ಮುಂದಿನ ಐಪಿಎಲ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಟಾಪ್ – 5 ಆಟಗಾರರು ಯಾರು ಗೊತ್ತೇ??

ಮುಂದಿನ ಐಪಿಎಲ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಟಾಪ್ – 5 ಆಟಗಾರರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ಮುಂದುವರಿದ ಚರಣ ಆರಂಭವಾಗಿ ಒಂದು ವಾರ ಸಹ ಕಳೆದಿಲ್ಲ. ಆದರೇ ಈಗಾಗಲೇ ಮುಂದಿನ ಐಪಿಎಲ್ ನ ಹರಾಜಿನ ಬಗ್ಗೆ ಗಮನ ಇಟ್ಟಿದೆ. ಮುಂದಿನ ಐಪಿಎಲ್ ನಲ್ಲಿ ಸಾರ್ವತ್ರಿಕ ಹರಾಜು ನಡೆಯಲಿದ್ದು, ಪ್ರತಿ ಫ್ರಾಂಚೈಸಿಗಳು ಮೂರರಿಂದ ಐವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ. ಹಾಗಾಗಿ ಮುಂದಿನ ಐಪಿಎಲ್ ಹರಾಜಿನಲ್ಲಿ ಹಲವಾರು ಆಟಗಾರರು ಬೇರೆ ಬೇರೆ ತಂಡಗಳಿಗೆ ವಲಸೆ ಹೋಗುವ ಸಾಧ್ಯತೆಯಿದೆ. ಅದಾಗಿಯೂ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗುವ ಟಾಪ್ – 5 ಆಟಗಾರರು ಈ ಕೆಳಕಂಡಂತಿದ್ದಾರೆ.

ಟಾಪ್ – 5 : ವೆಂಕಟೇಶ್ ಅಯ್ಯರ್ – ಕೆಕೆಆರ್ ತಂಡದಲ್ಲಿ ಆಡುತ್ತಿರುವ ಈ ಆಲ್ ರೌಂಡರ್ ಮೇಲೆ ಸದ್ಯ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿರುವ ವೆಂಕಟೇಶ್ ಮುಂದಿನ ಪಂದ್ಯಗಳಲ್ಲೂ ಉತ್ತಮ ಆಟ ಆಡುವ ಭರವಸೆ ಮೂಡಿಸಿದ್ದಾರೆ.

ಟಾಪ್ 4 – ಜೋಸ್ ಬಟ್ಲರ್ – ರಾಜಸ್ತಾನ ರಾಯಲ್ಸ್ ತಂಡದ ಈ ವಿಕೇಟ್ ಕೀಪರ್ ಬ್ಯಾಟ್ಸಮನ್ ಸಹ ಮುಂದಿನ ಹರಾಜಿನ ವೇಳೆ ಹೆಚ್ಚು ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆಯಿದೆ. ಆರ್ ಆರ್ ತಂಡ ಇವರನ್ನ ರಿಟೇನ್ ಮಾಡುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಟಾಪ್ 3 – ಸೂರ್ಯ ಕುಮಾರ್ ಯಾದವ್ : ಮುಂಬೈ ಫ್ರಾಂಚೈಸಿ ಇವರನ್ನ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಹಾಗಾಗಿ ಹರಾಜಿನಲ್ಲಿ ಸೂರ್ಯ ಕುಮಾರ್ ಯಾದವ್ ರೇಟು ನಾಗಾಲೋಟ ತಲುಪಬಹುದು.

ಟಾಪ್ 2 -ವರುಣ್ ಚಕ್ರವರ್ತಿ – ಕೆಕೆಆರ್ ಇವರನ್ನ ಉಳಿಸಿಕೊಳ್ಳುವ ಸಾಧ್ಯತೆ ಕಡಿಮೆ ಇರುವ ಕಾರಣ , ಚಕ್ರವರ್ತಿ ಹರಾಜಿನಲ್ಲಿ ಲಭ್ಯವಾದರೇ, ಫ್ರಾಂಚೈಸಿಗಳು ಭಾರತದ ಈ ಮಿಸ್ಟರಿ ಬೌಲರ್ ರನ್ನ ತಮ್ಮ ಕಡೆ ಸೇರಿಸಿಕೊಳ್ಳಲು ಸಾಕಷ್ಟು ಬಿಡ್ ಮಾಡುವ ಸಾಧ್ಯತೆ ಇದೆ.

ಟಾಪ್ 1 – ಕೇನ್ ವಿಲಿಯಮ್ಸನ್ – ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಲುಗಳಿಂದ ಕಂಗೆಟ್ಟ ಕಾರಣ ಹೊಸ ತಂಡವನ್ನ ರಚಿಸುವ ಸಾಧ್ಯತೆ ಇದೆ. ಹಾಗಾಗಿ ಕೇನ್ ವಿಲಿಯಮ್ಸನ್ ಹರಾಜಿಗೆ ಲಭ್ಯವಾಗುತ್ತಾರೆ. ಉತ್ತಮ ನಾಯಕನ ನೀರಿಕ್ಷೆಯಲ್ಲಿರುವ ಹಲವಾರು ಫ್ರಾಂಚೈಸಿಗಳು ಇವರನ್ನ ಖರೀದಿ ಮಾಡಲು ಸಾಕಷ್ಟು ಹಣ ವ್ಯಯಿಸಲಿವೆ. ನಿಮ್ಮ ಪ್ರಕಾರ ಯಾರು ಅತಿ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗುತ್ತಾರೆ ಎಂಬ ಅಭಿಪ್ರಾಯವನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.