ಕೊನೆಯಲ್ಲಿ ಭರತ್ ರವರು ಸಿಕ್ಸರ್ ಗಳಿಸುವ ಮುನ್ನ ಮ್ಯಾಕ್ಸ್ ವೆಲ್ ಹೇಳಿದ್ದೇನು ಗೊತ್ತೇ?? ಗುಟ್ಟನ್ನು ರಟ್ಟು ಮಾಡಿದ ಭರತ್.

ಕೊನೆಯಲ್ಲಿ ಭರತ್ ರವರು ಸಿಕ್ಸರ್ ಗಳಿಸುವ ಮುನ್ನ ಮ್ಯಾಕ್ಸ್ ವೆಲ್ ಹೇಳಿದ್ದೇನು ಗೊತ್ತೇ?? ಗುಟ್ಟನ್ನು ರಟ್ಟು ಮಾಡಿದ ಭರತ್.

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಕೊನೆಯ ಲೀಗ್ ಪಂದ್ಯಗಳು ಎಂದು ನೀಡದ ಮನರಂಜನೆಯನ್ನ ನಿನ್ನೆ ಪ್ರೇಕ್ಷಕರಿಗೆ ನೀಡಿದವು. ಮುಂಬೈ ಇಂಡಿಯನ್ಸ್ ತಂಡ ಈ ಭಾರಿ ಐಪಿಎಲ್ ನಲ್ಲಿ ದಾಖಲಾದ ಅತ್ಯಧಿಕ ಮೊತ್ತವನ್ನ ಗಳಿಸಿತ್ತು. ಇತ್ತ ಚೇಸ್ ಮಾಡಿದ ಹೈದರಾಬಾದ್ ತಂಡ ಸಹ 200 ರ ಗಡಿಗೆ ತೆಗೆದುಕೊಂಡು ಹೋಯಿತು. ಇನ್ನೊಂದೆಡೆ ನಡೆದ ಆರ್ಸಿಬಿ ಮತ್ತು ದೆಹಲಿ ಪಂದ್ಯದಲ್ಲಿ ವಿಜಯಲಕ್ಷ್ಮಿ ಕೊನೆ ಘಳಿಗೆ ತನಕ ಹೋಗಿ ಕೊನೆಯ ಎಸೆತದಲ್ಲಿ ಆರ್ಸಿಬಿ ತಂಡದ ವಿಕೇಟ್ ಕೀಪರ್ ಬ್ಯಾಟ್ಸಮನ್ ಕೆ.ಎಸ್.ಭರತ್ ಸಿಡಿಸಿದ ಸಿಕ್ಸರ್ ನಿಂದ ಆರ್ಸಿಬಿ ಜಯಗಳಿಸಿತು. ಎಲ್ಲರೂ ಅಸಾಧ್ಯ ಎಂಬ ಗುರಿಯನ್ನ ಸಾಧಿಸಿ ತೋರಿದವರು ಭರತ್‌.

ಇನ್ನಿಂಗ್ಸ್ ನ ನಾಲ್ಕನೇ ಎಸೆತದಲ್ಲಿಯೇ ಕ್ರೀಸ್ ಗೆ ಬಂದ ಭರತ್ ಕೊನೆಯ ಎಸೆತದವರೆಗೂ ಆಡಿ ಆರ್ಸಿಬಿ ತಂಡವನ್ನು ಗೆಲ್ಲಿಸಿದರು. 52 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ನೆರವಿನಿಂದ 78 ರನ್ ಗಳಿಸಿದ ಭರತ್ ಸಹಜವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕೊನೆಯ ಓವರ ನಲ್ಲಿ 15 ರನ್ ಬೇಕೆಂದಾಗ ತಮ್ಮ ಹಾಗೂ ಗ್ಲೆನ್ ಮ್ಯಾಕ್ಸವೆಲ್ ನಡುವೆ ನಡೆದ ಸಂಭಾಷಣೆಯನ್ನ ಪೋಸ್ಟ್ ಮ್ಯಾಚ್ ಶೋ ನಲ್ಲಿ ಭರತ್ ಬಹಿರಂಗಗೊಳಿಸಿದ್ದಾರೆ.

ಆರು ಬಾಲ್ ನಲ್ಲಿ 15 ರನ್ ಬೇಕಿದ್ದಾಗ ,ಮೊದಲ ಬಾಲ್ ನಲ್ಲಿ ಬೌಂಡರಿ ಸಿಡಿಸಿದ ಮ್ಯಾಕ್ಸವೆಲ್, ಎರಡನೇ ಎಸೆತದಲ್ಲಿ ಎರಡು ರನ್ ಪಡೆದುಕೊಂಡು , ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದರು. ಆಗ ಮ್ಯಾಕ್ಸಿ ಜೊತೆ ಮಾತನಾಡಿದ ಭರತ್, ನಾಲ್ಕನೇ ಎಸೆತದಲ್ಲಿ ನಾನು ಸಿಂಗಲ್ ತೆಗೆದು ನಿಮಗೆ ಸ್ಟ್ರೈಕ್ ನೀಡಲಾ ಎಂದು ಕೇಳಿದಾಗ, ಮ್ಯಾಕ್ಸವೆಲ್, ಬೇಡ ನಿನ್ನ ಬಳಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವಿದೆ. ಖಂಡಿತವಾಗಿಯೂ ನೀನು ಯಶಸ್ವಿಯಾಗುತ್ತಿಯಾ ಎಂದು ಹುರಿದುಂಬಿಸಿದರಂತೆ. ಆದರೇ ನಾಲ್ಕನೇ ಎಸೆತದಲ್ಲಿ ರನ್ ಗಳಿಸಲು ಭರತ್ ವಿಫಲರಾದರು. ಐದನೇ ಎಸೆತದಲ್ಲಿ ಪುನಃ ಮ್ಯಾಕ್ಸವೆಲ್ ಗೆ ಸಿಂಗಲ್ ನೀಡಲು ಮುಂದಾದರೂ, ಅಕ್ಷರ್ ಪಟೇಲ್ ಫೀಲ್ಡಿಂಗ್ ನಲ್ಲಿ ಮಾಡಿದ ಎಡವಟ್ಟಿನಿಂದ ಭರತ್ ಎರಡು ರನ್ ತೆಗೆದುಕೊಂಡರು. ಒಂದು.ಎಸೆತದಲ್ಲಿ ಆರು ರನ್ ಗಳಿಸುವ ಅನಿವಾರ್ಯತೆಯಲ್ಲಿ ಇದ್ದಾಗ , ಭರತ್ ಬಳಿ ಬಂದ ಮ್ಯಾಕ್ಸವೆಲ್ ಬಾಲ್ ನ್ನ ಸರಿಯಾಗಿ ನೋಡಿ ಭಾರಿಸು, ಖಂಡಿತ ಯಶಸ್ವಿಯಾಗುತ್ತಿಯಾ ಎಂದು ಹೇಳಿದರಂತೆ. ಮ್ಯಾಕ್ಸವೆಲ್ ಮಾತಿನ ಪ್ರೇರಣೆಯಿಂದ ಕೊನೆಯ ಬಾಲ್ ನಲ್ಲಿ ಸಿಕ್ಸ್ ಹೊಡೆದು ತಂಡವನ್ನ ಗೆಲ್ಲಿಸುವಲ್ಲಿ ಸಾಧ್ಯವಾಯಿತು ಎಂದು ಹೇಳಿದರು.

ಏಲಿಮಿನೆಟರ್ ಪಂದ್ಯ ಸೋಮವಾರ ಶಾರ್ಜಾದಲ್ಲಿ ನಡೆಯಲಿದ್ದು ಆರ್ಸಿಬಿ ತಂಡ ಕೆಕೆಆರ್ ತಂಡವನ್ನ ಎದುರಿಸಲಿದೆ. ಇತ್ತ ಭಾನುವಾರ ನಡೆಯಲಿರುವ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ತಂಡ ಚೆನ್ನೈ ತಂಡವನ್ನ ಎದುರಿಸಲಿದೆ. ಈ ಸಲವಾದರೂ ಆರ್ಸಿಬಿ ತಂಡ ಕಪ್ ಗೆಲ್ಲಲಿದೆ ಎಂಬ ಆಸೆಗೆ ಸೋಮವಾರ ರಾತ್ರಿ ಉತ್ತರ ಸಿಗಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.