ನಿಂತೇ ಹೋಗಿರುವ ಶಿವಣ್ಣನ ಈ ಸಿನಿಮಾ ಈಗ ರಿಲೀಸಾದರೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದು ಗ್ಯಾರಂಟಿ, ಯಾವುದು ಗೊತ್ತೇ??

ನಿಂತೇ ಹೋಗಿರುವ ಶಿವಣ್ಣನ ಈ ಸಿನಿಮಾ ಈಗ ರಿಲೀಸಾದರೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದು ಗ್ಯಾರಂಟಿ, ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿಮಾನಿಗಳ ಮೆಚ್ಚಿನ ಶಿವಣ್ಣ. ನಮ್ಮಲ್ಲಿ ಛಲವೊಂದಿದ್ದರೆ ವಯಸ್ಸು ಯಾವ ಲೆಕ್ಕವೂ ಇಲ್ಲ ಎಂಬುವುದಕ್ಕೆ ಶಿವಣ್ಣನೇ ಸಾಕ್ಷಿ. ಈಗಲೂ ಕೂಡ ವರ್ಷವೊಂದಕ್ಕೆ ಅತೀ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡು, ಹೆಚ್ಚು ಸಿನಿಮಾಗಳನ್ನು ಮಾಡಬಲ್ಲ ಏಕೈಕ ಕನ್ನಡ ಸ್ಟಾರ್ ನಟ ಎಂದರೆ ಅದು ಶಿವಣ್ಣ ಮಾತ್ರ. ಆದರೆ ದುರಂತ ಎಂದರೆ ಸ್ಟಾರ್ ನಟರು ಅಭಿನಯಕ್ಕೆ ಸಿದ್ಧರಿದ್ದರೂ ನಿರ್ದೇಶಕ ಅಥವಾ ನಿರ್ಮಾಪಕರ ಕಾರಣಕ್ಕೆ ಕೆಲವು ಚಿತ್ರಗಳು ಚಿತ್ರೀಕರಣದ ವರೆಗೂ ಮುಂದುವರೆಯುವುದೇ ಇಲ್ಲ. ಕೆಲವೊಮ್ಮೆ ಆ ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿದ್ದರೂ ಕೂಡ ಕೊನೆಗೆ ಅರ್ಧದಲ್ಲೇ ನಿಂತು ಹೋದ ಸಾಕಷ್ಟು ಉದಾಹರಣೆಗಳಿವೆ.

ಮುಹೂರ್ತ ಮುಗಿದು ಪೋಸ್ಟರ್,ಕೂಡ ಬಿಡುಗಡೆಯಾಗಿ ಕೊನೆಗೆ ತೆರೆ ಕಾಣದೇ ಇರುವ ಚಿತ್ರ ಖೆಡ್ಡ. ಶಿವರಾಜ್ ಕುಮಾರ್ ಹಾಗೂ ಹಿರಿಯ ನಿರ್ದೇಶಕ ಕೆ ವಿ ರಾಜು ಅವರ ಕಾಂಬಿನೇಶನ್ ನಲ್ಲಿ ಈ ಚಿತ್ರ ಮೂಡಿಬರಬೇಕಿತ್ತು. ಕೆ ವಿ ರಾಜು ಅವರು 80 ರ ದಶಕದ ಹೆಸರಾಂತ ನಿರ್ದೇಶಕ. ಆ ಸಮಯದಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿ ಸಿನಿ ಪ್ರಿಯರನ್ನು ರಂಜಿಸಿದ್ದವರು. ಹುಲಿಯ, ಸುಂದರಕಾಂಡ, ಯುದ್ಧಕಾಂಡ, ಬೆಳ್ಳಿ ಕಾಲುಂಗುರ, ರಾಜಧಾನಿ ಮೊದಲಾದ ಸಿನಿಮಾಗಳನ್ನು ನೀವು ಮೆಚ್ಚಿಕೊಂಡಿದ್ದರೆ ಕೆ ವಿ ರಾಜು ಅವರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಯಾಕೆಂದರೆ ಅವರ ಸಂಭಾಷಣೆ, ಚಿತ್ರಕತೆ, ನಿರೂಪಣೆ ಎಲ್ಲವೂ ಅಷ್ಟು ಅದ್ಭುತವಾಗಿರುತ್ತೆ. ಹಾಗಾಗಿ ಕೆ ವಿ ರಾಜು ಹಾಗೂ ಶಿವಣ್ಣ ಅವರ ಜೊತೆಗೂಡಿದ ಖೆಡ್ಡ ಸಿನಿಮಾ ಸೆಟ್ಟೆರಿತ್ತು.

1995ರಲ್ಲಿ ಶಿವಣ್ಣ ಅವರಿಗೆ ಸರಿಹೊಂದುವಂಥ, ಸಾಮಾಜಿಕ ಹಾಗೂ ರಾಜಕೀಯ ದುರವಸ್ಥೆಯನ್ನು ತೋರಿಸುವಂಥ ಚಿತ್ರ ಇದಾಗಿತ್ತು. ಹುಲಿಯ ಚಿತ್ರವನ್ನು ನಿರ್ಮಾಣ ಮಾಡಿದ ನಿರ್ಮಾಪಕರೇ ಈ ಚಿತ್ರಕ್ಕೂ ಕೂಡ ಬಂಡವಾಳ ಕೂಡಲು ರೆಡಿಯಾಗಿದ್ರು. ಶಿವಣ್ಣ ಅವರ ಎಕೆ 47 ಚಿತ್ರದ ಪಾತ್ರಕ್ಕೂ ಖೆಡ್ಡ ಸಿನಿಮಾ ಪಾತ್ರಕ್ಕೂ ಸಾಮ್ಯತೆ ಇದ್ದಿರಲೂ ಬಹುದು. ಆದರೆ ಹುಲಿಯಾ ಚಿತ್ರ ಅಷ್ಟು ಯಶಸ್ಸನ್ನು ಕಾಣದ ಕಾರಣ, ನಿರ್ಮಾಪಕರು ಖೆಡ್ಡದಿಂದ ದೂರ ಸರಿದ್ರು. ಆದರೆ ಈ ಚಿತ್ರ ನಿರ್ಮಾಣ ಮಾಡಬೇಕು ಎಂಬ ಅಭಿಲಾಷೆಗೆ 30 ವರ್ಷಗಳೇ ಕಳೆದ್ರೂ ಕೂಡ ಇಂದಿಗೂ ಅದೇ ನಿರೀಕ್ಷೆಯನ್ನು ಹೊಂದಿದೆ ಸಿನಿಪ್ರಿಯರಲ್ಲಿ. ಇಂದಿಗೂ ಶಿವಣ್ಣ ಹಾಗೂ ಕೆ ವಿ ರಾಜು ಕಾಂಬಿನೇಶನ್ ನಲ್ಲಿ ಈ ಖೆಡ್ಡ ಚಿತ್ರ ತೆರೆಗೆ ಬಂದ್ರೆ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯೋದು ಗ್ಯಾರಂಟಿ.