ಪಿ.ವಿ ಸಿಂಧು ರವರ ಬಯೋಪಿಕ್ ಸಿನಿಮಾಗೆ ಈ ನಟಿ ಆಯ್ಕೆ ಮಾಡಿ ಎಂದ ಸಿಂಧು, ಬೇಡವೇ ಬೇಡ ಎಂದ ನೆಟ್ಟಿಗರು, ಯಾರು ಆ ನಟಿ ಗೊತ್ತೇ??
ಪಿ.ವಿ ಸಿಂಧು ರವರ ಬಯೋಪಿಕ್ ಸಿನಿಮಾಗೆ ಈ ನಟಿ ಆಯ್ಕೆ ಮಾಡಿ ಎಂದ ಸಿಂಧು, ಬೇಡವೇ ಬೇಡ ಎಂದ ನೆಟ್ಟಿಗರು, ಯಾರು ಆ ನಟಿ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪಿ.ವಿ.ಸಿಂಧು ಭಾರತದ ಪ್ರಖ್ಯಾತ ಬ್ಯಾಡ್ಮಿಂಟನ್ ತಾರೆ. ಹೈದರಾಬಾದ್ ನ ಈ ಸುಂದರಿ ಸತತ ಎರಡು ಒಲಂಪಿಕ್ಸ್ ಗಳಲ್ಲಿ ಭಾರತಕ್ಕೆ ಪದಕ ಗೆಲ್ಲಿಸಿಕೊಟ್ಟ ತಾರೆ. ಕಳೆದ ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದ ಸಿಂಧು, ಈ ಭಾರಿಯ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಭ್ರಮಕ್ಕೆ ಡಬಲ್ ಸಂತೋಷ ನೀಡಿದರು. ಈ ಮಧ್ಯೆ ಭಾರತದ ಎಲ್ಲಾ ಕ್ರೀಡಾಪಟುಗಳ ಜೀವನ ಚರಿತ್ರೆಗಳ ಬಯೋಪಿಕ್ ಸಿನಿಮಾಗಳಾಗಿ ಬರತೊಡಗಿದವು.
ಮಹೇಂದ್ರ ಸಿಂಗ್ ಧೋನಿ ಪಾತ್ರವನ್ನ ಸುಶಾಂತ್ ಸಿಂಗ್ ರಜಪೂತ್, ಮೇರಿ ಕೋಮ್ ಪಾತ್ರವನ್ನು ಪ್ರಿಯಾಂಕಾ ಚೋಪ್ರಾ, ಸೈನಾ ನೆಹ್ವಾಲ್ ಪಾತ್ರವನ್ನು ಪರಿಣಿತಿ ಚೋಪ್ರಾ, ಹೀಗೆ ಸಾಲು ಸಾಲು ಪ್ರಸಿದ್ಧ ನಟರು ಬಯೋಪಿಕ್ ಗಳಲ್ಲಿ ತೊಡಗಿದರು. ಇದೇ ವೇಳೆ ನಿರೂಪಕರು, ಪಿ.ವಿ.ಸಿಂಧುರವರ ಜೀವನ ಚರಿತ್ರೆ ಸಹ ಬಯೋಪಿಕ್ ಆಗಬೇಕು ಎಂದು ಕೇಳಿದ್ದರು. ಅದಲ್ಲದೇ ತಮ್ಮ ಪಾತ್ರವನ್ನು ಯಾವ ನಟಿ ನಟಿಸಬೇಕು ಎಂದು ನಿರೂಪಕರು ಪಿ.ವಿ.ಸಿಂಧುಗೆ ಕೇಳಿದಾಗ, ಪಿ.ವಿ.ಸಿಂಧು ಒಬ್ಬ ನಟಿಯ ಹೆಸರು ಹೇಳಿದ್ದರು. ಆದರೇ ಆ ವಿಷಯ ವೈರಲ್ ಆದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಪಾತ್ರಕ್ಕೆ ಆ ನಟಿ ಬೇಡವೇ ಬೇಡ ಎಂಬ ವರಾತೆ ತೆಗೆದಿದ್ದರು.
ಅಷ್ಟಕ್ಕೂ ಆ ನಟಿ ಯಾರು ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಬೇರೆ ಯಾರೂ ಅಲ್ಲ, ಕನ್ನಡತಿ ಸುಂದರಿ, ದೀಪಿಕಾ ಪಡುಕೋಣೆ. ಹೌದು ಪಿ.ವಿ.ಸಿಂಧು , ತಮ್ಮ ಬಯೋಪಿಕ್ ನ ಪಾತ್ರವನ್ನು ದೀಪಿಕಾ ಪಡುಕೋಣೆಯವರು ನಿರ್ವಹಿಸಬೇಕೆಂದು ಹೇಳಿದ್ದರು. ನಿರ್ದೇಶಕರು ಸಹ ಒಪ್ಪಿದ್ದರು. ಆದರೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು, ಆ ಪಾತ್ರವನ್ನ ದೀಪಿಕಾ ಪಡುಕೋಣೆ ನಟಿಸುವುದು ಬೇಡವೇ ಬೇಡ ಎಂಬ ಅಭಿಯಾನ ಜೋರಾಗಿದೆ. ಒಟ್ಟಿನಲ್ಲಿ ಪಿ.ವಿ.ಸಿಂಧುರವರ ಬಯೋಪಿಕ್ ಹೆಚ್ಚು ಕಡಿಮೆ ಸೆಟ್ಟೇರುವುದು ಬಹುತೇಖ ಖಚಿತವಾಗಿದೆ. ಸಿಂಧುರವರ ಪಾತ್ರವನ್ನ ಯಾವ ನಟಿ ನಿರ್ವಹಿಸುತ್ತಾರೆಂದು ಇನ್ನು ನಿರ್ಧಾರವಾಗಿಲ್ಲ. ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆ ಅಥವಾ ಕತ್ರಿನಾ ಕೈಫ್ ಅಥವಾ ಲಿಯಾ ಭಟ್ ನಟಿಸುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.