ಯಾರನ್ನಾದರೂ ಕೈ ಬಿಡಿ, ಆದರೆ ಈ ಕನ್ನಡಿಗನಿಗೆ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿ ಎಂದ ಸೆಹ್ವಾಗ್, ಯಾರು ಗೊತ್ತೇ??

ಯಾರನ್ನಾದರೂ ಕೈ ಬಿಡಿ, ಆದರೆ ಈ ಕನ್ನಡಿಗನಿಗೆ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿ ಎಂದ ಸೆಹ್ವಾಗ್, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಇದೇ ಅಕ್ಟೋಬರ್ 23 ರಿಂದ ನಡೆಯುತ್ತಿರುವುದು ನಿಮಗೆಲ್ಲಾ ತಿಳಿದಿರುವ ವಿಷಯ. ಭಾರತ ವಿಶ್ವಕಪ್ ಗೆ ತಂಡ ಪ್ರಕಟಿಸಿದಾಗ ಹಲವಾರು ಆಶ್ಚರ್ಯಗಳು ಕಂಡು ಬಂದಿದ್ದವು. ಶಿಖರ್ ಧವನ್, ಯುಜವೇಂದ್ರ ಚಾಹಲ್ ಮುಂತಾದವರಿಗೆ ಸ್ಥಾನ ಕಲ್ಪಿಸದೇ ಅನನುಭವಿ ಇಶಾನ್ ಕಿಶನ್ ಹಾಗೂ ರಾಹುಲ್ ಚಾಹರ್ ರವರಿಗೆ ಸ್ಥಾನ ಸಿಕ್ಕಿತ್ತು.ಇದು ಹಲವರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೇ ತಂಡದಲ್ಲಿ ಸ್ಥಾನ ಪಡೆದುಕೊಂಡ ನಾಲ್ವರಿಂದ ಐದು ಆಟಗಾರರು ಸದ್ಯ ಫಾರ್ಮ್ ಕೊರತೆಯಿಂದ ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡುತ್ತಿದ್ದಾರೆ.

ಅಂತಹವರ ಬದಲು ಸದ್ಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕೆಲವು ಆಟಗಾರರನ್ನ ಬದಲಾಯಿಸುವುದು ಒಳಿತೆಂದು ಹಿರಿಯ ಆಟಗಾರರು ಆಗ್ರಹಿಸಿದ್ದರು. ಈಗ ಆ ಪಟ್ಟಿಗೆ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಸಹ ಸೇರಿಕೊಂಡಿದ್ದಾರೆ. ಟಿ 20 ವಿಶ್ವಕಪ್ ತಂಡದ ಆರಂಭಿಕ ಬ್ಯಾಟ್ಸಮನ್ ಗಳ ಪಾತ್ರದ ಬಗ್ಗೆ ಮಾತನಾಡಿರುವ ಸೆಹ್ವಾಗ್ ಕೆಲವು ಹೊಸ ಸಾಧ್ಯತೆಗಳ ಬಗ್ಗೆ ಸಹ ಮಾತನಾಡಿದ್ದಾರೆ.

ಈಗ ಪ್ರಕಟಿಸಿರುವ ತಂಡದಲ್ಲಿ ಆರಂಭಿಕ ಬ್ಯಾಟ್ಸಮನ್ ಗಳಾಗಿ ಸದ್ಯ ಉತ್ತಮ ಫಾರ್ಮ್ ನಲ್ಲಿರುವ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸಬಹುದು ಎಂಬ ನೀರಿಕ್ಷೆಯಿತ್ತು. ಆದರೇ ಸದ್ಯ ಐಪಿಎಲ್ ನ ಆರೇಂಜ್ ಕ್ಯಾಪ್ ರೇಸ್ ನಲ್ಲಿರುವ ಶಿಖರ್ ಧವನ್ ರನ್ನೇ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಆಗ ಭಾರತ ತಂಡಕ್ಕೆ ಸೂಕ್ತ ಏಡಗೈ ಮತ್ತು ಬಲಗೈ ಬ್ಯಾಟ್ಸಮನ್ ಗಳ ಸಂಯೋಜನೆ ಸರಿಯಾಗುತ್ತದೆ ಎಂದು ಹೇಳಲಾಗಿತ್ತು. ಆದರೇ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸೆಹ್ವಾಗ್, ಶಿಖರ್ ಧವನ್ ಬದಲು ಆರ್ಸಿಬಿ ತಂಡದ ಆರಂಭಿಕ ಏಡಗೈ ಬ್ಯಾಟ್ಸಮನ್ ದೇವದತ್ ಪಡಿಕ್ಕಲ್ ಗೆ ಅವಕಾಶ ನೀಡಬಹುದು ಎಂದು ಹೇಳಿದ್ದಾರೆ.

ಶಿಖರ್ ಧವನ್ ಮತ್ತು ದೇವದತ್ ಪಡಿಕ್ಕಲ್ ಇಬ್ಬರನ್ನೂ ಕಂಪೇರ್ ಮಾಡಿದರೇ, ದೇವದತ್ ಉತ್ತಮವಾಗಿ ಆಡುತ್ತಾರೆ. ಪವರ್ ಪ್ಲೇ ನಲ್ಲಿ ಹೆಚ್ಚು ರನ್ ಗಳಿಸುತ್ತಾರೆ. ಇನ್ನು ಯುವಕರಾಗಿರುವ ದೇವದತ್ ಫೀಲ್ಡಿಂಗ್ ನಲ್ಲಿಯೂ ಸಹ ಉತ್ತಮವಾಗಿದ್ದಾರೆ. ಆದರೇ ಶಿಖರ್ ಧವನ್ ನಿಧಾನಗತಿಯ ಇನ್ನಿಂಗ್ಸ್ ಆರಂಭಿಸಿ, ಕೆಲವೊಮ್ಮೆ ನಿರ್ಣಾಯಕ ಹಂತದಲ್ಲಿ ವಿಕೇಟ್ ಒಪ್ಪಿಸಿಬಿಡುತ್ತಾರೆ. ಹಾಗಾಗಿ ಭಾರತ ಏಡಗೈ-ಬಲಗೈ ಸಂಯೋಜನೆ ಎದುರು ನೋಡುತ್ತಿದ್ದರೇ, ಶಿಖರ್ ಧವನ್ ಬದಲು ಕನ್ನಡಿಗ ದೇವದತ್ ಪಡಿಕ್ಕಲ್ ಗೆ ಟಿ 20 ವಿಶ್ವಕಪ್ ತಂಡದಲ್ಲಿ ಚಾನ್ಸ್ ನೀಡಿ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.