ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಈ ಇಬ್ಬರೂ ಆಟಗಾರರು ಜವಾಬ್ದಾರಿ ಹೊರಬೇಕು ಎಂದ ಗಂಭೀರ್, ಯಾರ್ಯರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇದೀಗ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದೇ ತಡ , ಈಗ ಚರ್ಚೆಗಳು ಜೋರಾಗಿ ಆರಂಭವಾಗಿವೆ. ಭಾರತ ಹಾಗೂ ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರುವ ಕಾರಣ, ಲೀಗ್ ಹಂತದಲ್ಲಿಯೇ ಹೈವೋಲ್ಟೇಜ್ ಪಂದ್ಯ ಏರ್ಪಡುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಬಗ್ಗೆ ಮಾತನಾಡಿರುವ ಭಾರತೀಯ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಟೀಂ ಇಂಡಿಯಾಕ್ಕೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.

ಮಹತ್ವದ ಟೂರ್ನಿಗಳಲ್ಲಿ ಸಾಂಪ್ರದಾಯಕ ಎದುರಾಳಿಯನ್ನೇ ಮೊದಲ ಪಂದ್ಯದಲ್ಲಿ ಎದುರಿಸಬೇಕು ಎಂದರೇ ತಂಡದಲ್ಲಿರುವ ಕಿರಿಯ ಆಟಗಾರರ ಮೇಲೆ ಸಹಜವಾಗಿಯೇ ಕೊಂಚ ಹೆಚ್ಚಿನಟೆನ್ಶನ್ ಉಂಟಾಗುತ್ತದೆ. ನೀರಿಕ್ಷೆಗಳು ಹೆಚ್ಚಾದರೇ ಅದು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೋಹ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಗೌತಮ್ ಗಂಭೀರ್ ತಾವು ಪಾಕಿಸ್ತಾನದ ವಿರುದ್ದ ಮೊದಲ ಪಂದ್ಯ ಆಡಿದ್ದಾಗ ನಾನು ತುಸು ಹೆಚ್ಚೇ ಟೆನ್ಶನ್ ಹಾಗೂ ಉತ್ಸಾಹಕ್ಕೆ ಒಳಗಾಗಿದ್ದೆ. ಆದರೇ ಹಿರಿಯ ಆಟಗಾರರು ಯಾವ ಟೆನ್ಶನ್ ಇಲ್ಲದೇ ನಿರಾಳರಾಗಿದ್ದರು. ಹಾಗಾಗಿ ಅವರು ಅಂಜು, ಅಳುಕು ಇಲ್ಲದೇ ಉತ್ತಮ ಪ್ರದರ್ಶನ ನೀಡಿದರು. ಹಾಗಾಗಿ ಟಿ 20 ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕು ಎಂದಿದ್ದಾರೆ. ಭಾರತ, ಪಾಕಿಸ್ತಾನ , ನ್ಯೂಜಿಲೆಂಡ್, ಅಫಘಾನಿಸ್ತಾನ ಒಂದು ಗುಂಪಿನಲ್ಲಿದ್ದು ಮತ್ತೊಂದು ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡಿಸ್, ದಕ್ಷಿಣ ಆಫ್ರಿಕಾ ಸ್ಥಾನ ಪಡೆದಿವೆ.

Post Author: Ravi Yadav