ಅಂದು ನಂಬರ್ 1 ಸ್ಟಾರ್ ಗಳಾಗಿ ಇಂದು ಯಶಸ್ಸಿಗಾಗಿ ಕಾಯುತ್ತಿರುವ ನಟರು ಯಾರ್ಯಾರು ಗೊತ್ತೇ??
ಅಂದು ನಂಬರ್ 1 ಸ್ಟಾರ್ ಗಳಾಗಿ ಇಂದು ಯಶಸ್ಸಿಗಾಗಿ ಕಾಯುತ್ತಿರುವ ನಟರು ಯಾರ್ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಿತ್ರರಂಗ ಎನ್ನುವುದು ನಿಂತ ನೀರಲ್ಲ ಪರಿಸ್ಥಿತಿಗೆ ಹಾಗೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ಅಂದಿನ ಕಾಲದಲ್ಲಿ ನಂಬರ್1 ನಟರಾಗಿದ್ದ ಅಂತಹ ಹಲವಾರು ಸ್ಟಾರ್ ಗಳು ಈಗ ಕೆಳಮಟ್ಟಕ್ಕೆ ಹೋಗಿದ್ದಾರೆ. ಹೌದು ಸ್ನೇಹಿತರು ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ರಾಜರಂತೆ ಮೆರೆದಿದ್ದ ಹಲವಾರು ನಟರು ಹಿಂದಿನ ಕಾಲದಲ್ಲಿ ಒಂದೊಳ್ಳೆ ಸೂಪರ್ ಹಿಟ್ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಹೌದು ಸ್ನೇಹಿತರೆ ಇಂಡಸ್ಟ್ರಿ ಅನ್ನುವುದು ಯಾರಪ್ಪನ ಸ್ವತ್ತು ಅಲ್ಲ ಇಲ್ಲಿ ಜನರು ಮೆಚ್ಚಿದವರ ಮಹಾರಾಜನಾಗಿ ಮರೆಯುತ್ತಾರೆ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಇನ್ನು ಇಂದಿನ ವಿಚಾರದಲ್ಲಿ ಹಿಂದಿ ರಾಜರಾಗಿ ಮೆರೆದು ಇಂದು ಮತ್ತೊಮ್ಮೆ ಪಟ್ಟವನ್ನು ಗೆಲ್ಲಲು ಒದ್ದಾಡುತ್ತಿರುವ ನಟರು ಯಾರು ಎಂಬುದರ ಕುರಿತಂತೆ ನಾವು ಇಂದಿನ ಈ ವಿಷಯದಲ್ಲಿ ಸಂಪೂರ್ಣ ವಿವರವಾಗಿ ಹೇಳುತ್ತೇನೆ ತಪ್ಪದೇ ಕೊನೆಯವರೆಗೂ ಓದಿ.
ಗೋಲ್ಡನ್ ಸ್ಟಾರ್ ಗಣೇಶ್ ನಮಸ್ಕಾರ ನಮಸ್ಕಾರ ನಮಸ್ಕಾರ ಅಂತ ಕಾಮಿಡಿ ಟೈಮ್ ನಿಂದ ಬಂದಂತಹ ಗೋಲ್ಡನ್ ಸ್ಟಾರ್ ಗಣೇಶ್ ರವರು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚೆಲ್ಲಾಟ ಅದಾದನಂತರ ಮುಂಗಾರುಮಳೆ ದಕ್ಷಿಣ ಭಾರತ ಚಿತ್ರರಂಗದ ಮೊದಲ 50 ಕೋಟಿ ಕಲೆಕ್ಷನ್ ಮಾಡಿದಂತಹ ಚಿತ್ರವಾಗಿ ಖ್ಯಾತಿಯನ್ನು ಪಡೆದಿತ್ತು. ಇದಾದನಂತರ ಹುಡುಗಾಟ ಚೆಲುವಿನ ಚಿತ್ತಾರ ಗಾಳಿಪಟ ಹೀಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಚಿತ್ರಗಳನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡ ಚಿತ್ರರಂಗಕ್ಕೆ ನೀಡುತ್ತಾರೆ ಹಾಗೂ ತಮ್ಮ ಮಾರ್ಕೆಟ್ ವ್ಯಾಲ್ಯೂ ಕೂಡ ನೆಕ್ಸ್ಟ್ ಲೆವೆಲ್ಲಿಗೆ ಕೊಂಡೊಯ್ಯುತ್ತಾರೆ.
ಆ ಕಾಲದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಎಂದರೆ ರಾಜ್ಯಾದ್ಯಂತ ಪ್ರೇಕ್ಷಕರಲ್ಲಿ ವಿಭಿನ್ನವಾದ ಕ್ರೇಜ್ ಇತ್ತು. ಇದಾದ ನಂತರ ಅವರು ತೆಗೆದುಕೊಂಡ ಸಿನಿಮಾ ಹಾಗೂ ಕಥೆಗಳ ಆಯ್ಕೆ ಕನ್ನಡ ಪ್ರೇಕ್ಷಕರಲ್ಲಿ ಅವರ ಜನಪ್ರಿಯತೆಯನ್ನು ಅದೇ ಮಟ್ಟಕ್ಕೆ ಉಳಿಸಿಕೊಳ್ಳುವುದರಲ್ಲಿ ವಿಫಲವಾಯಿತು. ಇದಾದ ನಂತರ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಕೂಡ ಅಷ್ಟರಮಟ್ಟಿಗೆ ಯಶಸ್ಸಾಗಲಿಲ್ಲ ಮುಂದಿನ ದಿನಗಳಲ್ಲಿ ಅವರು ಕಂಬ್ಯಾಕ್ ಮಾಡಬಹುದೆಂಬ ನಿರೀಕ್ಷೆ ಇದೆ.
ಇಮ್ರಾನ್ ಹಶ್ಮಿ ಬಾಲಿವುಡ್ ಚಿತ್ರರಂಗಕ್ಕೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಆಗಮಿಸಿದ್ದ ಅವರು ತಮ್ಮ ಎರಡನೇ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಾರೆ. 2004 ರಿಂದ ಪ್ರಾರಂಭ ವಾದಂತಹ ಇಮ್ರಾನ್ ಹಶ್ಮಿ ಯರ ಬಾಲಿವುಡ್ನಲ್ಲಿ 2008 ರ ವರೆಗೂ ಕೂಡ ಯಾವ ಹೀರೋಗೂ ಕೂಡ ಬಗ್ಗದೆ ಮುನ್ನುಗ್ಗಿ ಸಾಗಿತ್ತು. 90ರ ದಶಕದ ಪಡ್ಡೆಹೈಕಳ ಫೇವರೆಟ್ ನಟನಾಗಿದ್ದ ಇಮ್ರಾನ್ ಹಶ್ಮಿ ಅವರು ತಮ್ಮ ರೋಮ್ಯಾಂಟಿಕ್ ಸಾಂಗ್ ಗಳಿಂದಾಗಿ ದೇಶದಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದರು. ಇದಾದ ನಂತರ ಹಲವಾರು ಚಿತ್ರಗಳು ಯಶಸ್ಸು ಕಂಡರು ಕೂಡ ವಿಂಟೇಜ್ ಇಮ್ರಾನ್ ಹಶ್ಮಿ ಅವರ ಇಮೇಜ್ ಗೆ ಯಾವುದು ಕೊಡು ಸರಿ ಸಾಟಿ ಆಗಿರಲಿಲ್ಲ. ಇನ್ನು ಈಗ ಸಲ್ಮಾನ್ ಖಾನ್ ನಟನೆಯ ಟೈಗರ್ 3 ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದು ಈ ಚಿತ್ರ ಅವರಿಗೆ ಉತ್ತಮ ಕಂಬ್ಯಾಕ್ ನೀಡಬಹುದೇ ಎಂಬ ನಿರೀಕ್ಷೆ ಇದೆ.
ರವಿತೇಜ ಟಾಲಿವುಡ್ ಚಿತ್ರರಂಗದ ಮಾಸ್ ಮಹಾರಾಜ ಎಂದೇ ಖ್ಯಾತರಾಗಿರುವ ರವಿತೇಜ ಅವರು ಕೂಡ ಒಂದು ಕಾಲದಲ್ಲಿ ಭದ್ರ ಚಿತ್ರದ ಮೂಲಕ ತಮ್ಮ ಯಶಸ್ಸಿನ ಪ್ರಾರಂಭವನ್ನು ಶುರುಮಾಡಿ ಅದಾದ ನಂತರ ಹಲವಾರು ಚಿತ್ರಗಳನ್ನು ಭರ್ಜರಿಯಾಗಿ ನೀಡಿದ್ದರು. ಇನ್ನು ಇವರು ನಟಿಸಿರುವ ವಿಕ್ರಮಾರ್ಕುಡು ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ಹಲವಾರು ಭಾಷೆಗಳಲ್ಲಿ ರಿಮೇಕ್ ಆಗಿ ಸಾಕಷ್ಟು ಯಶಸ್ಸನ್ನು ಕಂಡಿದೆ. ಸದ್ಯಕ್ಕೆ ಹಲವಾರು ಫ್ಲಾಪ್ ಚಿತ್ರಗಳ ನಂತರ ರವಿತೇಜ ರವರ ಮಾರ್ಕೆಟ್ ಕೆಳಗೆ ಬಿದ್ದಿದ್ದು ಮುಂದಿನ ದಿನಗಳಲ್ಲಿ ಅವರು ಯಶಸ್ವಿಯಾಗಲೆಂದು ಹಾರೈಸೋಣ.
ಸೂರ್ಯ ತಮಿಳು ಚಿತ್ರರಂಗದಲ್ಲಿ ಯಾವುದೇ ಪಾತ್ರವನ್ನು ಕೂಡ ನಿರ್ವಹಿಸಬಲ್ಲ ನಟ ಎಂದರೆ ಸೂರ್ಯ. ಹೌದು ಸ್ನೇಹಿತರೆ ಸೂರ್ಯ ರವರ ಸಿಂಗಂ ಸರಣಿ ಚಿತ್ರಗಳು ಎಷ್ಟು ಫೇಮಸ್ ಆಗಿದೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ ಕನ್ನಡಿಗರು ಕೂಡ ಬ್ಲಾಕ್ ನಲ್ಲಿ ಟಿಕೆಟ್ ತೆಗೆದುಕೊಂಡು ನೋಡಿದಂತಹ ಚಿತ್ರ ಅದು. ಆದರೆ ಅದಾದ ನಂತರ ಹಲವಾರು ಚಿತ್ರಗಳಲ್ಲಿ ವಿಫಲತೆಯನ್ನು ಕಂಡು ಗೆಲುವಿಗಾಗಿ ಕಾಯುತ್ತಿದ್ದರು. ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಸೂರಾರೈ ಪೊಟ್ರು ಚಿತ್ರ ಅವರಿಗೆ ಕಳೆದುಕೊಂಡಿದ್ದ ಸ್ಟಾರ್ ಗಿರಿ ಹಾಗೂ ಯಶಸ್ಸನ್ನು ತಂದುಕೊಟ್ಟಿದೆ. ಇದನ್ನು ಅವರು ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸೋಣ.