ಅಕ್ಕಿಯಲ್ಲಿ ಹುಳ ಆಗಿದ್ಯಾ? ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ. ಹೆಚ್ಚೇನೂ ಬೇಡ ಸುಲಭವಾಗಿ ಪರಿಹಾರ ಕಂಡುಕೊಳ್ಳಿ.
ಅಕ್ಕಿಯಲ್ಲಿ ಹುಳ ಆಗಿದ್ಯಾ? ಈ ಸಿಂಪಲ್ ಟ್ರಿಕ್ ಟ್ರೈ ಮಾಡಿ. ಹೆಚ್ಚೇನೂ ಬೇಡ ಸುಲಭವಾಗಿ ಪರಿಹಾರ ಕಂಡುಕೊಳ್ಳಿ.
ನಮಸ್ಕಾರ ಸ್ನೇಹಿತರೇ, ಒಂದು ವರ್ಷಕ್ಕೆ ಆಗುವಷ್ಟೋ ಅಥವಾ ಅರ್ಧ ವರ್ಷಕ್ಕೆ ಸಾಕಾಗುವಷ್ಟೋ ಅಕ್ಕಿ ಹಾಗೂ ಇತರ ದವಸ ಧಾನ್ಯಗಳನ್ನು ತಂದು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವುದು ಸಾಮಾನ್ಯ ರೂಢಿ. ಹೀಗೆ ತಂದ ಅಕ್ಕಿ, ಧಾನ್ಯಗಳನ್ನು ಕೆಡದಂತೆ ಗಾಳಿಯಾಡದಂತೆ ಡಬ್ಬಗಳಲ್ಲಿ ಮುಚ್ಚಿಡಲಾಗುತ್ತದೆ. ಜೊತೆಗೆ ಶುಷ್ಕವಾದ ಸ್ಥಳಗಳಲ್ಲಿಯೂ ಇಡಲಾಗುತ್ತದೆ. ಆದರೆ ಅದೇನೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದರೂ ಕೂಡ ಕೆಲವೊಮ್ಮೆ ಅಕ್ಕಿಯಲ್ಲಿ ಹಾಗೂ ಇತರ ಬೇಳೆ ಕಾಳುಗಳ ಡಬ್ಬದಲ್ಲಿ ಹುಳ ಆಗುತ್ತದೆ. ಇದನ್ನು ತೆಗೆಯುವುದು ಅಥವಾ ಸ್ವಚ್ಛಗೊಳಿಸುವುದೇ ಒಂದು ದೊಡ್ಡ ಕೆಲಸ ಹೆಂಗಸರಿಗೆ!
ಅಕ್ಕಿಯಲ್ಲಿ ಕಂಡುಬರುವ ಕಪ್ಪುಬಣ್ಣದ ಹುಳುಗಳನ್ನು ನೀವು ನೋಡಿರಬಹುದು. ಹಳ್ಳಿ ಕಡೆಗಳಲ್ಲಿ ಇದನ್ನು ’ಅಕ್ಕಿ ಸುರಭಿ’ ಅಂತಲೂ ಕರಿತಾರೆ. ಇದನ್ನು ಸ್ವಚ್ಛಗೊಳಿಸುವುದೇ ಒಂದು ಗೋಳು. ಇದು ಸ್ವಚ್ಛಗೊಳಿಸದೇ ಅನ್ನ ಮಾಡಿ ಅದರಲ್ಲೇನಾದರೂ ಕಾಣಿಸಿಕೊಂಡರೆ ಖಂಡಿತವಾಗಿ ಯಾರೂ ಅದನ್ನು ಸೇವಿಸುವುದಿಲ್ಲ. ಹಾಗಾದರೆ ಅಷ್ಟೊಂದು ಅಕ್ಕಿ, ಕಾಳುಗಳನ್ನು ಹಾಗೆಯೇ ಹಾಳು ಮಾಡಬೇಕೇ ಎಂಬ ಆತಂಕ ನಿಮ್ಮದಾಗಿದ್ದರೆ, ಚಿಂತೆ ಬೇಡ ಇದಕ್ಕೆಲ್ಲ ಪರಿಹಾರವನ್ನು ನಾವಿಲ್ಲಿ ಹೇಳುತ್ತಿದ್ದೇವೆ. ಓದಿ.
ಅಕ್ಕಿಯಲ್ಲಿ ಹುಳು ಆಗದಂತೆ ಕಾಪಾಡಲು ಅಕ್ಕಿ ಡಬ್ಬದಲ್ಲಿ ಒಂದು ಸಣ್ಣ ಬೆಂಕಿಪೊಟ್ಟಣವನ್ನು ಹಾಕಿಡಿ. ಬೆಂಕಿ ಕಡ್ಡಿಯಲ್ಲಿರುವ ಸಲ್ಫರ್ ಅಕ್ಕಿಯಲ್ಲಿ ಹುಳ ಆಗದಂತೆ ತಡೆಯುತ್ತದೆ. ಇತರ ಧಾನ್ಯಗಳ ಡಬ್ಬಗಳಲ್ಲೂ ಕೂಡ ಹೀಗೆ ಮಾಡಬಹುದು. ಇನ್ನೊಂದು ಪರಿಹಾರ ಎಂದರೆ ಲವಂಗ. ಅಕ್ಕಿ ಪಾತ್ರೆಯಲ್ಲಿ 8-10 ಲವಂಗವನ್ನು ಹಾಕಿಡಿ. ಇದು ಅಕ್ಕಿಯಲ್ಲಿ ಹುಳುಗಳು ಬರುವುದನ್ನು ತಡೆಯುವುದು ಮಾತ್ರವಲ್ಲದೇ ಇದರ ಪರಿಮಳಕ್ಕೆ ಇತರ ಕೀಟಗಳೂ ಸಹ ಸೇರಿಕೊಳ್ಳುವುದಿಲ್ಲ. ಇನ್ನು ಬೇವಿನ ಎಲೆಗಳನ್ನು ಕೂಡ ಅಕ್ಕಿ ಡಬ್ಬಗಳಲ್ಲಿ ಹಾಕಿಡುವುದರಿಂದ ಹುಳಗಳಿಂದ ಅಕ್ಕಿ, ಹಾಗೂ ಧಾನ್ಯಗಳನ್ನ ಸಂರಕ್ಷಿಸುತ್ತದೆ. ಇಂಥ ಕ್ರಮಗಳ ಮೂಲಕ ಅಕ್ಕಿ ಹಾಗೂ ಧಾನ್ಯಗಳನ್ನು ಹುಳುಗಳು ಬರದಂತೆ ಕಾಪಾಡಬಹುದು. ಜೊತೆಗೆ ಅಕ್ಕಿಯನ್ನು ಅಥವಾ ಬೇಳೆ ಕಾಳುಗಳನ್ನು ಶುಷ್ಕವಾದ ಸ್ಥಳದಲ್ಲಿಯೇ ಗಾಳಿಯಾಡದಂತೆ ಇಡುವುದು ಅತೀ ಮುಖ್ಯ