾರ್ಮ್ ಸಿಕ್ತು. ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್ ಮೊದಲಾದವು ವೆಬ್ ಸೀರಿಸ್ ಗಳನ್ನು ಪ್ರಸಾರ ಮಾಡುವ ಮೂಲಕ ಜನರಿಗೆ ತುಂಬಾನೇ ಹತ್ತಿರವಾದವು. ಈ ಮೊದಲು ಪ್ರಸಾರ ಮಾಡುತ್ತಿದ್ದರೂ ಹಿಟ್ ಆಗಿದ್ದು ಮಾತ್ರ ಕರೋನಾ ಲಾಕ್ ಡೌನ್ ಸಮಯದಲ್ಲಿಯೇ!

ಇನ್ನು ನೆಟ್ ಫ್ಲಿಕ್ಸ್ ಒರಿಜಿನಲ್ಸ್ ಶೋ ಗಳನ್ನು ಪ್ರಸಾರ ಮಾಡುತ್ತಿದ್ದು ಇದಕ್ಕೆ ಅಧಿಕ ವ್ಯೂವರ್ ಶಿಪ್ ಇದೆ. ಅದರಲ್ಲಿ ಇತ್ತೀಚಿಗಿನ ಒಂದು ವೆಬ್ ಸೀರಿಸ್ ವಿಶ್ವದಾದ್ಯಂತ ಅತ್ಯಂತ ಹೆಚ್ಚಿನ ವೀಕ್ಷಣೆಯನ್ನು ಪಡೆದ ವೆಬ್ ಸೀರಿಸ್ ಎನ್ನುವ ಖ್ಯಾತಿಗೆ ಭಾಜನವಾಗಿದೆ. ಅದುವೇ ಕೊರಿಯನ್ ಭಾಷೆಯ ’ಸ್ಕ್ವಿಡ್ ಗೇಮ್’ ವೆಬ್ ಸೀರಿಸ್! ೯ ಎಪಿಸೋಡ್ ಗಳನ್ನು ಹೊಂದಿರುವ ಈ ವೆಬ್ ಸೀರೀಸ್ ನಿರ್ಮಾಣಕ್ಕೆ ಹೂಡಿದ್ದ ಬಂಡವಾಳ 161 ಕೋಟಿ ರೂಪಾಯಿಗಳು. ಆದರೆ ಈಗ ಇದರ ಮೌಲ್ಯ ಎಷ್ಟು ಗೊತ್ತಾ?

‘ಸ್ಕ್ವಿಡ್ ಗೇಮ್‌’ ವೆಬ್ ಸೀರಿಸ್ ನ ಮೌಲ್ಯ ಬರೋಬ್ಬರಿ 6750 ಕೋಟಿ ರುಪಾಯಿಗಳು. ನೆಟ್‌ಫ್ಲಿಕ್ಸ್‌, ತನ್ನ ಕಂಟೆಂಟ್‌ನ ಒಟ್ಟು ವೀಕ್ಷಣೆಯ ಆಧಾರ ಮೇಲೆ ಯಾವ ಕಂಟೆಂಟ್ ಎಷ್ಟು ಮಾರುಕಟ್ಟೆ ರೆವಿನ್ಯೂ ತರುತ್ತದೆ ಎನ್ನುವುದನ್ನು ಲೆಕ್ಕ ಹಾಕುತ್ತದೆ. ಆ ಆಧಾರದ ಮೇಲೆ ಉತ್ತಮ ಸರಣೀಗಳನ್ನು ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ‘ಸ್ಕ್ವಿಡ್‌ ಗೇಮ್’ 900 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ 6750 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇಡೀ ವಿಶ್ವದಲ್ಲೇ ಜನಪ್ರಿಯ ಶೋ ಎನಿಸಿಕೊಂಡಿರುವ ಸ್ಕ್ವೀಡ್ ಗೇಮ್, ಆಟಗಳನ್ನು ಆಡಿಸಿ ನಂತರ ಸೋತವರನ್ನು ಕೊಲ್ಲುವ, ಹಾಗೂ ಗೆದ್ದ ವ್ಯಕ್ತಿಗೆ ಸಾವಿರಾರು ಕೋಟಿ ಬಹುಮಾನ ನೀಡುವ ಗೇಮ್ ಆಡಿಸುವಂಥ ಕತೆಯನ್ನು ಹೊಂದಿದೆ. ನೆಟ್ ಫ್ಲಿಕ್ಸ್ ಭಾರತದಲ್ಲಿ ನೋಂದಣಿ ಮಾಡಿಕೊಳ್ಳಲು ಕೇವಲ ನಾಲ್ಕು ಜನರು ಸೇರಿ ೮೦೦ ರೂಪಯಿಗಳನ್ನು ಪಾವತಿಸಿದರೆ ಆಯಿತು. ಬೇಕಾದ ಸೀರಿಸ್, ಶೋಗಳು ಹಾಗೂ ಸಿನಿಮಾಗಳನ್ನು ವೀಕ್ಷಿಸಬಹುದು.

Post Author: Ravi Yadav