ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಯಶ್ ಬೇಡ ಎಂದು ಕೈ ಬಿಟ್ಟ ಚಿತ್ರ ಮಾಡಿದ ಸೈಫ್ ಆಲಿ ಖಾನ್, ಸೋತು ಸುಣ್ಣವಾಗಿದ್ದು ಹೇಗೆ ಗೊತ್ತೇ?? ಯಾವ ಚಿತ್ರ ಗೊತ್ತೇ??

5

ನಮಸ್ಕಾರ ಸ್ನೇಹಿತರೇ ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗದಲ್ಲಿ ನಡೆದು ಬಂದಂತಹ ಹಾದಿ ಎಲ್ಲರಿಗೂ ಸ್ಪೂರ್ತಿದಾಯಕ ವಾದದ್ದು ಎಂಬುದು ನಿಮಗೆಲ್ಲಾ ಗೊತ್ತಿದೆ ಸ್ನೇಹಿತರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅವಕಾಶವಿಲ್ಲದ ಅಲೆದಾಡುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ರವರು ಈಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ‌. ಹೌದು ಸ್ನೇಹಿತರೆ ಯಶ್ ರವರು ಮೊದಲು ಕಿರುತೆರೆಯ ವಾಹಿನಿಯ ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ನಂತರ ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಟನಾಗಿ ಪಾದರ್ಪಣೆ ಮಾಡುತ್ತಾರೆ.

ನಾಯಕನಟನಾಗಿ ಪಾದರ್ಪಣೆ ಮಾಡಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಅವಮಾನಗಳು ತಿರಸ್ಕಾರಗಳು ಬರುತ್ತಿದ್ದವು. ಆದರೆ ರಾಕಿಂಗ್ ಸ್ಟಾರ್ ಯಶ್ ರವರು ಅದನ್ನೆಲ್ಲ ಮೆಟ್ಟಿನಿಂತು ತಮ್ಮ ಪರಿಶ್ರಮ ಹಾಗೂ ಪ್ರತಿಭೆ ಮೂಲಕ ಯಶಸ್ಸಿನ ಉತ್ತುಂಗ ಏರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದಂತಹ ಕೆಜಿಎಫ್ ಚಿತ್ರದ ನಂತರ ಯಶ್ ರವರ ಮಾರ್ಕೆಟ್ಟು ಊಹೆಗೂ ಮೀರಿ ಎಲ್ಲಕಡೆ ಹರಡಿದೆ. ಹೌದು ಸ್ನೇಹಿತರೆ ಈ ಚಿತ್ರದ ಮೂಲಕ ಕೇವಲ ಯಶ್ ರವರು ಮಾತ್ರವಲ್ಲದೆ ಇಡೀ ಕನ್ನಡ ಚಿತ್ರರಂಗ ಕೂಡ ದೇಶದಾದ್ಯಂತ ತನ್ನನ್ನು ತಾನು ಸಾಬೀತು ಪಡಿಸಿಕೊಂಡಿದೆ ಎಂದು ಹೇಳಬಹುದಾಗಿದೆ.

ನಿಮಗೆ ಒಂದು ವಿಷಯ ಗೊತ್ತಾ ಸ್ನೇಹಿತರೆ ಕೆಜಿಎಫ್ ಚಿತ್ರದ ನಂತರ ಯಶ್ ಅವರಿಗೆ ಬಾಲಿವುಡ್ ನಿಂದ ಹಲವಾರು ಆಫರ್ ಗಳು ಬರಲಾರಂಭಿಸಿದವು. ಇದರಲ್ಲಿ ಒಂದು ಚಿತ್ರವನ್ನು ಯಶ್ ರವರು ತಿರಸ್ಕರಿಸಿದ್ದರು.ಆ ಚಿತ್ರವನ್ನು ಬಾಲಿವುಡ್ ನ ಖ್ಯಾತ ನಟ ಸೈಫ್ ಅಲಿ ಖಾನ್ ರವರು ಮಾಡಿ ವಿಫಲರಾಗಿದ್ದರು. ಹೌದು ಸ್ನೇಹಿತರೇ ಚಿತ್ರ ಯಾವುದು ಎಂದು ನಾವು ನಿಮಗೆ ಹೇಳುತ್ತೇವೆ ಬನ್ನಿ. ಗೆಳೆಯರೇ 2019 ರಲ್ಲಿ ಲಾಲ್ ಕಪ್ತಾನ್ ಎಂಬ ಚಿತ್ರ ಯಶ್ ರವರಿಗೆ ಹುಡುಕಿಕೊಂಡು ಬಂದಿತ್ತು. ಆದರೆ ಚಿತ್ರದ ಪಾತ್ರ ಹಾಗೂ ಕಥೆ ಇಷ್ಟವಾಗದಿದ್ದ ರಿಂದ ಯಶ್ ರವರು ಈ ಚಿತ್ರವನ್ನು ಮಾಡಲಿಲ್ಲ. ಇನ್ನು ಚಿತ್ರವನ್ನು ಸೈಫ್ ಅಲಿ ಖಾನ್ ರವರು ಮಾಡುತ್ತಾರೆ ಇದರಲ್ಲಿ ಒಂದು ಅಗೋರಿಯ ಪಾತ್ರವನ್ನು ಸೈಫ್ ಅಲಿ ಖಾನ್ ರವರು ನಿರ್ವಹಿಸುತ್ತಾರೆ. ಆದರೆ ಇದು ಬಾಕ್ಸಾಫೀಸ್ ನಲ್ಲಿ ವಿಫಲವಾಗುತ್ತದೆ.