ಆರ್ಸಿಬಿ ತಂಡ ಸೇರಿ ಸ್ಟಾರ್ ಆಗುವ ಮುನ್ನ, ಬೇರೆ ಫ್ರಾಂಚೈಸಿಗಳ ಪರ ಆಡಿದಾಗ ಬೆಂಚ್ ಕಾಯಿಸಿದ್ದ ಆಟಗಾರರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಹಲವಾರು ಕ್ರಿಕೇಟಿಗರ ಪಾಲಿಗೆ ವರದಾನವಾಗಿದೆ. ಹಾಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಹ ಆರ್ಸಿಬಿ ತಂಡ ಸೇರಿದ ನಂತರವೇ ಸ್ಟಾರ್ ಆದವರು‌. ಬೇರೆ ಫ್ರಾಂಚೈಸಿಗಳ ಪರ ಆಡುತ್ತಿದ್ದಾಗ ಬೆಂಚ್ ಕಾಯಿಸಿದ್ದ ಕೆಲವು ಆಟಗಾರರು, ಆರ್ಸಿಬಿ ತಂಡಕ್ಕೆ ಬಂದ ನಂತರ ಮ್ಯಾಚ್ ಆಡಿ, ಐಪಿಎಲ್ ಸ್ಟಾರ್, ಭಾರತ ತಂಡವನ್ನ ಪ್ರತಿನಿಧಿಸಿದಂತಹ ಹಲವಾರು ನಿದರ್ಶನಗಳು ಇವೆ. ಅಂತಹ ಟಾಪ್ 5 ಆಟಗಾರರ ಬಗ್ಗೆ ತಿಳಿಯೋಣ ಬನ್ನಿ.

1.ಯುಜವೇಂದ್ರ ಚಾಹಲ್ – ಆರ್ಸಿಬಿ ತಂಡದ ಪ್ರಮುಖ ಸ್ಪಿನ್ನರ್ ಆಗಿರುವ ಯುಜಿ ಆರ್ಸಿಬಿ ತಂಡವನ್ನ ಸೇರಿದ್ದು 2015 ರಲ್ಲಿ. ಅದಕ್ಕಿಂತ ಮುಂಚೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಯುಜಿ ಆಡಿದ್ದು ಕೇವಲ ಬೆರಳಣಿಕೆಯಷ್ಟು ಪಂದ್ಯಗಳನ್ನ. ಆಡಿದ್ದಕ್ಕಿಂತ ಹೆಚ್ಚು ಬೆಂಚು ಕಾಯಿಸಿದ್ದರು. ಆರ್ಸಿಬಿ ತಂಡ ಸೇರಿ ಆಡುವ ಅವಕಾಶ ಪಡೆದ ಯುಜಿ ಉತ್ತಮ ಪ್ರದರ್ಶನ ನೀಡಿ, ಭಾರತ ತಂಡಕ್ಕೂ ಪದಾರ್ಪಣೆ ಮಾಡಿದರು.

2.ಗ್ಲೆನ್ ಮ್ಯಾಕ್ಸವೆಲ್ – ಸದ್ಯ ಆರ್ಸಿಬಿ ತಂಡದ ಪರ ಅರ್ಧ ಶತಕಗಳ ಮೇಲೆ ಅರ್ಧ ಶತಕ ಭಾರಿಸುತ್ತಿರುವ ಗ್ಲೆನ್ ಮ್ಯಾಕ್ಸವೆಲ್ ಈ ಹಿಂದೆ 2013 ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಆದರೇ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿದ್ದು ಬಹುತೇಖ ಕಡಿಮೆ‌. ಮುಂದೆ ಪಂಜಾಬ್ ಕಿಂಗ್ಸ್ ತಂಡದ ಪರ ಆಡಿ ಮ್ಯಾಚ್ ವಿನ್ನರ್ ಆದರು.

3.ಹರ್ಷಲ್ ಪಟೇಲ್ – ಸದ್ಯ ಪರ್ಪಲ್ ಪಟೇಲ್ , ಹ್ಯಾಟ್ರಿಕ್ ಪಟೇಲ್ ಎಂದು ಕರೆಯಿಸಿಕೊಳ್ಳುವ ಹರ್ಷಲ್ ಪಟೇಲ್ 2010ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದರು. ಆದರೇ ಅಲ್ಲಿ ಆಡುವ ಅವಕಾಶವೇ ಸಿಗಲಿಲ್ಲ. ನಂತರ 2012 ರಲ್ಲಿ ಆರ್ಸಿಬಿ ತಂಡ ಸೇರಿದ ಮೇಲೆ ಐಪಿಎಲ್ ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಲಭಿಸಿತು.

4.ನವದೀಪ್ ಸೈನಿ – ಆರ್ಸಿಬಿ ತಂಡದ ಬೌಲರ್ ಆಗಿ, ಭಾರತ ತಂಡವನ್ನು ಪ್ರತಿನಿಧಿಸಿರುವ ನವದೀಪ್ ಸೈನಿ 2017ರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರು. ಅಲ್ಲಿ ಸೀಸನ್ ಪೂರ್ತಿ ಬೆಂಚು ಕಾಯಿಸಿದ್ದರು. ಆದರೇ 2018ರಲ್ಲಿ ಬೆಂಗಳೂರು ತಂಡ ಸೇರಿದ ನಂತರ ಸೈನಿ ಉತ್ತಮ ಪ್ರದರ್ಶನ ನೀಡಿ, ರಾಷ್ಟ್ರೀಯ ತಂದಲ್ಲಿಯೂ ಸಹ ಸ್ಥಾನ ಪಡೆದರು.

5.ಕೆ.ಎಸ್.ಭರತ್ – ಸದ್ಯ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕದ ವಿಕೇಟ್ ಕೀಪರ್ ಬ್ಯಾಟ್ಸಮನ್ ಕೆ.ಎಸ್‌.ಭರತ್ ಈ ಹಿಂದೆ 2015 ರಲ್ಲಿ ದೆಹಲಿ ತಂಡದಲ್ಲಿದ್ದರು. ಆದರೇ ಅಲ್ಲಿ ಪದಾರ್ಪಣೆ ಮಾಡುವ ಅವಕಾಶವೇ ಸಿಗಲಿಲ್ಲ. ಈ ಸಾರಿ ದುಬೈನಲ್ಲಿ ನಡೆಯುತ್ತಿರುವ ಚರಣದಲ್ಲಿ ಪದಾರ್ಪಣೆ ಮಾಡಿರುವ ಭರತ್, ಸದ್ಯ ಆರ್ಸಿಬಿ ತಂಡದ ಭರವಸೆಯ ಬ್ಯಾಟ್ಸಮನ್ ಆಗಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav