ಆರ್ಸಿಬಿ ತಂಡದ ಈ ಬೌಲರ್ ವಿಶ್ವಕಪ್ ಗೆ ಇರಲೇ ಬೇಕು ಎಂದ ಸೆಹ್ವಾಗ್, ಯಾರಂತೆ ಗೊತ್ತೇ?? ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡು ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಬ್ಬ ಆಟಗಾರ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಅಂತಹ ಆಟಗಾರನಿಗೆ ಹೆಚ್ಚು ಹೆಚ್ಚು ಅವಕಾಶ ನೀಡಬೇಕು. ಆದರೇ ಉತ್ತಮ ಆಟವಾಡುತ್ತಿರುವಾಗಲೂ, ಆತನಿಗೆ ತಂಡದಲ್ಲಿ ಸ್ಥಾನವೇ ದೊರೆಯದಿದ್ದರೇ ಅದು ಅಸಮಂಜಸ. ಅಂತಹ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಾಗಿ ಹೋಗಿವೆ. ಈಗ ಅಂತಹದೇ ಮತ್ತೊಂದು ಘಟನೆ ಬಂದಿದೆ. ಆದರೇ ಈಗ ಆ ಘಟನೆಯನ್ನು ಪ್ರಸ್ತಾಪಿಸಿರುವುದು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್.

ಹೌದು ಮುಂದಿನ ತಿಂಗಳು ದುಬೈ, ಅಬುದಾಭಿಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ತಂಡದ ಆಯ್ಕೆಯ ಬಗ್ಗೆ ಮಾತನಾಡಿರುವ ಸೆಹ್ವಾಗ್ ಈ ಪ್ರತಿಭಾವಂತ ಬೌಲರ್ ಗೆ ಏಕೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಅತ್ಯುತ್ತಮ ಫಾರ್ಮ್ ನಲ್ಲಿರುವ ಹಾಗೂ ದುಬೈ ಪಿಚ್ ಕಂಡಿಷನ್ ಗಳಿಗೆ ಉತ್ತಮವಾಗಿ ಚೆಂಡೆಸೆಯುವ ಇತನನ್ನ ತಂಡದಿಂದ ಕೈ ಬಿಟ್ಟಿದಾದರೂ ಏಕೆ ಎಂದು ಸವಾಲೆಸೆದಿದ್ದಾರೆ.

ಅಷ್ಟಕ್ಖೂ ಆ ಆಟಗಾರ ಯಾರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಬೇರಾರೂ ಅಲ್ಲ, ನಮ್ಮ ಆರ್ಸಿಬಿ ತಂಡದ ಸ್ಪಿನ್ ಬೌಲರ್ ಯುಜವೇಂದ್ರ ಚಾಹಲ್. ಹೌದು ಕಳೆದ ಭಾರಿ ಯು.ಎ.ಇ ಯಲ್ಲಿ ನಡೆದ ಐಪಿಎಲ್ ಸೀಸನ್ ನಲ್ಲಿ ಯುಜವೇಂದ್ರ ಚಾಹಲ್ ಪರ್ಪಲ್ ಕ್ಯಾಪ್ ಲಿಸ್ಟ್ ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇನ್ನು ಈ ಸೀಸನ್ ನಲ್ಲಿಯೂ ಸಹ ಉತ್ತಮವಾಗಿ ವಿಕೇಟ್ ಗಳನ್ನ ತೆಗೆದಿದ್ದಾರೆ. ಆಡಿರುವ ಐದು ಪಂದ್ಯಗಳಲ್ಲಿ ಈಗಾಗಲೇ 10 ವಿಕೇಟ್ ಪಡೆದಿದ್ದಾರೆ. ಅದಲ್ಲದೇ ಸಾಕಷ್ಟು ರನ್ ಸಹ ಬಿಟ್ಟುಕೊಟ್ಟಿಲ್ಲ.

ಆದರೇ ಇಷ್ಟೆಲ್ಲಾ ಕ್ವಾಲಿಟಿ ಇರುವ ಚಾಹಲ್ ರನ್ನ ತಂಡದಿಂದ ಏಕೆ ಕೈ ಬಿಟ್ಟಿರಿ ಎಂದು ಆಯ್ಕೆದಾರರನ್ನ ಸೆಹ್ವಾಗ್ ಪ್ರಶ್ನಿಸಿದ್ದಾರೆ. ಚಾಹಲ್ ಬದಲಿ ಆಯ್ಕೆಯಾಗಿರುವ ರಾಹುಲ್ ಚಾಹರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಮುಂಬೈ ತಂಡದ ಪರ ಆಡುತ್ತಿರುವ ಚಾಹರ್ ಮೂರು ಪಂದ್ಯಗಳಲ್ಲಿ ಸಾಕಷ್ಟು ರನ್ ನೀಡಿದ್ದಾರೆ. ಹೆಚ್ಚು ವಿಕೇಟ್ ಸಹ ಬಂದಿಲ್ಲ. ಹಾಗಾಗಿ ಟಿ 20 ತಂಡದ ಖಾಯಂ ಸದಸ್ಯ ಯುಜವೇಂದ್ರ ಚಾಹಲ್ ರನ್ನ ಮತ್ತೆ ತಂಡದೊಳಗೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಳವಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav