ಅನುಬಂಧ ಅವಾರ್ಡ್ಸ್ ನಲ್ಲಿ ಮೋಸವಾಗಿದೆ ಎಂದು ಧ್ವನಿ ಎತ್ತಿದ ಕನ್ನಡತಿ ಫ್ಯಾನ್ಸ್, ಯಾವ ಅವಾರ್ಡ್ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಅನುಬಂಧ ಅವಾರ್ಡ ನಲ್ಲಿ ಕೊಟ್ಟ ಎಲ್ಲಾ ಪ್ರಶಸ್ತಿಗಳೂ ಬಹುತೇಕ ನ್ಯಾಯಯುತವಾಗಿಯೇ ಇದೆ. ಯಾಕೆಂದ್ರೆ ಎಲ್ಲಾ ಧಾರಾವಾಹಿಗಳನ್ನೂ ವೀಕ್ಷಿಸುವ ವೀಕ್ಷಕವರ್ಗ ಇದ್ದು, ಎಲ್ಲಾ ಧಾರಾವಾಹಿಯ ಪಾತ್ರಗಳಿಗೂ ಪ್ರಶಸ್ತಿಗಳನ್ನು ನೀಡಲಾಗಿದೆ. ಹಾಗಾಗಿ ಒಬ್ಬರಿಗೆ ಒಂದು ಅವಾರ್ಡ್ ವಿಷಯಲ್ಲಿ ಬೇಸರವಾದರೂ ಇನ್ನೊಂದು ಅವಾರ್ಡ್ ಗಳಿಸಿದ ಖುಷಿ ಇದೆ.

ಈ ಬಾರಿ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ನೀಡಿದ್ದು ಲಕ್ಷಣ ಧಾರಾವಾಹಿಯ ಶ್ವೇತಾ ಪಾತ್ರಕ್ಕೆ. ಈ ಪಾತ್ರವನ್ನು ನಿಭಾಯಿಸುತ್ತಿರುವುದು ಸುಕೃತಾ. ಸುಕೃತಾ ಅಗ್ನಿಸಾಕ್ಷಿಯಲ್ಲಿ ಅತ್ಯುತ್ತಮ ಅಭಿನಯ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಅದಾದ ಬಳಿಕ ಅಗ್ನಿಸಾಕ್ಷಿಮುಗಿದ ಮೇಲೆ ಸುಕೃತಾ ಯಾವ ಧಾರಾವಾಹಿಯಲ್ಲೂ ನಟಿಸಿರಲಿಲ್ಲ. ಕೆಲವು ಫೋಟೊ ಶೂಟ್ ಗಳಲ್ಲಿ ಮಾತ್ರ ಭಾಗವಹಿಸಿದ್ದರು. ಇದೀಗ ಇತ್ತೀಚಿಗೆ ಶುರುವಾದ ಲಕ್ಷಣ ಧಾರಾವಾಹಿಯಲಿ ಸುಕೃತಾ ಅವರದ್ದು ಶ್ವೇತಾ ಎಂಬ ಹೆಸರಿನ ನೆಗೆಟಿವ್ ರೋಲ್.

ನೆಗೆಟಿವ್ ಪಾತ್ರವನ್ನೂ ಕೂಡ ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ ಸುಕೃತಾ. ಇನ್ನು ಅತ್ಯಂತ ಸ್ಟೈಲಿಶ್ ಆಗಿ ಸುಕೃತಾ ಕಾಣಿಸಿಕೊಂಡಿದ್ದಾರೆ. ಅವರ ಉಡುಪುಗಳು ತುಂಬಾನೇ ಸ್ಟೈಲ್ ಆಗಿವೆ. ಈ ಬಾರಿ ಅನುಬಂಧ ಅವಾರ್ಡ್ ನಲ್ಲಿ ಸುಕೃತಾ ಅವರಿಗೆ ಸ್ಟೈಲಿಶ್ ಐಕಾನ್ ಪ್ರಶಸ್ತಿ ಸಿಕ್ಕಿದೆ. ಇದು ತುಂಬಾ ಜನರಿಗೆ ಖುಷಿ ಕೊಟ್ಟಿದೆ. ಯಾಕೆಂದ್ರೆ ತುಂಬಾ ಕಡಿಮೆ ಸಮಯದಲ್ಲಿ ನೆಗೆಟಿ ಪಾತ್ರದಲ್ಲಿ ಫೇಮಸ್ ಆಗಿದ್ದಾರೆ ಸುಕೃತಾ. ಆದರೆ ಅವರಿಗಿಂತ ಮೊದಲಿನಿಂದ ಕನ್ನಡತಿಯ ವರೂಧಿನಿ ಪಾತ್ರಧಾರಿ ಸಾರಾ ಅಣ್ಣಯ್ಯ ತುಂಬಾನೇ ಸ್ಟೈಲಿಶ್ ಆಗಿ ಡ್ರೆಸ್ ಮಾಡಿಕೊಳ್ಳುತ್ತಾರೆ. ಧಾರಾವಾಹಿಯಲ್ಲಿಯೂ ಹಾಗೂ ನಿಜಜೀವನದಲ್ಲಿಯೂ ಸಾರಾ ತುಂಬಾನೇ ಸ್ಟೈಲಿಶ್. ಹಾಗಾಗಿ ಅವರಿಗೇ ಈ ಪ್ರಶಸ್ತಿ ನೀಡಬೇಕಿತ್ತು ಎಂದು ಅಭಿಮಾನಿಗಳು ದ್ವನಿ ಎತ್ತಿದ್ದಾರೆ.

Post Author: Ravi Yadav