ಟಿ-20 ವಿಶ್ವಕಪ್ ಆರಂಭಕ್ಕಿಂತ ಮುಂಚೆ ಭಾರತ ತಂಡಕ್ಕೆ ಶಾಕ್ – ಟೆನ್ಷನ್ ನಲ್ಲಿ ವಿರಾಟ್ – ರೋಹಿತ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ನ ದುಬೈ ಚರಣ ಅಕ್ಟೋಬರ್ 14 ಕ್ಕೆ ಮುಗಿಯಲಿದೆ. ಅದಾದ ಒಂದು ವಾರದೊಳಗೆ ಮಹತ್ವದ ವಿಶ್ವ ಟಿ 20 ಟೂರ್ನಿ ಆರಂಭವಾಗಲಿದೆ. ಅಕ್ಟೋಬರ್ 17ರಿಂದ ವಿಶ್ವಕಪ್ ಗಾಗಿ ಅರ್ಹತಾ ಪಂದ್ಯಗಳು ಸಹ ನಡೆಯಲಿವೆ. ಭಾರತ ತನ್ನ ಅಭಿಯಾನವನ್ನ ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ದ ಆಡುವ ಮೂಲಕ ಆರಂಭಿಸಲಿದೆ. ಹದಿನೈದು ಜನ ಸದಸ್ಯರು ಹಾಗೂ ಮೂವರು ಮೀಸಲು ಆಟಗಾರರನ್ನೊಳಗೊಂಡ ಸದಸ್ಯರನ್ನು ಬಿಸಿಸಿಐ ಈಗಾಗಲೇ ಘೋಷಿಸಿದೆ. ಬಹುತೇಖ ಎಲ್ಲಾ ದೇಶಗಳು ತಮ್ಮ ತಂಡವನ್ನು ಘೋಷಿಸಿವೆ.

ಈ ಮಧ್ಯೆ ಭಾರತ ತಂಡಕ್ಕೆ ಹೊಸ ಚಿಂತೆಯೊಂದು ಕಾಡುತ್ತಿದೆ. ಹೌದು ಬಹಳ ಭರವಸೆಯನ್ನಿಟ್ಟು ತಂಡಕ್ಕೆ ಆಯ್ಕೆ ಮಾಡಿದ್ದ ಇಬ್ಬರೂ ಆಟಗಾರರು ಈಗ ತಮ್ಮ ಫಾರ್ಮನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ. ಇದು ನಾಯಕ ವಿರಾಟ್ ಕೊಹ್ಲಿ ಮತ್ತು ಸಂಭವನೀಯ ನಾಯಕ ಎಂದೇ ಹೇಳಲಾಗುವ ರೋಹಿತ್ ಶರ್ಮಾ ಮತ್ತು ತಂಡದ ಮ್ಯಾನೇಜ್ ಮೆಂಟ್ ಚಿಂತೆಗೆ ಕಾರಣವಾಗಿದೆ. ಆ ಇಬ್ಬರೂ ಆಟಗಾರರು ಯಾರೆಂದರೇ ಭಾರತದ ಮಧ್ಯಮ ಕ್ರಮಾಂಕದ ಜೀವಾಳ ಎನಿಸಿದ್ದ ಸೂರ್ಯ ಕುಮಾರ್ ಯಾದವ್ ಮತ್ತು ವಿಕೇಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶನ್.

ಹೌದು ಈ ಇಬ್ಬರು ಆಟಗಾರರು ಮುಂಬೈ ಇಂಡಿಯನ್ಸ್ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ. ಇವರಿಬ್ಬರೂ ಉತ್ತಮ ಆಟವಾಡಿದ ಕಾರಣ ಮುಂಬೈ ಕಳೆದ ಭಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿತ್ತು. ಆದರೇ ದುಬೈನಲ್ಲಿ ಶುರುವಾದ ಚರಣದಲ್ಲಿ ಈ ಇಬ್ಬರೂ ಆಟಗಾರರು ತಮ್ಮ ಸಂಪೂರ್ಣ ಲಯವನ್ನ ಕಳೆದುಕೊಂಡಿದ್ದಾರೆ. ಮುಂಬೈ ಆಡಿರುವ ಎರಡು ಪಂದ್ಯಗಳಲ್ಲಿ ಇಶಾನ್ ಕಿಶನ್ ಎರಡಂಕಿ ಮುಟ್ಟಲು ತಿಣುಕಾಡಿದರೇ, ಇತ್ತ ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದ ಸೂರ್ಯ ಕುಮಾರ್ ಯಾದವ್ ಎರಡಂಕಿಯನ್ನ ಸಹ ಮುಟ್ಟಿಯೇ ಇಲ್ಲ. ಇಶಾನ್ ಕಿಶನ್ ಎರಡು ಪಂದ್ಯಗಳಿಂದ 25 ರನ್ ಗಳಿಸಿದರೇ, ಸೂರ್ಯ ಕುಮಾರ್ ಯಾದವ್ ಕೇವಲ 8 ರನ್ ಗಳಿಸಿದ್ದಾರೆ.

ಒಂದು ವೇಳೆ ಈ ಆಟಗಾರರು ವಿಶ್ವಕಪ್ ವೇಳೆಗೂ ಲಯಕ್ಕೆ ಮರಳದೇ ಇದ್ದರೇ, ಖಂಡಿತ ಭಾರತ ತಂಡದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ ಸಹ ಇನ್ನು ಒಂದೇ ಒಂದು ಐಪಿಎಲ್ ಪಂದ್ಯ ಆಡಿಲ್ಲ. ಇದು ಸಹ ಭಾರತ ತಂಡದ ಚಿಂತೆಯನ್ನ ಹೆಚ್ಚಿಸಿದೆ. ಹದಿನಾಲ್ಕು ವರ್ಷಗಳ ಬಳಿಕ ಮಹತ್ವದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದು ನಾಯಕತ್ವಕ್ಕೆ ಗುಡ್ ಬೈ ಹೇಳಬೆಕೇಂದು ಕೊಂಡಿರುವ ನಾಯಕ ಕೊಹ್ಲಿ ಮತ್ತು ರೋಹಿತ್ ಗೆ ಚಿಂತೆ ಹೆಚ್ಚುವಂತೆ ಮಾಡಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Post Author: Ravi Yadav