ಕನ್ನಡಿಗ ದ್ರಾವಿಡ್ ರವರ ಎಂಟ್ರಿಗೆ ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದೇನು ಗೊತ್ತೇ?? ಇದು ದ್ರಾವಿಡ್ ಸರ್ ಅಂದ್ರೆ ಎಂದ ನೆಟ್ಟಿಗರು.

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೇಟ್ ತಂಡದ ಸುವರ್ಣಯುಗ ಆರಂಭವಾಗಿದೆ ಎಂದು ಹೇಳಬಹುದು. ಮಹತ್ವದ ಐಸಿಸಿ ಟೂರ್ನಿಗಳ ಫೈನಲ್ ಗಳಲ್ಲಿ ಎಡವಿದರೂ, ಭಾರತ ತಂಡ ಆಸ್ಟ್ರೇಲಿಯಾ, ಇಂಗ್ಲೆಂಡ್ ನಂತಹ ದೇಶಗಳಲ್ಲಿ ಟೆಸ್ಟ್ ಸರಣಿಗಳನ್ನು ಗೆಲ್ಲುತ್ತಿದೆ. ಭಾರತ ತಂಡದ ಬೆಂಚ್ ಸ್ಟ್ರೆಂತ್ ಕೂಡಾ ಉತ್ತಮವಾಗಿದ್ದು, ಯಾವ ಪ್ರಸಿದ್ದ ಆಟಗಾರರ ಗೈರಿನ ಅನುಪಸ್ಥಿತಿಯೂ ಸಹ ಕಾಡುತ್ತಿಲ್ಲ. ಇದಲ್ಲದೇ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಅವಧಿ ಈ ನವೆಂಬರ್ ಗೆ ಮುಗಿಯಲಿದ್ದು, ಅವರ ನಂತರದ ಕೋಚ್ ಯಾರು ಎಂಬ ಪ್ರಶ್ನೆ ಬಹುದಿನಗಳಿಂದ ಕೇಳಿ ಬರುತ್ತಿತ್ತು.

ಭಾರತ ತಂಡದ ಮುಂದಿನ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಎಂದು ಕೇಳಿ ಬರುತ್ತಿತ್ತು. ಆದರೇ ಈ ಹಿಂದೆ ಅಂಡರ್ 19 ಹಾಗೂ ಭಾರತ ಎ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್, ಆ ಬಳಿಕ ಎನ್.ಸಿ.ಎ ಮುಖ್ಯಸ್ಥರಾಗಿದ್ದರು. ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ನಿರ್ಧರಿಸಿದ್ದ ರಾಹುಲ್, ಕೋಚ್ ಬದಲು ಎನ್.ಸಿ.ಎ ಮುಖ್ಯಸ್ಥ ಹುದ್ದೆಯಲ್ಲಿಯೇ ಮುಂದುವರೆಯುವುದಾಗಿ ಘೋಷಿಸಿದ್ದರು. ಆದರೇ ಮೊನ್ನೆ ದುಬೈನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ, ಖಜಾಂಚಿ ಧುಮಾಲ್, ರಾಹುಲ್ ರನ್ನ ಕರೆಸಿಕೊಂಡು, ಕೊನೆಗೂ ಮಹತ್ವದ ಮುಖ್ಯ ಕೋಚ್ ಹುದ್ದೆ ಸ್ವೀಕರಿಸಲು ಮನವೊಲಿಸಿದ್ದಾರಂತೆ.

ಈ ಜೊತೆಗೆ ರಾಹುಲ್ ಗೆ ಟಾಸ್ಕ್ ಸಹ ನೀಡಿರುವ ಬಿಸಿಸಿಐ, ಮುಂಬರುವ ಟಿ 20 ವಿಶ್ವಕಪ್, ಏಕದಿನ ವಿಶ್ವಕಪ್, ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲಿಸಿಕೊಡಿ ಎಂದು ಹೇಳಲಾಗಿದೆಯಂತೆ. ಈ ಜೊತೆಗೆ ರಾಹುಲ್ ದ್ರಾವಿಡ್ ಪರಮಾಪ್ತ, ಅಂಡರ್ 19 ತಂಡದ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆರವರನ್ನು ಸಹ ಭಾರತ ತಂಡದ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಐಸಿಸಿ ಟಿ 20 ವಿಶ್ವಕಪ್ ಬಳಿಕ ರವಿಶಾಸ್ತ್ರಿಯವರಿಂದ ತೆರವಾಗಲಿರುವ ಭಾರತ ಕ್ರಿಕೇಟ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ರಾಹುಲ್ ಸ್ವೀಕರಿಸುವುದು ಬಹುತೇಖ ಖಚಿತವಾಗಿದೆ. ಈ ವಿಷಯದ ಬಗ್ಗೆ ಟ್ವೀಟ್ ಮಾಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್, ಇನ್ಮುಂದೆ ವಿಶ್ವದ ಕ್ರಿಕೇಟ್ ಆಡಲಿರುವ ತಂಡಗಳು ಬಹು ಎಚ್ಚರವಾಗಿ ಹಾಗೂ ಹುಷಾರಾಗಿರಬೇಕು ಎಂದು ಹೇಳಿದ್ದಾರೆ. ರಾಹುಲ್ ದ್ರಾವಿಡ್ ಗಲ್ಲಿ ಕ್ರಿಕೇಟರ್ ನು ಸಹ ವಿಶ್ವ ಶ್ರೇಷ್ಠ ಕ್ರಿಕೇಟರ್ ಆಗಿ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav