ನಿನ್ನೆ ಆರ್ಸಿಬಿ ಗೆಲುವಿಗೆ ಕಾರಣವಾಗಿದ್ದು ಆ ಒಂದು ಕೊಹ್ಲಿ ತಂತ್ರ ಮಾತ್ರ, ಅಷ್ಟಕ್ಕೂ ವಿರಾಟ್ ತಂತ್ರವೇನು ಗೊತ್ತೇ??
ನಿನ್ನೆ ಆರ್ಸಿಬಿ ಗೆಲುವಿಗೆ ಕಾರಣವಾಗಿದ್ದು ಆ ಒಂದು ಕೊಹ್ಲಿ ತಂತ್ರ ಮಾತ್ರ, ಅಷ್ಟಕ್ಕೂ ವಿರಾಟ್ ತಂತ್ರವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದ ಮಹತ್ವದ ಪಂದ್ಯದಲ್ಲಿ ಕೊನೆಗೂ ಬಲಿಷ್ಠ ಮುಂಬೈ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ ತಂಡ ಜಯಗಳಿಸಿತು. ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸವೆಲ್, ರವರ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಉತ್ತಮ ಮೊತ್ತಗಳಿಸಿತು. ಪ್ರತಿಯಾಗಿ ಬ್ಯಾಟಿಂಗ್ ಗೆ ಇಳಿದ ಮುಂಬೈ ತಂಡ ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಆದರೇ ಹಂತ ಹಂತವಾಗಿ ವಿಕೇಟ್ ಕಳೆದುಕೊಳ್ಳುತ್ತಾ ಅಂತಿಮವಾಗಿ ಆಲೌಟ್ ಆಗಿ ಸೋಲೋಪ್ಪಿಕೊಂಡಿತು. ಆದರೇ ಒಂದು ಹಂತದಲ್ಲಿ ಬಿಗ್ ಹಿಟ್ಟರ್ ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಕೀರನ್ ಪೋಲಾರ್ಡ್ ತಮ್ಮ ಬ್ಯಾಟಿಂಗ್ ಮೂಲಕ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿತ್ತು. ಆದರೇ ಚಾಣಾಕ್ಷ ನಾಯಕರಾದ ವಿರಾಟ್ ಕೊಹ್ಲಿ ತಮ್ಮ ಅದ್ಭುತ ಕೌಶಲ್ಯಗಳ ಮೂಲಕ ಮುಂಬೈ ತಂಡವನ್ನು ಕಟ್ಟಿಹಾಕಿದರು.
ಪಂದ್ಯ ಮುಗಿದ ನಂತರ ಹಾರ್ದಿಕ್ ಹಾಗೂ ಪೊಲಾರ್ಡ್ ವಿಕೇಟ್ ನ್ನು ಹೇಗೆ ಪಡೆದೆವು ಎಂಬ ರಣತಂತ್ರವನ್ನು ವಿವರಿಸಿದ್ದಾರೆ. 15 ನೇ ಓವರ್ ನಲ್ಲಿ ಪೋಲಾರ್ಡ್ ಹಾಗೂ ಹಾರ್ದಿಕ್ ಬ್ಯಾಟಿಂಗ್ ನಲ್ಲಿದ್ದರು. ಚಾಹಲ್ ಉತ್ತಮ ವಿಕೇಟ್ ಪಡೆದರೂ, ಸ್ಪಿನ್ ಬೌಲಿಂಗ್ ಗೆ ಉತ್ತಮ ಬ್ಯಾಟಿಂಗ್ ಮಾಡುವ ಪೋಲಾರ್ಡ್ ಹಾಗೂ ಹಾರ್ದಿಕ್ ಬಿಗ್ ಹಿಟ್ ಹೊಡೆಯುವ ಸಾಧ್ಯತೆ ಇತ್ತು. ಹಾಗಾಗಿ ನಾನು.ಡೇನಿಯಲ್ ಕ್ರಿಶ್ಚಿಯನ್ ಗೆ ಬೌಲಿಂಗ್ ನೀಡಿದೆ. ಈ ಬಗ್ಗೆ ಮ್ಯಾಕ್ಸವೆಲ್ ಮತ್ತು ಎಬಿ ಡಿ ವಿಲಿಯರ್ಸ್ ಗೆ ಕೇಳಿದೆ. ಅವರು ನಿನಗೆ ಹೇಗೆ ಅನಿಸುತ್ತದೇ ಹಾಗೆ ಮಾಡು ಅಂದರು. ಉತ್ತಮ ಬೌಲಿಂಗ್ ಮಾಡಿದ್ದ ಡೇನಿಯಲ್, ಒಂದು ಬೌಂಡರಿ ಸಹ ನೀಡಲಿಲ್ಲ. ಲೆಗ್ ಸ್ಟಂಪ್ ಗೆ ನೇರವಾಗಿ ಬೌಲ್ ಮಾಡಿ ಒತ್ತಡ ಸೃಷ್ಠಿ ಮಾಡಿದರು. ನಂತರ ಬಂದ ಹರ್ಷಲ್ ಪಟೇಲ್ ಮೊದಲ ಎಸೆತದಲ್ಲೆ ಸ್ಲೋವರ್ ಹಾಕಿ ಹಾರ್ದಿಕ್ ವಿಕೇಟ್ ಪಡೆದರು.
ನಂತರ ಎಸೆತದಲ್ಲಿ ಲೆಗ್ ಸ್ಟಂಪ್ ಗುರಿಯಾಗಿಸಿಕೊಂಡು ಎಸೆದಾಗ ಕೀರನ್ ಪೋಲಾರ್ಡ್ ಅಂದಾಜಿಸುವಲ್ಲಿ ಸಂಪೂರ್ಣ ವಿಫಲರಾದರು. ಚಾಹಲ್ ಗೆ ಬೌಲಿಂಗ್ ನೀಡಿದ್ದರೇ, ಪೋಲಾರ್ಡ್ ಮತ್ತು ಹಾರ್ದಿಕ್ ಬಿಗ್ ಹಿಟ್ ಹೊಡೆಯುವ ಸಾಧ್ಯತೆ ಇತ್ತು. ಆದರೇ ಚಾಣಾಕ್ಷ ನಾಯಕತ್ವ ತೋರಿದ ವಿರಾಟ್, ಸೂಕ್ತ ಸಮಯದಲ್ಲಿ ಸರಿಯಾದ ವಿಕೇಟ್ ಗಳನ್ನ ತೆಗೆಯುವ ಮೂಲಕ ಪಂದ್ಯ ಆರ್ಸಿಬಿ ಕಡೆ ವಾಲುವಂತೆ ಮಾಡಿದರು. ಸದ್ಯ ಆರು ಪಂದ್ಯಗಳು ಗೆದ್ದು ಹನ್ನೆರೆಡು ಪಾಯಿಂಟ್ಸ್ ಗಳಿಸಿರುವ ಆರ್ಸಿಬಿ, ಇನ್ನು ನಾಲ್ಕು ಪಂದ್ಯಗಳನ್ನ ಆಡಬೇಕಿದೆ. ಮುಂದಿನ ಪಂದ್ಯವನ್ನ ರಾಜಸ್ತಾನ ರಾಯಲ್ಸ್ ವಿರುದ್ದ ಆಡಲಿದ್ದು , ಗೆಲ್ಲುವ ಸಾಧ್ಯತೆಯಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.