ಆರ್ಸಿಬಿ ಸೋಲಿನ ಸರಪಳಿಯಿಂದ ಹೊರಬಂದು ಗೆಲುವು ಪಡೆಯುತ್ತಿರುವ ಹಿಂದಿರುವ ಕಾರಣವನ್ನು ತಿಳಿಸಿದ ವಿರಾಟ್, ಏನಂತೆ ಗೊತ್ತೇ??
ಆರ್ಸಿಬಿ ಸೋಲಿನ ಸರಪಳಿಯಿಂದ ಹೊರಬಂದು ಗೆಲುವು ಪಡೆಯುತ್ತಿರುವ ಹಿಂದಿರುವ ಕಾರಣವನ್ನು ತಿಳಿಸಿದ ವಿರಾಟ್, ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ದುಬೈ,ಅಬುಧಾಬಿ,ಯು.ಎ.ಇ ಯಲ್ಲಿ ನಡೆಯುತ್ತಿರುವ ಐಪಿಎಲ್ ನ ಮುಂದುವರಿಯುತ್ತಿರುವ ಚರಣದಲ್ಲಿ ಆರ್ಸಿಬಿ ತಂಡ ಮೊದಲೇ ಪಂದ್ಯದಲ್ಲೇ ಕೆಕೆಆರ್ ತಂಡದ ವಿರುದ್ದ ಹೀನಾಯ ಸೋಲಿನಿಂದ ಆರಂಭಿಸಿದ ಕಾರಣಕ್ಕೆ, ಹಲವಾರು ಜನ ಆರ್ಸಿಬಿ ತಂಡ ತನ್ನ ಹಳೇಯ ಫಾರ್ಮ್ ಗೆ ಮರಳಿದೆ ಎಂದು ಟ್ರೋಲ್ ಮಾಡಲು ಶುರು ಮಾಡಿದರು. ನಂತರದ ಪಂದ್ಯದಲ್ಲಿ ಚೆನ್ನೈ ತಂಡದ ವಿರುದ್ದ ಉತ್ತಮ ಆರಂಭ ಕಂಡಿತಾದರೂ, ಮಧ್ಯಮ ಕ್ರಮಾಂಕ ದಯನೀಯ ವೈಫಲ್ಯ ಕಂಡಿತು. ನಂತರ ಬೌಲಿಂಗ್ ನಲ್ಲಿಯೂ ಸಹ ನಿಸ್ತೇಜ ಪ್ರದರ್ಶನ ನೀಡಿದ ಕಾರಣ ಸಾಂಪ್ರದಾಯಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ ಸೋಲಿಗೆ ಶರಣಾಗಿತ್ತು.
ನಂತರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ದ ಸಂಘಟಿತ ಪ್ರದರ್ಶನ ನೀಡಿದ ಆರ್ಸಿಬಿ ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಿತು. ನಂತರ ನಡೆದ ರಾಜಸ್ತಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿಯೂ ಸಹ ಎಲ್ಲಾ ವಿಭಾಗದಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಬರೋಬ್ಬರಿ ಏಳು ವಿಕೇಟ್ ಮೂಲಕ ಜಯಿಸಿತು, ಇನ್ನು ಪಂಜಾಬ್ ವಿರುದ್ದವೂ ಕೂಡ ಗೆಲುವು ಕಂಡಿದೆ.. ಆರ್ಸಿಬಿ ತಂಡದ ಈ ಅದ್ಭುತ ಕಮ್ ಬ್ಯಾಕ್ ಬಗ್ಗೆ ಕೊನೆಗೂ ನಾಯಕ ವಿರಾಟ್ ಕೊಹ್ಲಿ , ಆರ್ಸಿಬಿ ತಂಡದ ರಹಸ್ಯದ ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ.
ಇದೀಗ ಮಾತನಾಡಿದ ವಿರಾಟ್ ನಾವು ನಿರಂತರವಾಗಿ ವಿಕೇಟ್ ಗಳನ್ನ ತೆಗೆಯಲು ನೋಡುತ್ತಿದ್ದೆವೆ. ನಿರಂತರವಾಗಿ ವಿಕೇಟ್ ತೆಗೆಯುವುದರಿಂದ ಬ್ಯಾಟ್ಸಮನ್ ಗಳ ಮೇಲೆ ವಿಪರೀತ ಟೆನ್ಶನ್ ಹೆಚ್ಚಾಗುತ್ತದೆ. ಆಗ ಬೌದಾರಿ ಗಳಿಸಲು ಯೋಚಿಸುತ್ತಾರೆ. ಈ ತಂತ್ರವನ್ನೇ ನಾವು ಮುಂಬೈ, ಪಂಜಾಬ್ ಹಾಗೂ ರಾಜಸ್ತಾನದ ವಿರುದ್ದ ಉಪಯೋಗಿಸಿದೆವು. ನಮ್ಮ ಬೌಲರ್ ಗಳು ಉತ್ತಮವಾಗಿ ಯೋಜನೆಯನ್ನ ರೂಪಿಸಿದರು. ಹಾಗಾಗಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧ್ಯವಾಯಿತು ಎಂದು ಹೇಳಿದರು. ಈಗಾಗಲೇ ಎಂಟು ಪಂದ್ಯಗಳಲ್ಲಿ ಗೆಲ್ಲುವ ಮೂಲಕ 16 ಅಂಕಗಳಿಸಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಎರಡು ಪಂದ್ಯಗಳು ಆಡಬೇಕಿದ್ದು, ಎರಡನ್ನು ಜಯಿಸುವ ಉದ್ದೇಶವನ್ನು ಹೊಂದಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.